ಐಡಿಯಲ್ ಐಸ್ಟ್ರೀಮ್ ಮಾಲಕ ಪ್ರಭಾಕರ್ ಕಾಮತ್ ಇನ್ನಿಲ್ಲ

ಮಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ನ ಸಂಸ್ಥಾಪಕ ಪ್ರಭಾಕರ್ ಕಾಮತ್ (79) ಅವರು ನ.6ರಂದು ನಿಧನ ಹೊಂದಿದರು.

ಅ.28ರಂದು ಮಂಗಳೂರಿನ ಭಾರತ್ ಮಾಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪ್ರಭಾಕರ್ ಕಾಮತ್ ಅವರು ಪಬ್ಬಮಾಮ್ ಎಂದೇ ಗುರುತಿಸಿಕೊಂಡು ಆಪ್ತ ವಲಯದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು.

ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿ 1974ರ ಮೇ.1 ರಲ್ಲಿ ಆರಂಭವಾದ ಐಡಿಯಲ್ ಐಸ್ ಕ್ರೀಮ್ ಈಗ ದೇಶದಾತ್ಯಂತ ಜನಪ್ರಿಯವಾಗಿದೆ.

Leave A Reply

Your email address will not be published.