ತನ್ನ ಸಾಕುನಾಯಿಗಳಿಗೆ ಒಂದೇ ರೀತಿಯ ಬಟ್ಟೆ ಕೊಳ್ಳಲು ಮಾಡೆಲ್ ಒಬ್ಬಳು ಎಷ್ಟು ಖರ್ಚು ಮಾಡಿದ್ದಾಳೆ ಗೊತ್ತಾ ?? | ಈ ಶ್ವಾನ ಪ್ರೇಮಿಯ ಕಥೆ ಕೇಳಿದರೆ ನೀವು ಬೆರಗಾಗುವುದು ಖಂಡಿತ

ಸಾಕು ಪ್ರಾಣಿಗಳ ಮೇಲೆ ಪ್ರೀತಿ ಇರುವುದು ಸಾಮಾನ್ಯ. ಅದೆಷ್ಟೋ ಮಂದಿ ನಾಯಿ- ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ಲಾಲಾನೇ ಪೋಷಣೆ ಮಾಡುತ್ತಾರೆ. ಎಷ್ಟು ಖರ್ಚಾದರೂ ಅವುಗಳಿಗೆ ಬೇಕಾದ ರೀತಿಲಿ ನಡೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಳು ನಟಿ ತನ್ನ ನಾಯಿಯ ಬಟ್ಟೆಗಾಗಿ ಖರ್ಚು ಮಾಡಿದ ಹಣ ಎಷ್ಟು ಗೊತ್ತೇ..?ಕೇಳಿದ್ರೆ ಒಮ್ಮೆ ದಂಗಾಗೋದು ಖಚಿತ.

https://www.instagram.com/p/CVk_M0StNDu/?utm_medium=copy_link

ಹೌದು.ಇಂಗ್ಲೆಂಡ್‌ನ ಕೆಂಟ್‌ ಆಶ್‌ಫೋರ್ಡ್‌ನ  20ರ ಹರೆಯದ ಮಾಡೆಲ್ ಲಾರೆನ್ ನೈಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೊಮೇರಿಯನ್ ಶ್ವಾನಗಳ ದಿರಿಸುಗಳ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಎರಡು ಪೊಮೇರಿಯನ್ ನಾಯಿಗಳ ಒಂದೇ ರೀತಿಯ ದಿರಿಸಿಗಾಗಿ ಈ ಮಾಡೆಲ್ ಖರ್ಚುಮಾಡಿರುವ ಮೊತ್ತ ಯಾರನ್ನೂ ಕೂಡ ಬೆಚ್ಚಿಬೀಳಸಬಹುದು. ಆಕೆ 7.25 ಲಕ್ಷ ರೂಪಾಯಿ ಅನ್ನು ದಿರಿಸುಗಳಿಗಾಗಿ ಖರ್ಚುಮಾಡಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಸಾಕು ಪ್ರಾಣಿಗಳ ಬೊಟಿಕ್ ಹಾಗೂ ದಿರಿಸುಗಳ  ಶಾಪ್  ರೋ ಮತ್ತು ಫ್ರೆಂಡ್ಸ್ ಎಂಬ ಮಳಿಗೆಯ ಮಾಲಕಿಯಾಗಿರುವ ಲಾರೆನ್ ನೈಟ್‌ಗೆ ತಮ್ಮ ಎರಡು ಹಾಗೂ ಐದು ವರ್ಷಗಳ ಪೊಮೇರಿಯನ್ ಶ್ವಾನಗಳಾದ ಮಿಮಿ ಹಾಗೂ ಮಿಲೊಗೆ ಸುಂದರವಾದ ಉಡುಗೆಗಳನ್ನು ತೊಡಿಸಿ ಅವುಗಳನ್ನು ಅಲಂಕಾರ ಮಾಡುವುದೆಂದರೆ ವಿಪರೀತ ಇಷ್ಟವಂತೆ.ಈ ಶ್ವಾನಗಳು ತಮ್ಮದೇ ಆದ ದಿರಿಸುಗಳ ಕಪ್​ಬೋರ್ಡ್​ ಅನ್ನು ಹೊಂದಿದ್ದು, ಇಲ್ಲಿ ಇವುಗಳ ಒಂದೇ ರೀತಿಯ ಅತ್ಯಾಕರ್ಷಕ ಬಟ್ಟೆಬರೆಗಳಿವೆ ಎಂದು ಲಾರೆನ್ ಹೇಳುತ್ತಾರೆ. ಲಾರೆನ್ ಸಾಕುಪ್ರಾಣಿಗಳ ಬಟ್ಟೆಯಂಗಡಿ ತೆರೆದಾಗ ಮಿಮಿ ಹಾಗೂ ಮಿಲೋವನ್ನು ಬಟ್ಟೆ ಹಾಗೂ ಪರಿಕರಗಳ ಪ್ರದರ್ಶನಗಳಿಗಾಗಿ ಮಾಡೆಲ್‌ಗಳಂತೆ ಬಳಸಲು ಪ್ರಾರಂಭಿಸಿದ್ದರಂತೆ.

