ಹಣ್ಣಿನ ಜ್ಯೂಸ್ ಎಂದು ತಪ್ಪಾಗಿ ತಿಳಿದು ಆಲ್ಕೋಹಾಲ್ ಸೇವಿಸಿ ಬಾಲಕ ಸಾವು

Share the Article

ಹಣ್ಣಿನ ಜ್ಯೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ ಬಾಲಕನ್ನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್‍ನಲ್ಲಿ ನಡೆದಿದೆ.

ರಾಕೇಶ್ (5) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಆತನ 62 ವರ್ಷದ ತಾತ ಚಿನ್ನಸ್ವಾಮಿ ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. ಇದನ್ನು ನೋಡಿದ ಬಾಲಕ ಜ್ಯೂಸ್ ಎಂದು ಕುಡಿದು ಸಾವನ್ನಪ್ಪಿದ್ದಾನೆ.

ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜ್ಯೂಸ್ ಎಂದು ತಪ್ಪು ತಿಳಿದ ರಾಕೇಶ್ ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಏಕಾಏಕಿ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

Leave A Reply