ಅನಾರೋಗ್ಯದಿಂದ ಜಿಗುಪ್ಸೆಗೊಂಡು ಜಿಲ್ಲಾಸ್ಪತ್ರೆಯ ವಾರ್ಡಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ರೋಗಿ

Share the Article

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ವಾರ್ಡಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಉಡುಪಿಯಲ್ಲಿ ನಡೆದಿದೆ.

ಮೃತರನ್ನು ಮಂಗಳೂರು ಜೋಕಟ್ಟೆಯ ಮೈಂದಗುರಿ ನಿವಾಸಿ ಯೋಗೀಶ್ ಕೋಟ್ಯಾನ್(55) ಎಂದು ಗುರುತಿಸಲಾಗಿದೆ.

ಕ್ಷಯರೋಗಕ್ಕೆ ತುತ್ತಾಗಿದ್ದ ಇವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ವಿಪರೀತ ಕುಡಿತದ ಚಟದಿಂದ ಮನೆ ಬಿಟ್ಟು ತಿರುಗಾಡುತ್ತಿದ್ದರು ಎಂದು ತಿಳಿದುಬಂದಿದೆ.

ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ಟಿ.ಬಿ. ವಾರ್ಡಿನ ಬಾಗಿಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುನೀತ್ ರಾಜ್ ಕುಮಾರ್ ಸಾವಿಗೆ ಕಾರಣ | ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ‘ವರ್ಕ್ ಔಟ್ ‘ ಆಗಲ್ಲ ಅಂತಿದೆ ವೈದ್ಯ ಜಗತ್ತು !

Leave A Reply