ನೋಡನೋಡುತ್ತಿದ್ದಂತೆಯೇ ಯುವತಿಯ ಪರ್ಸ್ ಎಗರಿಸಿದ ಹಕ್ಕಿ!! | ಪರ್ಸ್ ಎತ್ತಾಕೊಂಡು ಹಾರಿ ಹೋದ ಹಕ್ಕಿಯ ಹಿಂದೆ ಯುವತಿಯ ರನ್ನಿಂಗ್

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಿಲ್ಲೊಂದು ಹೊಸ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಕೆಲವೊಂದು ದೃಶ್ಯಗಳು ನಿಜಕ್ಕೂ ನಮಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗುವರಳಿಸುತ್ತವೆ. ಇಂತಹ ಲಕ್ಷಾಂತರ ವಿಡಿಯೋಗಳಿಂದ ಸಾಮಾಜಿಕ ಜಾಲತಾಣ ತುಂಬಿ ಹೋಗಿದೆ.

ಪ್ರತಿದಿನ ಒಂದಲ್ಲ ಒಂದು ಅಚ್ಚರಿ ಮೂಡಿಸುವಂತಹ ಈ ರೀತಿಯ ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇದೀಗ, ಅಂತಹದ್ದೇ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್​ ಆಗುತ್ತಿದೆ. ಹಕ್ಕಿಯೊಂದು ಯುವತಿಯ ಪರ್ಸನ್ನು ಕಸಿದು ಹಾರಿಹೋಗುವ ದೃಶ್ಯ ಎಲ್ಲೆಡೆ ಸಖತ್​ ವೈರಲ್ ಆಗುತ್ತಿದೆ. ಯುವತಿ ಕೂಡ ಹಕ್ಕಿ ಹಿಂದಿದೆಯೇ ಓಡಿಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ. ಮೊಬೈಲ್ ಫೋನ್‌ ಸೇರಿದಂತೆ ಇತರ ವಸ್ತುಗಳ ಜೊತೆಗೆ ಇಟ್ಟಿದ್ದ ಹಣದ ಪರ್ಸ್ ಕದ್ದು ಹಕ್ಕಿ ಪರಾರಿಯಾಗಿದೆ.

ನೋಡ ನೋಡುತ್ತಲೇ ಪರ್ಸ್​ ಎಗರಿಸಿದ ಹಕ್ಕಿ

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಕಾಲ ಕಳೆಯುತ್ತಿರುತ್ತಾಳೆ. ಈ ವೇಳೆ ಪರ್ಸ್ ಹಾಗೂ ಫೋನ್​ ಅನ್ನು ಪಕ್ಕದಲ್ಲಿ ಇಟ್ಟು ಆಕೆಯೊಂದಿಗೆ ಮಾತನಾಡುತ್ತಿರುತ್ತಾಳೆ. ಅಲ್ಲಿಗೆ ಅದೇ ಸಮಯಕ್ಕೆ ಎಂಟ್ರಿಯಾಗುವ ಹಕ್ಕಿ ಅವರಿಬ್ಬರ ಬಳಿ ಬರುತ್ತದೆ. ಹಕ್ಕಿಯನ್ನು ಕಂಡರೂ ಅದರೆಡೆ ಯಾವುದೇ ಗಮನ ಕೊಡದೇ ಸುಮ್ಮನಾಗಿ ಬಿಡುತ್ತಾರೆ. ಸ್ವಲ್ಪ ಹೊತ್ತಿನ ನಂತರ ಹಕ್ಕಿ ಇವರ ಸಮೀಪಕ್ಕೆ ಬಂದು ಬಿಡುತ್ತದೆ. ಆದರೂ ಅವರು ತಮ್ಮ ಪಾಡಿಗೆ ಮಾತನಾಡುವುದರಲ್ಲಿ ತೊಡಗಿಕೊಂಡಿರುತ್ತಾರೆ. ಹಕ್ಕಿ ತೀರಾ ಹತ್ತಿರ ಬಂದ ಬಳಿಕ ಯುವತಿಯ ಸ್ನೇಹಿತೆ ತನ್ನ ಮೊಬೈಲ್​ನಲ್ಲಿ ಹಕ್ಕಿಯ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾಗುತ್ತಾಳೆ. ನೋಡ ನೋಡತ್ತಿದ್ದಂತೆಯೇ ಹಕ್ಕಿ ಅಲ್ಲೇ ಹಣವಿದ್ದ ಯುವತಿಯ ಪರ್ಸ್​ ಅನ್ನು ಕಚ್ಚಿಕೊಂಡು ಹಾರಿ ಹೋಗುತ್ತೆ.

ಹೀಗೆ ಹಕ್ಕಿ ಪರ್ಸ್​ ಕದ್ದು ಹಾರಿ ಹೋಗುತ್ತಿದ್ದಂತೆಯೇ, ಪಕ್ಕದಲ್ಲಿದ್ದ ಯುವತಿ ಜೋರಾಗಿ ಕಿರುಚುತ್ತಾಳೆ. ಹಾರಿ ಹೋದ ಹಕ್ಕಿಯ ಹಿಂದೆ ಓಡಿ ಹಿಡಿಯುವ ಪ್ರಯತ್ನ ಮಾಡುತ್ತಾಳೆ. ಆದರೆ ಹಕ್ಕಿ ಬಹಳ ವೇಗವಾಗಿ ಹಾರಿ ಹೋಗಿತ್ತು. ದೃಶ್ಯವನ್ನು ಅಲ್ಲೇ ಇದ್ದವರು ಸೆರೆ ಹಿಡಿದಿದ್ದಾರೆ. ಜೊತೆಗೆ, ಈಕೆಯ ಜೊತೆಗಿದ್ದ ಯುವತಿ ಕೂಡಾ ಆತಂಕದಿಂದ ಕಿರಿಚಾಡುವುದನ್ನು ಈ ಕ್ಲಿಪ್‌ನಲ್ಲಿ ಕೇಳಬಹುದಾಗಿದೆ. ಆದರೆ ಅಷ್ಟೊತ್ತಿಗಾಗಲೇ ತಡವಾಗಿದ್ದರಿಂದ ಯುವತಿಗೆ ಪರ್ಸ್ ಸಿಗಲಿಲ್ಲ. ಇದರಿಂದ ಯುವತಿಗೆ ಬೇಸರ ವ್ಯಕ್ತಪಡಿಸಿದ್ದಾಳೆ.

ಹಳೆ ವಿಡಿಯೋ ಮತ್ತೆ ವೈರಲ್​

ಅಂದಹಾಗೇ ಇದು ಹೊಸ ವಿಡಿಯೋವಲ್ಲ ಎಂದು ತಿಳಿದುಬಂದಿದೆ. ಹಲವು ವರ್ಷಗಳ ಹಿಂದೆಯೇ ಈ ವಿಡಿಯೋ ಅಪ್ಲೋಡ್ ಆಗಿತ್ತು. ಇದೀಗ ಅದೇ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ. ಸದ್ಯ @hepgul5 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಆದರೆ ಮತ್ತೆ ಮತ್ತೆ ಈ ವಿಡಿಯೋ ಕಂಡ ನೆಟ್ಟಿಗರು ಇದನ್ನು ಪದೇ ಪದೇ ಶೇರ್​ ಮಾಡುತ್ತಿದ್ದಾರೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದು, ಕೆಲವರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಪುಣ್ಯಕ್ಕೆ ನಿಮ್ಮ ಪೋನ್​ ಕಚ್ಚಿ ಹಾರಿಹೋಗಿಲ್ಲ ಪಕ್ಷಿ ಅದಕ್ಕೆ ಖುಷಿ ಪಡಿ ಎಂದಿದ್ದಾರೆ. ಇನ್ನೂ ಕೆಲವರು ಈಕೆ ಪಕ್ಷಿ ಹಿಂದೆ ಓಡಿಹೋಗಿದ್ದನ್ನು ಅಣುಕಿಸಿದ್ದಾರೆ. ನೀವು ದೇವಲೋಕದಿಂದ ಬಂದಿರುವ ಏಂಜೆಲ್​ ಅಂದುಕೊಂಡಿದ್ದೀರಾ. ಆ ರೀತಿ ಪಕ್ಷಿ ಹಿಂದೆ ಓಡಿ ಹೋಗುತ್ತಿರುವಾಗ ಕಟ್ಟಡದಿಂದ ಕೆಳಗೆ ಬಿದ್ದಿದ್ದರೇ ನಿಮ್ಮ ತಂದೆ ತಾಯಿ ಏನು ಮಾಡಬೇಕಿತ್ತು ಎಂದು ಕಮೆಂಟ್​ ಮಾಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: