ಕಬಾಬ್ ತಿನ್ನುವ ಬಾಯಿ ಚಪಲದಿಂದ ಸಿಕ್ಕಿ ಹಾಕಿಕೊಂಡ ಐಸಿಸ್ ಉಗ್ರ ?! | ಇಂಟ್ರೆಸ್ಟಿಂಗ್ ಮಾಹಿತಿ ಇದೀಗ ಬಹಿರಂಗ !

ಉಗ್ರರೆಲ್ಲಾ ಪೊಲೀಸರ ಕೈಗೆ ಸಿಕ್ಕಿಬೀಳುವುದು ಬಹಳ ಕಷ್ಟ. ಅದರಲ್ಲೂ ಐಸಿಸ್ ಉಗ್ರರಂತೂ ಸಿಕ್ಕಿಬೀಳುವುದು ಬಹಳ ದೂರದ ಮಾತೇ ಸರಿ. ಆದರೆ ಇಲ್ಲೊಬ್ಬ ಐಸಿಸ್ ಉಗ್ರ ಬಹಳ ಸುಲಭವಾಗೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ವರ್ಷ ನಡೆದ ಈ ಪ್ರಕರಣ ಇದೀಗ ಬಹಿರಂಗಗೊಂಡಿದೆ.

ಹೌದು, ಇಸ್ಲಾಮಿಕ್ ಸ್ಟೇಟ್ ನ ಉಗ್ರ ಕಬಾಬ್ ತಿನ್ನುವ ಚಪಲದಿಂದಾಗಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ. 31 ವರ್ಷದ ಮಾಜಿ ರ್ಯಾಪರ್ ಅಬ್ದೆಲ್ -ಮಜೀದ್ ಅಬ್ದೆಲ್ ಬ್ಯಾರಿ ಐಸಿಸ್ ಪರವಾಗಿ ಸಿರಿಯಾದಲ್ಲಿ ಕೆಲಸ ಮಾಡಲು ತೆರಳಿದ್ದನು. ಅಲ್ಲಿಂದ ಆತ ನೇರವಾಗಿ ಸ್ಪೇನ್ ಸೇರಿಕೊಂಡಿದ್ದನು. ಆದ್ರೆ ಕಬಾಬ್ ತಿನ್ನುವ ಚಪಲದಿಂದಾಗಿ ಪೊಲೀಸರಿಗೆ ಕೈ ತಗ್ಲಾಕೊಂಡಿರುವ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯಾ ಟು ಅಲ್ಜಿರಿಯಾ ಟು ಸ್ಪೇನ್!

ಬ್ರಿಟನ್ ಮೂಲದ ಅಬ್ದೆಲ್ 2013ಕ್ಕೂ ಮೊದಲೇ ಸಿರಿಯಾ ಸೇರಿಕೊಂಡಿದ್ದನು. ಅಬ್ದೆಲ್ ಸಾಮಾನ್ಯರಿಗಿಂತ ಹೆಚ್ಚು ತೂಕ ಹೊಂದಿದ್ದನು. ಕೆಲ ವರ್ಷ ಸಿರಿಯಾದಲ್ಲಿದ್ದ ಅಬ್ದೆಲ್, ಅಲ್ಲಿಂದ ಅಲ್ಜಿರಿತಾ ತಲುಪಿದ್ದನು. ಮತ್ತೆ ಸ್ಥಳ ಬದಲಿಸಿದ್ದ ಉಗ್ರ ಸ್ಪೇನ್ ನಲ್ಲಿ ವಾಸವಾಗಿದ್ದನು. ಸ್ಪ್ಯಾನಿಶ್ ಪೊಲೀಸರಿಗೆ ಗುಪ್ತಚರದಳ ಉಗ್ರನೋರ್ವ ನಗರ ಪ್ರವೇಶ ಮಾಡಿರುವ ಕುರಿತು ಮಾಹಿತಿ ನೀಡಿದ್ದರು. ಆದರೆ ಪೊಲೀಸರಿಗೆ ಉಗ್ರ ಯಾರು? ಹೇಗಿದ್ದಾನೆ ಎಂಬುದರ ಮಾಹಿತಿ ಇರಲಿಲ್ಲ.

