ಅಫ್ಘಾನಿಸ್ತಾನದಲ್ಲಿ ಮತ್ತೆ ಕ್ರೂರತ್ವ ಮೆರೆದ ತಾಲಿಬಾನ್!!ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ ನಡೆಸಿ ಮನೆಯವರಿಗೆ ಬೆದರಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಕ್ರೂರಿಗಳಾಗಿ ಕಾಡಿದ್ದಾರೆ.

ಈ ಮೊದಲು ಕೆಲ ಆಟಗಾರನ್ನು ಕೊಂದು, ನಾವು ಮತ್ತೆ ಕ್ರೂರತ್ವ ಮೆರೆಯಲ್ಲ ಎಂದು ಕೊಟ್ಟ ಮಾತಿಗೆ ತಪ್ಪಿ ಮತ್ತೊಮ್ಮೆ ಓರ್ವ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ ಮಾಡಿದ್ದಾರೆ.ಮಹ್ಜಬಿನ್ ಹಕಿಮಿ ಹೆಸರಿನ ಆಟಗಾರ್ತಿಯ ಶಿರಚ್ಛೇದ ಮಾಡಿರುವ ತಾಲಿಬಾನಿಗಳು ಅವರ ಪೋಷಕರಿಗೆ ಈ ವಿಷಯವನ್ನು ಎಲ್ಲಿಯೂ ಬಾಯಿಬಿಡದಂತೆ ಬೆದರಿಕೆ ಒಡ್ಡಿದ್ದರಂತೆ. ಹೀಗಾಗಿ ಶಿರಚ್ಛೇದದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಎಂದು ವಾಲಿಬಾಲ್ ಟೀಂನ ಕೋಚ್ ಹೇಳಿಕೆ ನೀಡಿದ್ದಾರೆ.

ಅಶ್ರಫ್ ಘನಿ ಆಡಳಿತದ ಸರ್ಕಾರ ಬೀಳುವ ಮುನ್ನ ಮಹ್ಜಬಿನ್ ಕಾಬೂಲ್ ಮುನಿಸಿಪಾಲಿಟಿ ವಾಲಿಬಾಲ್ ಕ್ಲಬ್‌ನಲ್ಲಿ ಆಡಿದ್ದ ಮಹ್ಜಬಿನ್ ಹಕಿಮಿ ಓರ್ವ ಉತ್ತಮ ಆಟಗಾರ್ತಿಯಾಗಿದ್ದರು . ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮಹ್ಜಬಿನ್‌ನ್ನು ಶಿರಚ್ಛೇದ ಮಾಡಿರುವ ವಿಡಿಯೋ ವೈರಲ್ ಆಗಿದೆ.

Leave A Reply

Your email address will not be published.