ರಾಮಕುಂಜ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ನಾಪತ್ತೆ ,ಅಪಹರಣ ಶಂಕೆ ,ಪೊಲೀಸರಿಗೆ ದೂರು

ಕಡಬ : ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಜನ್ ಅವರು ನಾಪತ್ತೆಯಾಗಿದ್ದು,ಅಪಹರಣ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಕಡಬ ತಾಲೂಕು ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಬಾಲಕರ ವಸತಿ ನಿಲಯದ ಮ್ಯಾನೇಜರ್ ರಮೇಶ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ,ಎಮ್ ಎಂಬಾತನು ದಿನಾಂಕ 21-09-2021 ರಂದು ಬೆಳಿಗ್ಗೆ 09.00 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು ನಂತರ . ಮದ್ಯಾಹ್ನ12-40 ಗಂಟೆಗೆ ಕಾಲೇಜು ವಿದ್ಯಾರ್ಥಿಗಳು ಊಟಕ್ಕೆ ವಸತಿ ನಿಲಯಕ್ಕೆ ಬಂದ ಸಮಯ ಅಂಜನ್ ಸಿ,ಎಮ್ ಕಾಲೇಜಿಗೆ ಹೋಗದೇ ಇರುವ ವಿಚಾರ ವಿದ್ಯಾರ್ಥಿಗಳಿಂದ ತಿಳಿದು ಬಂದಿದ್ದು ಈ ವಿಚಾರದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ವಿಚಾರಿಸಿದಾಗ ಕಾಲೇಜಿಗೆ ಬಾರದೇ ಇರುವ ವಿಚಾರವನ್ನು ಪ್ರಾಂಶುಪಾಲರು ಮ್ಯಾನೇಜರ್ ರಮೇಶ್ ಅವರಿಗೆ ತಿಳಿಸಿದ್ದು,,ನಂತರ ಅಂಜನ್ ಸಿ,ಎಮ್ ಅವರ ಸ್ವಂತ ವಿಳಾಸವಾದ ಸಿಂಚನಾ ಬ್ಯೂಟಿ ಪಾರ್ಲರ್ , ಮಾರಿಗುಡ್ಡನ ಹಳ್ಳಿ ಕಲ್ಯಾಣ ನಗರ ಚಿಕ್ಕಮಗಳೂರು ಎಂಬಲ್ಲಿ ಅವರ ಪೋಷಕರಲ್ಲಿ ದೂರವಾಣಿ ಮುಖಾಂತರ ವಿಚಾರಿಸಲಾಗಿ ಅಂಜನ್ ಸಿ,ಎಮ್ ಮನೆಗೆ ಬಂದಿಲ್ಲವಾಗಿ ತಿಳಿಸಿದ್ದಾರೆ.

Ad Widget / / Ad Widget

ಈ ಕುರಿತು ಸಂಸ್ಥೆಯ ಸಿಬ್ಬಂದಿಗಳು ಸ್ಥಳೀಯವಾಗಿ ಎಲ್ಲಾ ಕಡೆ ಹುಡುಕಾಡಿ ವಿಚಾರಿಸಲಾಗಿ ಎಲ್ಲಿಯೂ ಕಂಡುಬಂದಿರುವುದಿಲ್ಲ ಹಾಗೂ ಅಂಜನ್ ಸಿ,ಎಮ್ ಯಾರಿಗೂ ತಿಳಿಸದೇ ವಸತಿ ನಿಲಯಕ್ಕೂ ಬಾರದೇ ಸ್ವಂತ ಮನೆಗೂ ಹೋಗದೇ ಸಂಭದಿಕರ ಮನೆಗೂ ಹೋಗದೇ ಕಾಣೆಯಾಗಿದ್ದು ಯಾರೋ ಅಪಹರಿಸಿರಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: