ಆನ್ಲೈನ್ ಕ್ಲಾಸ್ ತಪ್ಪಿಸಿಕೊಳ್ಳಲು ಹುಡುಗಿಯ ಲೇಟೆಸ್ಟ್ ಐಡಿಯಾ | ತನ್ನದೇ ಗೊಂಬೆ ತಯಾರಿಸಿ ಅದಕ್ಕೆ ಮಾಸ್ಕ್ ತಗುಲಿಸಿ ಕ್ಯಾಮರಾ ಮುಂದಿಟ್ಟು ನಿದ್ದೆ ಹೋದ ಪೋರಿ !

Share the Article

ನವದೆಹಲಿ: ಕೊರೊನಾ ಸಾಂಕ್ರಾಮಿಕ ಕೊರೊನಾ ಕಾರಣದಿಂದ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸ್ಮಾರ್ಟ್‌ಫೋನ್‌ ಮೂಲಕವೇ ಆನ್‌ಲೈನ್‌ ಕ್ಲಾಸ್ ನಡೆಸಲಾಗುತ್ತಿದೆ. ಆನ್‌ಲೈನ್‌ ತರಗತಿಗಳ ಅವಾಂತರಗಳ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಆಗಿಂದೀಗ್ಗೆ ಅನೇಕ ವಿಡಿಯೋ ಮತ್ತು ಫೋಟೋ ಸಹಿತ ವೈರಲ್ ವಿಷಯಗಳು ಚಲಾವಣೆಗೆ ಬರ್ತಾನೇ ಇದೆ.

ತುಂಟ ಹುಡುಗ ಹುಡುಗಿಯರಿಗಂತೂ ಕ್ಲಾಸೇ ಬೇಡ. ಕೆಲವರಂತೂ ಆನ್‌ಲೈನ್‌ ತರಗತಿಗಳಿಂದ ತಪ್ಪಿಸಿಕೊಳ್ಳಲು ಚಿತ್ರ-ವಿಚಿತ್ರ ಉಪಾಯಗಳನ್ನು ಹುಡುಕಿ ಕೊನೆಗೆ ಸಿಕ್ಕಬಿದ್ದ ಅನೇಕ ಪ್ರಸಂಗಗಳು ನಡೆದಿವೆ. ಇದೀಗ ಅಂತದ್ದೆ ಮತ್ತೊಂದು ಪ್ರಸಂಗ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆನ್‌ಲೈನ್‌ ತರಗತಿ ತಪ್ಪಿಸಿಕೊಳ್ಳಲು ಹುಡುಗಿಯೊಬ್ಬಳು ಮಾಡಿದ ಉಪಾಯ ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರೆ, ಶಿಕ್ಷಕರು ಮುನಿಸಿಕೊಂಡಿದ್ದಾರೆ. 

ಆನ್‌ಲೈನ್ ತರಗತಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಹುಡುಗಿ ಲ್ಯಾಪ್‌ಟಾಪ್ ಮುಂದೆ ತನ್ನದೇ ರೀತಿಯ ಡಮ್ಮಿ ಗೊಂಬೆಯೊಂದನ್ನು ಪ್ರತಿಷ್ಠಾಪಿಸಿ, ನಂತರ ಪಕ್ಕದಲ್ಲೇ ಸಖತ್ ಆಗಿ ನಿದ್ದೆ ಹೊಡೆದಿದ್ದಾಳೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಗತಿಯಿಂದ ಬೇಜಾರಾದಾಗ ತನ್ನದೇ ರೀತಿಯ ಗೊಂಬೆಯೊಂದನ್ನು ಸಿದ್ಧಪಡಿಸಿ ಅದನ್ನು ಲ್ಯಾಪ್‌ಟಾಪ್ ಮುಂದೆ ಇರಿಸಿ, ಅದಕ್ಕೆ ಮಾಸ್ಕ್ ತಗುಲಿಸಿದ್ದಾಳೆ. ಇದನ್ನು ನೋಡಿದರೆ ಥೇಟು ಹುಡುಗಿ ಆನ್‌ಲೈನ್ ಕ್ಲಾಸ್ ನಲ್ಲಿ ತದೇಕ ಚಿತ್ತದಿಂದ ಪಾಠ ಕೇಳುತ್ತಿದ್ದಾಲೇನೋ ಎನ್ನಿಸುತ್ತದೆ. ಯಾರಿಗೂ ಸಂಶಯ ಬಾರದಂತೆ ಪ್ಲಾನ್ ಮಾಡಿದ ಪೋಕರಿ ಹುಡುಗಿ ಪಕ್ಕದಲ್ಲಿಯೇ ನಿದ್ರೆಗೆ ಹೋಗಿದ್ದಾಳೆ.
ಅಲ್ಲದೆ, ಲ್ಯಾಪ್‌ಟಾಪ್ ಮುಂದೆ ಇರಿದಿದ ಗೊಂಬೆಗೆ ಥೇಟ್ ಅವಳಂತೆಯೇ ಸಿಂಗರಿಸಲಾಗಿದೆ. ಅದಕ್ಕೆ ವಿಗ್ ಮತ್ತು ಕನ್ನಡಕವನ್ನೂ ಹಾಕಿದ್ದಾಳೆ. ತಾನು ಮಾತ್ರ ಆನ್‌ಲೈನ್ ಕ್ಲಾಸ್ ತಪ್ಪಿಸಿಕೊಂಡು ಪಕ್ಕದ ಬೆಡ್ ಮೇಲೆ ಗಡತ್ತಾಗಿ ನಿದ್ದೆ ಮಾಡಿದ್ದಾಳೆ. ನಿದ್ದೆ ಮಾಡೋ ಸ್ಟೂಡೆಂಟ್ಸ್ ಇರ್ತಾರೆ ಮೇಷ್ಟ್ರೇ ಎಚ್ಚರ !! (ಕೊನೆಯಲ್ಲಿ ವಿಡಿಯೋೋ ಇದೆೆ)

https://twitter.com/Fun_Viral_Vids/status/1437371171578732547?ref_src=twsrc%5Etfw%7Ctwcamp%5Etweetembed%7Ctwterm%5E1437371171578732547%7Ctwgr%5E%7Ctwcon%5Es1_&ref_url=https%3A%2F%2Fd-253377826968567764.ampproject.net%2F2109032350000%2Fframe.html

Leave A Reply