ಈ ಆ್ಯಪ್ ನಿಂದ ತಿಂಗಳಿಗೆ 23 ಸಾವಿರ ರೂ. ಗಳಿಸಬಹುದಂತೆ !! | ಫೋನ್ ಪೇ ಗ್ರಾಹಕರಿಗಾಗಿ ನೀಡುತ್ತಿದೆ ಹೀಗೊಂದು ಮೆಗಾ ಆಫರ್ !!

ಈಗ ಕೈಯಲ್ಲಿ ಫೋನ್ ಒಂದಿದ್ದರೆ ಸಾಕು. ಎಲ್ಲಾ ವ್ಯವಹಾರಗಳು ಅಲ್ಲೇ ನಡೆಯುತ್ತವೆ. ಡಿಜಿಟಲ್ ಯುಗದಲ್ಲಿ ಫೋನ್ ಪೇ, ಗೂಗಲ್ ಪೇಗಳಿಗೆ ಬಹು ಬೇಡಿಕೆ ಇದೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್ ನಾವು ದಿನನಿತ್ಯ ಒಂದಿಲ್ಲೊಂದು ಕಾರಣಕ್ಕೆ ಬಳಸುತ್ತೇವೆ.

ನೀವು ಹಣ ವಹಿವಾಟು ನಡೆಸುವ ಆ್ಯಪ್ ಮೂಲಕವೇ ತಿಂಗಳಿಗೆ ಸಖತ್ ಹಣ ಸಂಪಾದನೆ ಮಾಡುವ ವಿಷಯ ತಿಳಿದಿದೆಯಾ? ನೀವು ಮನೆಯಲ್ಲೇ ಕೂತು ಆ್ಯಪ್ ಮೂಲಕ ಹಣ ಮಾಡಬಹುದು. ನಿಮ್ಮ ಅರ್ಹತೆ, ಸಾಮರ್ಥ್ಯಕ್ಕೆ ತಕ್ಕಂತೆ ತಿಂಗಳಿಗೆ ಹಣ ಸಂಪಾದನೆ ಮಾಡಬಹುದು. ಕನಿಷ್ಠವೆಂದರೂ ತಿಂಗಳಿಗೆ 23 ಸಾವಿರ ಹಣ ಕಳಿಸಬಹುದು. ಅದು ಕೂಡ ಫೋನ್ ಪೇ ಆ್ಯಪ್ ಮೂಲಕ.

ಫೋನ್ ಪೇ ಮೂಲಕ ಹಣ ಗಳಿಕೆ ಹೇಗೆ?

ಯುಪಿಐ ಕಂಪನಿಗಳು ಇಂದು ಭಾರೀ ಮೊತ್ತದ ಹಣದ ವಹಿವಾಟನ್ನು ನಿಭಾಯಿಸಬೇಕಾಗುತ್ತದೆ. ಮನೆಯ ಫೋನ್ ಬಿಲ್, ಎಲೆಕ್ಟ್ರಿಕ್ ಬಿಲ್ಲಿಂದ ಹಿಡಿದು ಯಾರಿಗಾದರೂ ಹಣ ಕಳುಹಿಸುವವರೆಗೂ ಯುಪಿಐ ಆ್ಯಪ್​ಗಳು ನಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ. ಇಂಥ ಆ್ಯಪ್​ಗಳನ್ನ ಬಳಸುವಾಗ ಕೆಲ ತಾಂತ್ರಿಕ ದೋಷ ಇತ್ಯಾದಿ ಆಗಬಹುದು. ಹಣ ಸಂದಾಯ ಆಗದೇ ಇರುವುದು ಇತ್ಯಾದಿ ತೊಂದರೆಗಳು ತಲೆತೋರುವುದು ಸಾಮಾನ್ಯ. ಇಂಥ ಗ್ರಾಹಕರ ದೂರನ್ನ ನಿಭಾಯಿಸಲು ಕಂಪನಿಗಳಿಗೆ ಸಾಕಷ್ಟು ಉದ್ಯೋಗಿಗಳ ಅಗತ್ಯ ಇರುತ್ತದೆ. ಫೋನ್ ಪೇ ಕಂಪನಿಗೂ ಇಂಥ ಸಾವಿರಾರು ಉದ್ಯೋಗಿಗಳ ಅಗತ್ಯ ಬಿದ್ದಿದೆ

ಇದಕ್ಕೆ ಫೋನ್ ಪೇ ವಿಶೇಷ ಯೋಜನೆ ಹಾಕಿಕೊಂಡಿದೆ. ಮನೆಯಲ್ಲೇ ಕೂತು ಕೆಲಸ ಮಾಡುವಂತಹ ವ್ಯಕ್ತಿಗಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದೆ. ಫೋನ್ ಪೇನಲ್ಲಿ ಕೆಲಸ ಮಾಡುವ ಹೆಚ್ಚಿನ ಉದ್ಯೋಗಿಗಳು ಕಚೇರಿಗೆ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲೇ ಕೆಲಸ ಮಾಡುತ್ತಾರೆ. ಇದರಿಂದ ಆಫೀಸ್ ವೆಚ್ಚ ಉಳಿಯುತ್ತದೆ ಎಂಬುದು ಫೋನ್ ಪೇ ಕಂಪನಿಯ ಅಂದಾಜು

ಫೋನ್ ಪೇ ಕೆಲಸ ಗಿಟ್ಟಿಸುವುದು:

  • ಫೋನ್ ಪೇ ನಲ್ಲಿ ಕೆಲಸ ಮಾಡಲು ಕನಿಷ್ಠ ವಿದ್ಯಾರ್ಹತೆ 12ನೇ ತರಗತಿ ಪಾಸಾಗಿರಬೇಕು.
  • ಪದವಿ ಮತ್ತು ಮಾಸ್ಟರ್ಸ್ ಮಾಡಿರುವ ಅಭ್ಯರ್ಥಿಗಳೂ ಅರ್ಜಿ ಹಾಕಬಹುದು.
  • ಅನುಭವ ಇರಬೇಕು ಎಂಬ ಷರತ್ತು ಇಲ್ಲ. ಫ್ರೆಷರ್ ಆಗಿದ್ದರೂ ಅರ್ಜಿ ಹಾಕಬಹುದು. ಅನುಭವಿಗಳೂ ಅರ್ಜಿ ಸಲ್ಲಿಸಬಹುದು.
  • ಒಳ್ಳೆಯ ಮಾತುಗಾರಿಕೆ (Communication Skills) ನಿಮ್ಮಲ್ಲಿರಬೇಕು. ಚೆನ್ನಾಗಿ ಮಾತನಾಡಲು ಮತ್ತು ಬರೆಯಲು ಬರಬೇಕು.

ನೀವು ರೂಢಿಸಿಕೊಳ್ಳಬೇಕಾದ್ದೇನು?

ಗ್ರಾಹಕರ ಜೊತೆ ನಿಮ್ಮ ಸಂವಾದ ಬಹಳ ಸ್ಪಷ್ಟವಾಗಿ ಇರಬೇಕು. ಅವರ ಸಮಸ್ಯೆ ಅರಿತು ಅದಕ್ಕೆ ಪರಿಹಾರ ಒದಗಿಸುವುದು, ಗ್ರಾಹಕರಿಗೆ ಮನವೊಲಿಕೆಯಾಗುವಂತೆ ವಿವರಿಸುವುದು ಇತ್ಯಾದಿ ಕಲೆಗಳು ನಿಮಗೆ ಅಗತ್ಯವಾಗಬಹುದು. ಮೊಬೈಲ್ ಮತ್ತು ಕಂಪ್ಯೂಟರ್ ಬಗ್ಗೆ ಹೆಚ್ಚು ಜ್ಞಾನ ಹೊಂದಿರುವುದು ಸಹಾಯಕ್ಕೆ ಬರುತ್ತದೆ.

ಹೀಗೆ ಅರ್ಜಿ ಸಲ್ಲಿಸಬಹುದು:

ಮೊದಲಿಗೆ ಏಬಲ್ ಆ್ಯಪ್ (Able App) ಅನ್ನು ಪ್ಲೇಸ್ಟೋರ್​ನಿಂದ ಡೌನ್ ಲೋಡ್ ಮಾಡಿಕೊಳ್ಳಿ. ಇದು ಫೋನ್ ಪೇ ಸೇರಿದಂತೆ ವಿವಿಧ ಕಂಪನಿಗಳಿಗೆ ಪಾರ್ಟ್ನರ್ ಆ್ಯಪ್ ಆಗಿದೆ. ಇದನ್ನ ಪ್ಲೇ ಸ್ಟೋರ್​ನಿಂದ ಡೌನ್ ಮಾಡುವ ಲಿಂಕ್ ಇಲ್ಲಿದೆ. ಈ ಏಬಲ್ ಆ್ಯಪ್​ನಲ್ಲಿ ನೀವು ಫೋನ್ ಪೇಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಪೂರ್ವಸಿದ್ಧತೆಯ ವಿವರವನ್ನು ಪಡೆಯಬಹುದು. ಈ ಆ್ಯಪ್​ನಲ್ಲೇ ಸ್ಟಡಿ ಮೆಟೀರಿಯಲ್ ಇರುತ್ತದೆ. ಅಲ್ಲಿಯೇ ನೀವು ಟೆಸ್ಟ್ ಮತ್ತು ಇಂಟರ್ವ್ಯೂ ಎದುರಿಸುವುದನ್ನು ಕಲಿಯಬಹುದು.

ನೀವು ಕಂಪನಿಯ ಸಂದರ್ಶನ ಎದುರಿಸಲು ಸಜ್ಜಾಗಿದೆ ಎಂದನಿಸಿದಲ್ಲಿ ಇದೇ ಏಬಲ್ ಆ್ಯಪ್ ನಿಮ್ಮ ರೆಸ್ಯೂಮ್ ಅನ್ನು ಫೋನ್ ಪೇ ಕಂಪನಿಗೆ ಕಳುಹಿಸಿ ಕೊಡುತ್ತದೆ. ಸಂದರ್ಶನ ಎದುರಿಸಲು ನೀವು ಕಚೇರಿಗೆ ಹೋಗುವ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಕೂತು ಫೋನ್ ಮೂಲಕ ಸಂದರ್ಶನ ಎದುರಿಸಬಹುದು.

ನೀವು ಸಂದರ್ಶನದಲ್ಲಿ ಪಾಸ್ ಆದರೆ ಕೆಲಸ ಸಿಗುತ್ತದೆ. ಒಂದು ವೇಳೆ ಫೋನ್ ಪೇನಲ್ಲಿ ನಿಮಗೆ ಕೆಲಸ ಸಿಗಲಿಲ್ಲವೆಂದರೆ ಚಿಂತೆ ಇಲ್ಲ, ಏಬಲ್ ಆ್ಯಪ್ ಜೊತೆ ಜೋಡಿತಗೊಂಡಿರುವ ಇತರ ಹಲವು ಕಂಪನಿಗಳಲ್ಲಿ ನೀವು ಕೆಲಸ ಟ್ರೈ ಮಾಡಬಹುದು.

Leave A Reply

Your email address will not be published.