ಮೊಮ್ಮಕ್ಕಳನ್ನು ಆಡಿಸುವ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ!! ಇನ್ನಾದರೂ ಮಕ್ಕಳಿಲ್ಲ ಎಂಬ ಕೊರಗು ಕಾಡದಿರಲಿ ಆ ಮುದಿಜೀವಕೆ

ತಾಯ್ತನ ಎಂಬುದು ಅವರ್ಣನೀಯ ಅನುಭವ. ಅದನ್ನು ಅನುಭವಿಸಿಯೇ ತಿಳಿಯಬೇಕು ಎಂಬ ಮಾತಿದೆ. ಮಗುವಿಗೆ ಜನ್ಮ ನೀಡಿ ಅದನ್ನು ಬೆಳೆಸುವ ಪ್ರಕ್ರಿಯೆ ಕುತೂಹಲ ಹಾಗೂ ಖುಷಿಯ ವಿಷಯವೇ. ಆದರೆ ಕೆಲವೊಂದು ಬಾರಿ ತಾಯ್ತನದಲ್ಲಿ ವಿಚಿತ್ರ ಘಟನೆಗಳು ಸಂಭವಿಸುತ್ತದೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.

Ad Widget

ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ತನ್ನ ವೃದ್ಧಾಪ್ಯದ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮಹಿಳೆ ಮೊದಲನೆ ಬಾರಿಗೆ ಮಗುವಿಗೆ ಜನ್ಮ ನೀಡಿರುವ ವಿಚಿತ್ರ ಘಟನೆಯೊಂದು ಗುಜರಾತ್‍ನ ಕಛ್‍ನಲ್ಲಿ ನಡೆದಿದೆ. ಆಕೆಯನ್ನು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

Ad Widget . . Ad Widget . Ad Widget .
Ad Widget

ಜಿವುಬೆನ್ ಎಂಬಾಕೆಯೇ ಆ ಮಹಾತಾಯಿ. ಮಕ್ಕಳಿಲ್ಲವೆಂದು ನೆರೆಹೊರೆಯವರ ವ್ಯಂಗ್ಯದ ಮಾತನ್ನು ಇಷ್ಟು ವರ್ಷ ಕೇಳಿ ಬದುಕಿದ್ದೇವೆ. ಇದನ್ನೆಲ್ಲ ನಿಲ್ಲಿಸಲು ಒಂದು ಮಗುವನ್ನಾದರೂ ಪಡೆಯಲೇಬೇಕು ಎಂಬ ನಿರ್ಧಾರ ಮಾಡಿದೆವು ಎಂದು ಜಿವುಬೆನ್ ಹೇಳಿದ್ದಾರೆ.

Ad Widget
Ad Widget Ad Widget

ಈ ಬಗ್ಗೆ ಮಾತನಾಡಿದ ಇವರಿಗೆ ಹೆರಿಗೆ ಮಾಡಿಸಿದ ವೈದ್ಯರು, ಈ ಇಳಿ ವಯಸ್ಸಿನಲ್ಲಾದರೂ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕೆಂದು ನಮ್ಮ ಬಳಿ ಹೇಳಿಕೊಂಡಿದ್ದರು. ಈ ವೃದ್ಧ ದಂಪತಿಗಳ ಬಯಕೆಗೆ ನಾವು ಮಣಿಯಲೇಬೇಕಾಯಿತು ಮತ್ತು ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ. ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‍ಗೆ ಸಲಹೆ ನೀಡಿದ್ದೆವು. ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಸಾಕಷ್ಟು ಭಾವುಕರಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ.

ನಾವು ಮೊದಲು ಔಷಧಿಗಳನ್ನು ನೀಡವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಕ್ಕೆ ಚಿಕಿತ್ಸೆ ನೀಡಿದ್ದೇವೆ. ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು ಎಂದು ಸ್ತ್ರೀರೋಗ ತಜ್ಞ ಹೇಳಿದ್ದಾರೆ.

ಎರಡು ವಾರಗಳ ನಂತರ ಜಿವುಬೆನ್ ಅವರ ಸೋನೋಗ್ರಫಿ ಮಾಡಿದೆವು, ನಂತರ ಭ್ರೂಣವು ಬೆಳೆಯುವುದಕ್ಕೆ ಪ್ರಾರಂಭವಾಯಿತು. ಸಮಯಕ್ಕೆ ಸರಿಯಾಗಿ ಹೃದಯ ಬಡಿತವನ್ನು ಕಂಡೆವು ಮತ್ತು ಯಾವುದೇ ದೋಷ ಕಾಣಿಸಲಿಲ್ಲ. ಆದ್ದರಿಂದ, ಗರ್ಭಧಾರಣೆಯೊಂದಿಗೆ ಮುಂದುವರಿಯುವಂತಾಯಿತು. ಈಗ ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ.

ಇನ್ನೊಬ್ಬ ಭಾರತೀಯ ಮಹಿಳೆ ಎರ್ರಮಟ್ಟಿ ಮಂಗಯಮ್ಮ, ಸೆಪ್ಟೆಂಬರ್ 2019 ರಲ್ಲಿ 74ನೇ ವಯಸ್ಸಿನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಅವರನ್ನು ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: