ಅಂಕತ್ತಡ್ಕದಲ್ಲಿ ಸಾರ್ವಜನಿಕ ಸತ್ಯದತ್ತ ವೃತ ಪೂಜೆ,ಧಾರ್ಮಿಕ ಸಭೆ,ಸಾಧಕರಿಗೆ ಗೌರವಾರ್ಪಣೆ

ಸವಣೂರು : ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ಒಡಿಯೂರು ಗುರುದೇವಾ ಸೇವಾ ಬಳಗ ಅಂಕತ್ತಡ್ಕ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪ್ರಾಯೋಜಿತ ಪಾಲ್ತಾಡಿ ಘಟ ಸಮಿತಿ ವತಿಯಿಂದ ಒಡಿಯೂರು ಶ್ರೀಗಳ ಷಷ್ಟಬ್ಬ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ ಸತ್ಯದತ್ತ ವೃತ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಅ.20ರಂದು ನಡೆಯಿತು.

ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟಿಸಿ ಸಾದ್ವಿ ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು.ಹನುಮಾನ್ ಚಾಲಿಸಾ ಪಠಣ ಹಾಗೂ ಹನುಮಾನ್ ಚಾಲಿಸಾ ಪುಸ್ತಕ ಬಿಡುಗಡೆ ,ವಿತರಣೆ ನಡೆಯಿತು.

ಬಳಿಕ ತಾಳ ನಿನಾದ ಪಡ್ಪಿನಂಗಡಿ ,ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಭಜನಾ ಮಂಡಳಿಯಿಂದ ಕುಣಿತ ಭಜನೆ, ಬಿಲ್ವಪತ್ರೆ ಗಿಡ ವಿತರಣೆ ನಡೆಯಿತು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸಂಜೆ ಸಾಮೂಹಿಕ ಪ್ರಾರ್ಥನೆ, ಸತ್ಯದತ್ತ ವೃತ ಪೂಜೆ ಆರಂಭ ಧಾರ್ಮಿಕ ಸಭಾ ಕಾರ್ಯಕ್ರಮ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು., ಅಧ್ಯಕ್ಷತೆಯನ್ನು ಒಡಿಯೂರು ಶ್ರೀಗುರುದೇವಾ ಸೇವಾಬಳಗದ ಗೌರವಾಧ್ಯಕ್ಷ ಎಸ್‌.ಬಿ.ಜಯರಾಮ ರೈ ಬಳಜ್ಞ ವಹಿಸಿದ್ದರು..ಅತಿಥಿಗಳಾಗಿ ಒಡಿಯೂರು ಶ್ರೀಗಳ ಷಷ್ಟಬ್ದ ಆವರಣೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ , ಒಡಿಯೂರು ಶ್ರೀ ಷಷ್ಟಬ್ದ ಕೇಂದ್ರ ಸಮಿತಿ ಕಾರ್ಯದರ್ಶಿ ಯಶವಂತ ವಿಟ್ಲ, ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ,ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಡಾ.ರಾಮಕಿರಣ್ ,ಪುತ್ತೂರು ಒಡಿಯೂರು ಶ್ರೀಗುರುದೇವಾ ಸೇವಾ ಬಳಗದ ಅಧ್ಯಕ್ಷ ಎಂ.ದೇವಪ್ಪ ನೊಂಡಾ, ಎಂ.ರಾಮಣ್ಣ ಗೌಡ ಮಾಡಾವು ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ ಕಾರ್ಯಕ್ರಮ: ರಾಜ್ಯಪ್ರಶಸ್ತಿ ಪುರಸ್ಕೃತ ಕೆಯ್ಯರು ಪ.ಪೂ.ಕಾಲೇಜಿನ ಪ್ರಾಚಾರ್ಯ ಆನಂದ ಪಿ,ಜಿಲ್ಲಾ ಪ್ರಶಸ್ತಿ ಪುರಸ್ಕೃತ ಚೆನ್ನಾವರ ಶಾಲಾ ಶಿಕ್ಷಕಿ ಶಾಂತಾ ಕುಮಾರಿ ಎನ್, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಪ್ರವೀಣ್ ರೈ ನಡುಕೂಟೇಲು, ನಿವೃತ್ತ ಶಿಕ್ಷಕ ಬಾಬು ಎನ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕೊರೊನಾ ವಾರಿಯರ್ಸ್‌ಗೆ ಗೌರವ
ಕಾರ್ಯಕ್ರಮದಲ್ಲಿ ಕೋವಿಡ್ ವಾರಿಯರ್ಸ್‌ಗಳಾದ ಆರೋಗ್ಯ ಸಹಾಯಕಿ ಸುಧಾಕ್ಷಿಣಿ,ಆಶಾ ಕಾರ್ಯಕರ್ತೆಯರಾದ ಶ್ಯಾಮಲಾ ರೈ,ರತ್ನಾವತಿ,ಹೇಮಲತಾ ಅವರನ್ನು ಸ್ವಾಮೀಜಿಯವರು ಗೌರವಿಸಿದರು.

ಬಿಲ್ವ ಪತ್ರ ವಿತರಣೆ
ಕಾರ್ಯಕ್ರಮದಲ್ಲಿ ಬಿಲ್ವಪತ್ರೆ ಗಿಡ ವಿತರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅಂಕತ್ತಡ್ಕ ಶ್ರೀಗುರುದೇವಾ ಸೇವಾ ಬಳಗದ ನಿರ್ಮಾಣದಲ್ಲಿ ರಾಜಕೇಸರಿ ಯೂತ್ ಕ್ಲಬ್ ಗಂಜಿಮಠ ಅವರ ಸಹಕಾರದಲ್ಲಿ ನಿರ್ಮಾಣದಲ್ಲಿ ಒಡಿಯೂರ್ದ ಶ್ರೀಗುರುದೇವರ್ ತುಳು ವಿಡೀಯೋ ಭಕ್ತಿ ಗೀತೆಯನ್ನು ಒಡಿಯೂರು ಶ್ರೀಗಳು ಬಿಡುಗಡೆಗೊಳಿಸಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಲಯ ಮೇಲ್ವಿಚಾರಕಿ ಗೀತಾ,ಸೇವಾಬಳಗದ ಸದಸ್ಯರಾದ ಮೋನಪ್ಪ,ರಾಮಣ್ಣ ರೈ ಬಾಕಿಜಾಲು,ತ್ಯಾಂಪಣ್ಣ ರೈ,ಸುಬ್ರಾಯ ಗೌಡ,ಹರೀಶ್ ಮಡಿವಾಳ,ಕೃಷ್ಣಪ್ಪ ,ರೋಹಿತ್ ರೈ ಕುಂಜಾಡಿ ಅವರು ಅತಿಥಿಗಳನ್ನು ಗೌರವಿಸಿದರು.

ಅಂಕತ್ತಡ್ಕ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಕರುಣಾಕರ ರೈ ಚೆನ್ನಾವರ ಪಟ್ಟೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ವಿಜೇತ್ ರೈ ಅಂಕತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!
Scroll to Top
%d bloggers like this: