ಸಂಗಾತಿ ಹುಡುಕಲು ಡೇಟಿಂಗ್ ಆಪ್ ಬಳಸಿದ ಯುವತಿ | ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿದ ಹುಡುಗನನ್ನು ನಂಬಿದಾಕೆ ಕಳೆದುಕೊಂಡದ್ದು ಎಷ್ಟು ಗೊತ್ತಾ??

Share the Article

ಇತ್ತೀಚಿನ ಯುವ ಜನತೆ ತಮ್ಮ ಸಂಗಾತಿ ಹುಡುಕಿಕೊಳ್ಳಲು ಮ್ಯಾಟ್ರಿಮೋನಿ, ಡೇಟಿಂಗ್ ಆಪ್ ಗಳನ್ನು ಬಳಸುವುದು ಮಾಮೂಲು. ಇದರಿಂದ ಸಿಗುವ ಸಂಗಾತಿಗಳಿಂದ ಮೋಸ ಹೋದದ್ದು ಉಂಟು. ಹಾಗೆಯೇ ಇಲ್ಲೊಬ್ಬ ಮಹಿಳೆ ಡೇಟಿಂಗ್ ಆಪ್ ನಲ್ಲಿ ವ್ಯಕ್ತಿಯೊಬ್ಬನ ಗೆಳೆತನ ಬೆಳೆಸಿ, ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ
ಆಸ್ಟಿನ್‌ಟೌನ್ ನಿವಾಸಿ ನಿಲೋಫರ್ (37) ಎಂಬ ಮಹಿಳೆ ಮೋಸ ಹೋಗಿರುವುದು. ಡೇಟಿಂಗ್ ಆಪ್‌ನಲ್ಲಿ ನಿಲೋಫರ್ ಖಾತೆ ತೆರೆದಿದ್ದರು. ಅಲ್ಲಿ ಸ್ನೇಹಿತನಾದ ವ್ಯಕ್ತಿ ತಾನು ವಿದೇಶದಲ್ಲಿರುವುದಾಗಿ ನಂಬಿಸಿದ್ದ. ತಾನು ವಿದೇಶದಿಂದ ಬಂದು ನಿನ್ನನ್ನೇ ವಿವಾಹವಾಗುವುದಾಗಿಯೂ ಭರವಸೆ ಕೊಟ್ಟಿದ್ದ. ಆತನ ಮಾತಿಗೆ ಮರುಳಾದ ನಿಲೋಫರ್ ಆತನನ್ನು ವಿವಾಹವಾಗಲು ಒಪ್ಪಿದ್ದಳು.

ನಿಲೋಫರ್‌ಗೆ ಕರೆ ಮಾಡಿದ ಆರೋಪಿ, ತನ್ನ ಉದ್ಯಮ ನಷ್ಟದಲ್ಲಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಸ್ವಲ್ಪ ಹಣ ನೀಡಿದರೆ, ಮುಂದಿನ ತಿಂಗಳು ಬೆಲೆ ಬಾಳುವ ಉಡುಗೊರೆಯೊಂದಿಗೆ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿದ ನಿಲೋಫರ್, ಹಂತ-ಹಂತವಾಗಿ 18.29 ಲಕ್ಷ ಹಣವನ್ನು ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಆಗ ತಾನು ಮೋಸ ಹೋಗಿರುವುದನ್ನು ಅರಿತ ನಿಲೋಫರ್ ಕೂಡಲೇ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.