ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್!! | ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು?? | ಇಲ್ಲಿದೆ ಆ ಫನ್ನಿ ವೈರಲ್ ವಿಡಿಯೋ

ಇತ್ತೀಚಿನ ದಿನಗಳಲ್ಲಿ ಹಾಸ್ಯಗಳಿಗೆ ಅಂತೂ ಕಡಿಮೆ ಇಲ್ಲ ಬಿಡಿ.ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ನಗುವಿನ ಮಳೆಯೇ ಸುರಿಯುತ್ತಿರುತ್ತದೆ. ಹೀಗೆ ಇವಾಗ ಅಂತೂ ವಸ್ತುಗಳ ಡೆಲಿವರಿ ಚಾಲಕರ ಅವಿವೇಕಗಳು, ತಮಾಷೆಯ ವರ್ತನೆಗಳು ಸಾಮಾನ್ಯವಾಗಿಬಿಟ್ಟಿದೆ.

ಅಮೆಜಾನ್ ಡೆಲಿವರಿ ಚಾಲಕರನ್ನು ನಾಯಿಗಳು ಓಡಿಸುವುದು, ಕೊರಿಯರ್ ಚಾಲಕ ಗ್ರಾಹಕರ ಮನೆಯ ಹೊರಗೆ ಮಲವಿಸರ್ಜನೆ ಮಾಡುವುದು ಮತ್ತು ಆಹಾರ ವಿತರಣಾ ಚಾಲಕರು ಗ್ರಾಹಕರ ಆಹಾರವನ್ನು ಅವರ ಮನೆಬಾಗಿಲಿಗೆ ಹಾಕುವ ಮುನ್ನ ತಿನ್ನುತ್ತಿರುವ ವಿಡಿಯೋಗಳನ್ನು ನೋಡಿರುತ್ತೀರಿ.ಆದರೆ, ಇಲ್ಲೊಬ್ಬ ಡೆಲಿವರಿ ವ್ಯಕ್ತಿಯ ವಿಡಿಯೋ ನೋಡಿದ್ರೆ ನೀವು ಖಂಡಿತಾ ಮನೋರಂಜನೆ ಪಡೆಯುವುದರಲ್ಲಿ ಡೌಟ್ ಯೇ ಇಲ್ಲ ಬಿಡಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸ್ಯಾನ್ ಡಿಯಾಗೋದಲ್ಲಿನ ಡೋರ್‌ಬೆಲ್ ಕ್ಯಾಮರಾ, ಅಮೆಜಾನ್ ಚಾಲಕನ ಉಲ್ಲಾಸದ ವಿಡಿಯೋವನ್ನು ಸೆರೆಹಿಡಿದಿದೆ. ತನ್ನ ಕೈಯಲ್ಲಿ ಕೆಲವು ಲಘು ಪ್ಯಾಕೇಜ್‌ಗಳೊಂದಿಗೆ ಗ್ರಾಹಕರ ಪ್ರವೇಶದ್ವಾರದವರೆಗೆ ಬಂದ ಚಾಲಕ ನೊಣಗಳಿಂದ ದಾಳಿಗೊಳಗಾಗಿದ್ದಾನೆ. ತನ್ನ ಕೈಯಲ್ಲಿದ್ದ ಪಾರ್ಸೆಲ್ ನಿಂದಲೇ ನೊಣಗಳನ್ನು ಓಡಿಸುತ್ತಾನೆ. ಈ ವೇಳೆ ಒಂದು ಅವನ ಕೈಯಿಂದ ತಪ್ಪಿ ಛಾವಣಿಯ ಮೇಲೆ ಹಾರಿ ಬಿದ್ದಿದೆ. ನಂತರ ಏಣಿ ತಂದು ಪಾರ್ಸೆಲ್ ತೆಗೆಯಲಾಗಿದೆ.

ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ನಂತರ ಈ ಉಲ್ಲಾಸದ ವಿಡಿಯೋವನ್ನು ಒಂದು ಮಿಲಿಯನ್ ಜನರು ವೀಕ್ಷಿಸಿದ್ದು, ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿದೆ. ಬಳಕೆದಾರರೊಬ್ಬರು, “ಅಮೆಜಾನ್ ಟ್ರಕ್‌ಗಳು ಈಗ ಏಣಿಗಳನ್ನು ಹೊಂದಲಿವೆ” ಎಂದು ವ್ಯಂಗ್ಯವಾಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: