ಸ್ಥಿರತೆ ಕಾಯ್ದುಕೊಂಡ ಮಂಗಳೂರು ಚಾಲಿ ಹೊಸ ಅಡಿಕೆ ಮಾರುಕಟ್ಟೆ | ಈ ವಾರ ಇದೇ ಧಾರಣೆ ಇರುವ ಲಕ್ಷಣ

ಅಡಿಕೆ ಮಾರುಕಟ್ಟೆ ಕಳೆದ ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಕಳೆದ ವಾರ ಇಡೀ ಏರಿಕೆಯ ಹಾದಿಯಲ್ಲಿಯೇ ಸಾಗಿದ ಅಡಿಕೆ ಮಾರುಕಟ್ಟೆ ಈ ವಾರ ಸ್ಥಿರತೆ ಕಾಯ್ದು ಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿವೆ.

ಮಂಗಳವಾರ ಕ್ಯಾಂಪ್ಕೋ ತನ್ನ ಮಾರುಕಟ್ಟೆ ದರದಲ್ಲಿ ಏರಿಕೆ ಮಾಡದೇ ಸೋಮವಾರದ ದರದಲ್ಲೇ ಹೊಸ ಅಡಿಕೆ 500 ರೂಪಾಯಿ ಹಾಗೂ ಹಳೆ ಅಡಿಕೆ 515 ರೂಪಾಯಿಗೆ ಖರೀದಿ ಮಾಡಿದೆ.

ಹೊರ ಮಾರುಕಟ್ಟೆಯಲ್ಲೂ ಇದೇ ಧಾರಣೆಯಲ್ಲಿ ಇದ್ದಾರೆ. ಕೆಲವೆಡೆಗಳಲ್ಲಿ ಹೊಸ ಅಡಿಕೆಗೆ 505-510 ರೂಪಾಯಿವರೆಗೂ ಸೋಮವಾರ ಖರೀದಿ ಮಾಡಿದ್ದಾರೆ. ಮಂಗಳವಾರವೂ ಇದೇ ಧಾರಣೆ ಕಾಯ್ದುಕೊಂಡಿದೆ.

Leave A Reply