ರೈಲಿಗೆ ತಲೆ ಕೊಟ್ಟು ಎಸ್ ಡಿಎಂ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು | ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಯಾದ ಮೃತದೇಹ

ಆತನಿಗೆ ಅದೇನು ಸಂಕಷ್ಟ ಎದುರಾಗಿತ್ತೋ ಏನು ರೈಲನ್ನೇ ತನ್ನ ಅಂತಿಮ ಬಂಡಿಯಾಗಿಸಿ ಇಹಲೋಕ ತ್ಯಜಿಸಿದ. ಹೌದು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ
ಶರಣಾಗಿರುವ ಘಟನೆ ನಡೆದಿದೆ.

ಮುಗ್ವಾ ಹಳಗೇರಿ ಮೂಲದ ನಿವಾಸಿ ವಿಶಾಲ ಗೌಡ (17)ಆತ್ಮಹತ್ಯೆಗೆ ಶರಣಾದ ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು,ಹೊನ್ನಾವರ ಪಟ್ಟಣದ ಎಸ್ ಡಿಎಂ ಕಾಲೇಜಿನ ಪ್ರಥಮ ಪಿ ಯು ವಿದ್ಯಾರ್ಥಿಯಾಗಿದ್ದ.

ಚಲಿಸುವ ರೈಲಿಗೆ ತಲೆಯಿಟ್ಟು ವಿದ್ಯಾರ್ಥಿ ಆತ್ಮಹತ್ಯೆಗೆ
ಶರಣಾಗಿದ್ದು, ಪರಿಣಾಮವಾಗಿ ವಿದ್ಯಾರ್ಥಿಯ ದೇಹ
ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿದೆ.ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹವನ್ನು
ಸ್ಥಳಾಂತರಗೊಳಿಸಿದ್ದಾರೆ.ಇನ್ನು ಆತನ ಸಾವಿನ ಕಾರಣದ ಕುರಿತು ಮಾಹಿತಿ ತನಿಖೆಯ ಬಳಿಕ ಹೊರ ಬರಬೇಕಿದೆ.

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: