ಚಾರ್ಮಾಡಿ: ಅಲೇಕಾನ್ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭ ನಡೆದ ದುರ್ಘಟನೆ!!!ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕಾಲುಜಾರಿ ಬಿದ್ದು ಯುವಕನೋರ್ವನ ಕೈಕಾಲು ಮುರಿತ

ಮೂಡಿಗೆರೆ: ಚಾರ್ಮಾಡಿ ಘಾಟ್‌ನ ಅಲೇಕಾನ್ ಜಲಪಾತದ ಬಳಿ ಯುವಕರ ತಂಡವೊಂದು ಸೆಲ್ಫಿ ತೆಗೆಯುತ್ತಿದ್ದ ವೇಳೆ ಜೊತೆಗಿದ್ದ ಯುವಕನೋರ್ವ ಜಾರಿ ಬಿದ್ದು ಕೈ ಕಾಲುಗಳಿಗೆ ತೀವ್ರವಾದ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ.

Ad Widget

ಮೂಲತಃ ಪಾವಗಡದವರಾದ ಯುವಕರ ತಂಡವೊಂದು ಜಲಪಾತ ವೀಕ್ಷಣೆಗೆ ತೆರಳಿದ್ದು,ಈ ವೇಳೆ ಅಭಿಲಾಶ್ (22) ಎಂಬ ಯುವಕ 80 ಅಡಿ ಆಳಕ್ಕೆ ಬಿದ್ದು ಕೈ ಮತ್ತು ಕಾಲು ಮುರಿತಕ್ಕೊಳಗಾಗಿದ್ದು ಕೂಡಲೇ ಗಾಯಳುವನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

Ad Widget . . Ad Widget . Ad Widget . Ad Widget

Ad Widget

ವೃತ್ತಿಯಲ್ಲಿ ಚಾಲಕನಗಿರುವ ಅಭಿಲಾಶ್, ಮೂವರು ಯುವಕ ಜೊತೆಗೆ ಗೂಡ್ಸ್ ವಾಹನದಲ್ಲಿ ಜಲಪಾತ ವೀಕ್ಷಣೆಗೆ ಬಂದಿದ್ದು ಮೂವರು ಯುವಕರು ಜಲಪಾತದಲ್ಲಿ ಸೆಲ್ಸಿ ತೆಗೆಯುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.ವಾಹನದ ಕೀ ಸಹಿತ ಮೊಬೈಲ್ ನೀರು ಪಾಲಾಗಿದ್ದು,ವಿಷಯ ತಿಳಿದು ತಕ್ಷಣ ಬಣಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.

Ad Widget
Ad Widget Ad Widget

ಸೂಚನಾ ಫಲಕ ಅಳವಡಿಸಲು ಒತ್ತಾಯ

ಈ ಜಲಪಾತದಲ್ಲಿ ಈ ಮೊದಲು ಹಲವು ದುರ್ಘಟನೆಗಳು ಸಂಭವಿಸಿದ್ದು, ಈ ಮೊದಲಿದ್ದ ಸೂಚನಾ ಫಲಕ ಗಾಳಿಮಳೆಗೆ ಮುರಿದುಬಿದ್ದ ಬಳಿಕ ಇಲ್ಲಿ ಸೂಚನಾ ಫಲಕ ಇರಲಿಲ್ಲ. ಸದ್ಯ ಇಂತಹ ಘಟನೆಗಳು ಮರುಕಳಿಸದಿರಲು ಸೂಚನಾ ಫಲಕ ಅಳವಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: