ಚೆನ್ನಾವರ : ಜುಮಾ ಮಸೀದಿಯಲ್ಲಿ ಈದ್‌ಮಿಲಾದ್, ಮದೀನಾ ಮಿಲಾದ್ ಸ್ಪರ್ಧೆ

ಸವಣೂರು : ಮುಹಿಯದ್ದೀನ್ ಜುಮಾ ಮಸೀದಿ, ಖಿದ್ಮತುಲ್ ಇಸ್ಲಾಂ ಜಮಾತ್ ಕಮಿಟಿ ಚೆನ್ನಾವರ
ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ ) ರವರ 1496 ಜನ್ಮ ದಿನಾಚರಣೆ ಹಾಗೂ ಮದರಸ ವಿದ್ಯಾರ್ಥಿಗಳ ಮದದೇ ಮದೀನಾ ಮೀಲಾದ್ ಸ್ಪರ್ಧಾ ಕಾರ್ಯಕ್ರಮ(2021) ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಮ್ಮದ್ ಶಾಫಿ ವಹಿಸಿದರು
ಧ್ವಜಾರೋಹಣವನ್ನು ಮಾಜಿ ಅಧ್ಯಕ್ಷರುಗಳಾದ ಉಸ್ಮಾನ್ ಹಾಜಿ ಹಾಗೂ ಮಾಮು ಹಾಜಿ ನೆರವೇರಿಸಿದರು, ಉದ್ಘಾಟನೆಯನ್ನು ಜಮಾತ್ ಖತೀಬ್ ಉಸ್ತಾದ್ ಹಾಫೀಲ್ ನಜಿರ್ ಸಖಾಫಿ ರವರು ಮಾಡಿದರು
ಸದರ್ ಉಸ್ತಾದ್ ಮಹಮ್ಮದ್ ಅಲಿ ಸಖಾಫಿ ಸ್ವಾಗತ ಭಾಷಣ ಮಾಡಿದರು
ರಾಶಿದ್ ಅಹಸನಿ ಮುಖ್ಯ ಪ್ರಭಾಷಣ ಮಾಡಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ವಖ್ಫ್ ಸದಸ್ಯರಾದ ಇಸ್ಮಾಯಿಲ್ ಕಾನವು, ಆಡಳಿತ ಸಮಿತಿ ಸದಸ್ಯರಾದ, ಜಮಾಲುದ್ದೀನ್, ಅಬ್ದುಲ್ ರಹಿಮಾನ್, ಹನೀಫ್ ಕುಂಡಡ್ಕ, ಶರೀಫ್ ಕುಂಡಡ್ಕ ಉಪಸ್ಥಿತರಿದ್ದರು,
ಜಮಾತಿನ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಿ.ಪಿ.ಅಬ್ದುಲ್ಲಾ ವಂದಿಸಿದರು. ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು

Ad Widget

Leave a Reply

error: Content is protected !!
Scroll to Top
%d bloggers like this: