ವಿಟ್ಲ ಪೇಟೆಯ ಅಂಗಡಿಯೊಂದರ ಬಳಿ ಸತ್ತು ಬಿದ್ದ ಕೂಲಿ ಕಾರ್ಮಿಕ

ವಿಟ್ಲ ಕಾಸರಗೋಡು ರಸ್ತೆಯಲ್ಲಿರುವ ಖಾಸಗಿ ಅಂಗಡಿಯೊಂದರ ಬಳಿ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ವಿಟ್ಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಾರಪ್ಪ ಎಂದು ಗುರುತಿಸಲಾಗಿದೆ.

ವ್ಯಕ್ತಿ ಸತ್ತು ಬಿದ್ದ ಸ್ಥಳದ ಸ್ವಲ್ಪವೇ ದೂರದಲ್ಲಿ ವಿದ್ಯುತ್ ಮೈನ್ ಸ್ವಿಚ್ಚು ಇದ್ದು ವಿದ್ಯುತ್ ಆಘಾತ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಕಾರ್ಮಿಕ ಮಾರಪ್ಪ ಅವರಿಗೆ ಕುಡಿತದ ಚಟ ಇದ್ದು ಆ ಮತ್ತಿನಲ್ಲಿ ವಿದ್ಯುತ್ ತಗುಲಿ ಸತ್ತಿರುವ ಶಂಕೆ ಮೂಡಿದೆ.
ಸ್ಥಳಕ್ಕೆ ವಿಟ್ಲ ಮೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಬಂದಿದ್ದು ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.