ಎರಡೂ ನಾಯಿಗಳಲ್ಲಿ ಅದರಲ್ಲೂ ಹಿರಿಯ ನಾಯಿ ಮಿಮಿಗೆ ದಿರಿಸು ಧರಿಸುವುದೆಂದರೆ ತುಂಬಾ ಇಷ್ಟ ಎಂದು ಹೇಳುವ ಲಾರೆನ್, ತಮ್ಮ ಸಾಕುಪ್ರಾಣಿಗಳ ಬಟ್ಟೆಬರೆಗಳ ಸಂಗ್ರಹವನ್ನು ವಿವರಿಸಿದ್ದು ಸೀಸನ್‌ಗಳಿಗೆ ಅನುಗುಣವಾಗಿ ಶ್ವಾನಗಳಿಗೆ ಧಿರಿಸುಗಳನ್ನು ತೊಡಿಸಲಾಗುತ್ತದೆ ಎಂದು ಹೇಳುತ್ತಾರೆ. 400ಕ್ಕಿಂತ ಹೆಚ್ಚಿನ ಪರಿಕರಗಳು ಹಾಗೂ ಬಟ್ಟೆಬರೆಗಳನ್ನು ಮಿಮಿ ಹಾಗೂ ಮಿಲೊ ತಮ್ಮ ವಾರ್ಡ್‌ರೋಬ್‌ಗಳಲ್ಲಿ ಹೊಂದಿವೆ. ಮಳೆ ಬರುತ್ತಿದ್ದರೆ ನಾನು ಅವುಗಳಿಗೆ ರೈನ್‌ಕೋಟ್ ತೊಡಿಸುತ್ತೇನೆ ಇನ್ನು ಹೊರಗೆ ಚಳಿ ಇದ್ದರೆ ನಾನು ಅವುಗಳಿಗೆ ಜಂಪರ್ ತೊಡಿಸುತ್ತೇನೆ ಎಂದು ಲಾರೆನ್ ಶ್ವಾನಗಳಿಗೆ ತೊಡಿಸುವ ಬಟ್ಟೆಬರೆಗಳ ವಿವರಗಳನ್ನು ನೀಡಿದ್ದಾರೆ.

ಶ್ವಾನಗಳಿಗಾಗಿ ಇಷ್ಟೊಂದು ಹಣ ವಿನಿಯೋಗಿಸುವುದು ಲಾರೆನ್‌ರಿಗೆ ದುಬಾರಿ ಎಂದೇನೂ ಅನಿಸುತ್ತಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಆಕೆ ಎರಡು ಪೊಮೇರಿಯನ್ ಮರಿಗಳಾದ ಮಿಲೊವನ್ನು ಖರೀದಿಸಲು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಖರ್ಚುಮಾಡಿದ್ದರೆ ಮಿಮಿಗೆ ಖರ್ಚುಮಾಡಿರುವುದು ಸುಮಾರು 6 ಲಕ್ಷ ರೂಪಾಯಿಗಳಾಗಿದೆ.

ನಾಯಿಮರಿಗಳನ್ನು ಸುಂದರವಾಗಿ ಅಲಂಕರಿಸಿ ವಿಧವಿಧವಾದ ಬಟ್ಟೆಬರೆಗಳನ್ನು ತೊಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅವುಗಳ ಪೋಸ್ಟ್‌ಗಳನ್ನು ಲಾರೆನ್ ಪ್ರಕಟಿಸುತ್ತಿರುತ್ತಾರೆ. ಇದರಿಂದ ನಾಯಿಮರಿಗಳ ಜನಪ್ರಿಯತೆಯೊಂದಿಗೆ ನನ್ನ ಸಾಕುಪ್ರಾಣಿ ಬಟ್ಟೆಬರೆಗಳ ಮಳಿಗೆಗಳ ಪ್ರಚಾರವೂ ನಡೆಯುತ್ತದೆ ಎಂಬುದು ಲಾರೆನ್ ಅಭಿಪ್ರಾಯವಾಗಿದೆ.

Leave A Reply

Your email address will not be published.