ನೀವು ಸಿನಿಮಾ ಹುಚ್ಚರೇ ? ಹಾಗಿದ್ದರೆ ನಿಮಗಿದೆ ಒಂದು ಭರ್ಜರಿ ಅವಕಾಶ | 10 ದಿನದಲ್ಲಿ ಈ 13 ಹಾರರ್ ಸಿನಿಮಾಗಳನ್ನು ನೋಡಿದರೆ ನೀವು ಗಳಿಸಬಹುದು 96,000 ರೂ!!

ವಾರಾಂತ್ಯ ಬಂದರೆ ಸಾಕು ಒಂದಾದರೂ ಸಿನಿಮಾ ನೋಡಬೇಕೆಂದು ಬಹಳ ಮಂದಿ ಯೋಜನೆ ರೂಪಿಸಿರುತ್ತಾರೆ. ಏಕೆಂದರೆ ಸಿನಿಮಾ ನೋಡುವುದು ಎಂದರೆ ಕೆಲವರಿಗೆ ಬಹಳ ಖುಷಿ ನೀಡುವ ವಿಷಯ. ಕೆಲವರಂತೂ ಹೊಸ ಸಿನಿಮಾದ ಮೊದಲ ಪ್ರದರ್ಶನಕ್ಕೆ ತುದಿಗಾಲಲ್ಲಿ ಹುಚ್ಚರಂತೆ ಕಾಯುತ್ತಿರುತ್ತಾರೆ. ಅದರಲ್ಲಿಯೂ ಭಯಾನಕ ಚಿತ್ರ (ಹಾರರ್ ಫಿಲ್ಮ್) ನೋಡುವುದು ಕೆಲವರಿಗೆ ಪಂಚಪ್ರಾಣ.

 

ಅಂಥವರಿಗೆ ಒಂದು ದೊಡ್ಡ ಆಫರ್ ಅನ್ನು ಅಮೆರಿಕದ ಫೈನಾನ್ಸ್ ಬುಝ್ ಕಂಪೆನಿ ನೀಡಿದೆ. ಅದೇನೆಂದರೆ 10 ದಿನಗಳಲ್ಲಿ 13 ಹಾರರ್ ಫಿಲ್ಮ್ ಗಳನ್ನು ನೋಡಿದರೆ ಅಂಥವರಿಗೆ 1,300 ಅಮೆರಿಕನ್ ಡಾಲರ್ (ಸುಮಾರು 96 ಸಾವಿರ ರೂ) ನೀಡುವುದಾಗಿ ಕಂಪೆನಿ ಘೋಷಿಸಿದೆ.

ಬರುವ ಅಕ್ಟೋಬರ್‌ನಲ್ಲಿ ಈ ಮೊತ್ತ ನೀಡಲಾಗುವುದು. ಅಲ್ಲಿಯವರೆಗೆ 10 ದಿನಗಳಲ್ಲಿ ನಾವು ಹೇಳಿರುವ 13 ಚಿತ್ರಗಳನ್ನು ನೋಡಬೇಕು ಎಂದು ಕಂಪೆನಿ ಹೇಳಿದೆ. ಇಷ್ಟು ದೊಡ್ಡ ಮೊತ್ತವನ್ನು ಕಂಪೆನಿ ನೀಡಲು ಕಾರಣವೇನಿರಬಹುದು?? ಎಷ್ಟೇ ಗಟ್ಟಿ ಗುಂಡಿಗೆಯುಳ್ಳವರೇ ಆಗಿದ್ದರೂ, ಭೂತ ಪ್ರೇತಗಳಿಗೆ ಭಯಪಡದೇ ಇವೆಲ್ಲಾ ಸುಳ್ಳೆಂದು ಹೇಳುವವರೂ ಕೂಡ ಈ ಚಿತ್ರಗಳನ್ನು ಒಂದರ ಮೇಲೊಂದರಂತೆ ನೋಡಿದರೆ ಗಡಗಡ ನಡುವುದು ಖಂಡಿತ. ಇಷ್ಟೂ ಚಿತ್ರಗಳನ್ನು ಪ್ರತಿನಿತ್ಯ ನೋಡಲು ಸಾಧ್ಯವೇ ಇಲ್ಲ ಎನ್ನುವುದು ಕಂಪೆನಿಯ ವಾದ.

ಅಷ್ಟಕ್ಕೂ ಇಂಥದ್ದೊಂದು ಆಫರ್ ನೀಡಿರಲು ಕಾರಣ, ದುಬಾರಿ ಬಜೆಟ್ ಮತ್ತು ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕಿದೆಯಂತೆ. ಅದಕ್ಕಾಗಿ ಈ 13 ಚಲನಚಿತ್ರಗಳನ್ನು ವೀಕ್ಷಿಸುವ ವ್ಯಕ್ತಿಗಳ ಹೃದಯ ಬಡಿತವನ್ನು ಫಿಟ್‌ಬಿಟ್ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ನಿಮಗೆ ಈ ಧೈರ್ಯ ಇದೆಯೆ? ಹಾಗಿದ್ದರೆ ಸೆ.26 ರ ಒಳಗೆ ಹೆಸರನ್ನು ನೋಂದಾಯಿಸಬೇಕು.18 ವರ್ಷ ಮೇಲ್ಪಟ್ಟ ಅಮೆರಿಕದ ವ್ಯಕ್ತಿಗಳಿಗೆ ಮಾತ್ರ ಹೆಸರನ್ನು ನೋಂದಾಯಿಸಲು ಅವಕಾಶವಿದೆ. ಈ ಚಿತ್ರಗಳನ್ನು ನೋಡಲು ಆಯ್ಕೆಯಾಗುವವರಿಗೆ ಸಿನಿಮಾದ ಶೇ.50ರ ವೆಚ್ಚವನ್ನು ಕಂಪೆನಿ ಭರಿಸಲಿದೆ.

ನಿಮಗೆ ಸಾಧ್ಯವಿಲ್ಲದಿದ್ದರೆ ಅಮೆರಿಕದಲ್ಲಿರುವ ನಿಮ್ಮ ಸ್ನೇಹಿತರಿಗೆ, ಹಿತೈಷಿಗಳಿಗೆ, ಕುಟುಂಬಸ್ಥರಿಗೆ ಈ ಮಾಹಿತಿಯನ್ನು ನೀಡಿ ಎಂದು ಕಂಪೆನಿ ಹೇಳಿದೆ.

ಆಸಕ್ತರು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. https://financebuzz.com/get-paid-to-watch-scary-movies

ನೀವು ನೋಡಬೇಕಾಗಿರುವ 13 ಸಿನಿಮಾಗಳು ಇವು:

Saw, Amityville Horror, A Quiet Place, A Quiet Place Part 2, Candyman, Insidious, The Blair Witch Project, Sinister, Get Out, The Purge, Halloween (2018), Paranormal Activity, Annabelle.

Leave A Reply

Your email address will not be published.