ಹೊಸ ಮೊಬೈಲ್ ಕಂಡುಕೊಳ್ಳುವುದಕ್ಕಾಗಿ ಪತ್ನಿಯನ್ನೇ ಮಾರಿದ ಮಹಾಶಯ

Share the Article

ಹಿಂದಿನ ಕಾಲದಲ್ಲಿ ಸತ್ಯಹರಿಶ್ಚಂದ್ರ ವಿಶ್ವಾಮಿತ್ರನಿಗೆ ದುಡ್ಡು ಕೊಡಬೇಕಾಗಿ ಬಂದಾಗ ತನ್ನ ಹೆಂಡತಿ ಮಗನ್ನ ಮಾರಿದ್ದ.ಆದರೆ ಈ ಆಧುನಿಕ ಯುಗದಲ್ಲಿ ಒಬ್ಬ ಬೂಪ ಮೊಬೈಲ್ ಕೊಂಡುಕೊಳ್ಳುವುದಕ್ಕಾಗಿ ಪತ್ನಿಯನ್ನೇ ಮಾರಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾ: ಮದುವೆಯಾಗಿ ಒಂದು ತಿಂಗಳಿಗೆ ಹೆಂಡತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಮೊಬೈಲ್ ಖರೀದಿಸಿರುವ ವಿಚಿತ್ರ ಘಟನೆ ಒಡಿಶಾದಲ್ಲಿ ನಡೆದಿದೆ.17 ವರ್ಷದ ಅಪ್ರಾಪ್ತ ತನ್ನ 26 ವರ್ಷದ ಪತ್ನಿಯನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಬಂದ ಹಣದಲ್ಲಿ ಮೊಬೈಲ್ ಖರೀದಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕನಿಗೂ 26 ವರ್ಷದ ಯುವತಿಗೆ ಜುಲೈನಲ್ಲಿ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಜೋಡಿ ರಾಜಸ್ಥಾನಕ್ಕೆ ಬಂದಿದ್ದರು. ಇಲ್ಲಿನ ಒಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಪತಿಗೆ ಕೆಲಸ ಸಿಕ್ಕಿತ್ತು. ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಗಲಾಟೆ ಮಾಡುತ್ತಿದ್ದ. ಬರನ್ ಜಿಲ್ಲೆಯ 55 ವರ್ಷದ ವ್ಯಕ್ತಿಗೆ ತನ್ನ ಪತ್ನಿಯನ್ನು ಮಾರಾಟ ಮಾಡಿದ್ದಾನೆ. ಪತ್ನಿಯನ್ನು ಮಾರಿ ಬಂದಿದ್ದ ಹಣದಲ್ಲಿ ಹೊಸ ಮೊಬೈಲ್ ಖರೀದಿಸಿದ್ದಾನೆ. ಮಿಕ್ಕ ಹಣದಲ್ಲಿ ಪರಿಚಯಸ್ಥರೊಂದಿಗೆ ಕುಡಿದು ಪಾರ್ಟಿ ಮಾಡಿದ್ದಾನೆ. ಪತ್ನಿ ಮಾರಾಟ ಮಾಡಿರುವ ಹಣ ಖಾಲಿಯಾದ ಬಳಿಕ ಮರಳಿ ಊರಿಗೆ ವಾಪಸ್ ಬಂದಿದ್ದ.

ಪತ್ನಿ ಕಡೆಯವರು ನನ್ನ ಮಗಳು ಎಲ್ಲಿ ಎಂದು ಕೇಳಿದ್ದಾರೆ. ಆಕೆ ನನಗೆ ಮೋಸ ಮಾಡಿ ಬಿಟ್ಟು ಹೋಗಿದ್ದಾಳೆ ಎಂದು ಹೇಳಿದ್ದಾನೆ.

ಈತನ ಮಾತು ನಂಬದ ಪತ್ನಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆಗ ಪೊಲೀಸರ ಬಳಿ ನಡೆದ ಘಟನೆಯನ್ನೆಲ್ಲ ಹೇಳಿದ್ದಾನೆ. ಹೆಂಡತಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಯುವತಿ ಇರುವ ಸ್ಥಳ ತಿಳಿದು, ಕರೆದುಕೊಂಡು ಹೋಗಲು ಪೊಲೀಸರು ಮುಂದಾಗಿದ್ದರು. ಆದರೆ ಆ ಗ್ರಾಮದ ಜನ ಯುವತಿಯನ್ನು ವಾಪಸ್ ಕಳಿಸಲ್ಲ, ಆಕೆಯನ್ನು ದುಡ್ಡು ಕೊಟ್ಟು ಕರೆತರಲಾಗಿದೆ. ಹಣವನ್ನು ಹಿಂದಿರುಗಿಸಿ ಆಕೆಯನ್ನು ಕರೆದುಕೊಂಡು ಹೋಗಿ ಎಂದಿದ್ದಾರೆ. ನಂತರ ಪೊಲೀಸರು ಮನವೊಲಿಸಿ ಯುವತಿಯನ್ನು ರಕ್ಷಿಸಿದ್ದಾರೆ.

Leave A Reply

Your email address will not be published.