ಆನ್‍ಲೈನ್ ನಲ್ಲಿ ಕಬಾಬ್ ಆರ್ಡರ್ ಮಾಡ್ತಿದ್ದ

ಉಗ್ರನ ಕರಿನೆರಳು ನಗರದ ಮೇಲೆ ಬಿದ್ದಿರುವ ವಿಷಯ ತಿಳಿಯುತ್ತಲೇ ಪೊಲೀಸರು ಹೈಅಲರ್ಟ್ ಆಗಿದ್ದರು. ಸಾಮಾಜಿಕ ಜಾಲತಾಣ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿರಿಸಿದ್ದರು. ಅನುಮಾನಾಸ್ಪದ ಇಬ್ಬರು ವ್ಯಕ್ತಿಗಳು ಆನ್‍ಲೈನ್ ಮುಖಾಂತರ ಪದೇ ಪದೇ ಕಬಾಬ್ ಆರ್ಡರ್ ಮಾಡುತ್ತಿರುವ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಕಬಾಬ್ ಆರ್ಡರ್ ಮಾಡುತ್ತಿದ್ದ ವ್ಯಕ್ತಿಗಳು ಉಳಿದುಕೊಂಡಿದ್ದ ಕಟ್ಟಡದ ಮಾಹಿತಿ ಕಲೆ ಹಾಕಿ, ಕ್ರಮಯೋಜಿತವಾಗಿ ತಂತ್ರಗಾರಿಕೆ ರೂಪಿಸಿ ಉಗ್ರನನ್ನು ಬಂಧಿಸಿದ್ದಾರೆ.

ಸ್ಥಳೀಯ ಕೆಲ ಮಾಧ್ಯಮಗಳ ಪ್ರಕಾರ ಬಂಧಿತ ಉಗ್ರ ಅಬ್ದೆಲ್-ಮಜೀದ್ ಅಬ್ದೆಲ್ ಬ್ಯಾರಿ, ಬಂಧನಕ್ಕೂ ಐದು ದಿನಗಳ ಮುನ್ನ ರಾತ್ರಿ 10.46ಕ್ಕೆ ಕಬಾಬ್ ಆರ್ಡರ್ ಮಾಡಿದ್ದನು. ಮರುದಿನ ರಾತ್ರಿ 10 ಗಂಟೆಗೂ ಆತ ಕಬಾಬ್ ಆರ್ಡರ್ ಮಾಡಿದ್ದನು.

ಆತನ ಕಿವಿಯಿಂದ ಸಿಕ್ತು ಗುರುತು!

ಉಗ್ರರು ಆನ್‍ಲೈನ್ ನಲ್ಲಿ ಕಬಾಬ್ ಆರ್ಡರ್ ಮಾಡುತ್ತಿರುವ ವಿಷಯ ಗುಪ್ತಚರ ಇಲಾಖೆಗೆ ಸಿಕ್ಕಿತ್ತು. ಪೊಲೀಸರು ಆತನ ಕಿವಿಯಿಂದಲೇ ಇವನು ಅಬ್ದೆಲ್-ಮಜೀದ್ ಅಬ್ದೆಲ್ ಬ್ಯಾರಿ ಎಂಬುವುದನ್ನು ಖಾತ್ರಿ ಮಾಡಿಕೊಂಡಿದ್ದರು. ಕಾರಣ ತೂಕ ಮೊದಲಿಗಿಂತಲೂ ಹೆಚ್ಚಾಗಿದ್ದರಿಂದ ಉಗ್ರನ ಯಾವುದೇ ಫೋಟೋ ಪೊಲೀಸರ ಬಳಿ ಇರಲಿಲ್ಲ. ದಢೂತಿ ವ್ಯಕ್ತಿ ಅನ್ನೋದು ಖಚಿತವಾಗುತ್ತಲೇ ಪೊಲೀಸರು ಆತ ಅಬ್ದೆಲ್-ಮಜೀದ್ ಅಬ್ದೆಲ್ ಬ್ಯಾರಿ ಎಂದು ಊಹಿಸಿದ್ದರು. ದಾಳಿ ನಡೆಸಿದ ಪೊಲೀಸರು ಅಬ್ದೆಲ್ ಜೊತೆ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಕೆಲ ವರದಿಗಳ ಪ್ರಕಾರ, ಈತ ಇರಾಕ್ ಸೇನೆಯಿಂದ ಬಂಧನಕ್ಕೆ ಒಳಗಾಗಿದ್ದನು ಎಂದು ಹೇಳಲಾಗುತ್ತಿದೆ. ಅಬ್ದೆಲ್ ದಡೂತಿ ಆಗಿದ್ದರಿಂದ ಕಾರ್ ನಲ್ಲಿ ಸ್ಥಳ ಇಕ್ಕಟ್ಟು ಆಗಿದ್ದರಿಂದ ಟ್ರಕ್ ನಲ್ಲಿ ಜೈಲಿಗೆ ಸಾಗಿಸಲಾಗಿತ್ತು. ಸದ್ಯ ಉಗ್ರ ಅಬ್ದುಲ್ ಮೆಡ್ರಿಡ್ ಬಳಿಯ ಪಾಸ್ ಸೋಟೋ ಜೈಲಿನಲ್ಲಿದ್ದಾನೆ. ಒಂದು ವರ್ಷದ ಹಿಂದೆಯೇ ಆತನ ಜೈಲು ಸೇರಿದ್ರೂ ಸದ್ಯ ಆತನ ಬಂಧನದ ಕುರಿತ ಮಾಹಿತಿ ಹೊರ ಬಿದ್ದಿದೆ.

Leave A Reply

Your email address will not be published.