ಮಂಗಳೂರು : ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ,ಹಣದೊಂದಿಗೆ ಪರಾರಿ | ಮನೆಯವರು ಕೂಡಿಟ್ಟ ಹಣವನ್ನು ಅನ್ಯಕೋಮಿನ ಯುವಕ ಖಾತೆಗೆ ಜಮೆ ಮಾಡಿ ನಾಪತ್ತೆ

Share the Article

ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ಮತ್ತು ಹಣವನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಗದಗದ ನಿವಾಸಿಗಳಾಗಿದ್ದು, ಬರ್ಕೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಚ್‌ಮನ್‌ ಆಗಿರುವ ಯಶೋಧಾ ಅವರ ಪುತ್ರಿ ರೇಶ್ಮಾ (21) ಅವರ ನಿಶ್ಚಿತಾರ್ಥ ಆ. 21ರಂದು ನಡೆದಿತ್ತು.

ನಿಶ್ಚಿತಾರ್ಥ ಸಂದರ್ಭ ಹುಡುಗನ ಮನೆಯವರು ಅಂದಾಜು ಒಂದು ಲ.ರೂ. ಮೌಲ್ಯದ ಚಿನ್ನದ ಸರ, 50,000 ರೂ. ಮೌಲ್ಯದ ಚಿನ್ನದ ಉಂಗುರ, ಕಿವಿಯೋಲೆ, ಬೆಳ್ಳಿ ಕಾಲುಗೆಜ್ಜೆ ಹಾಕಿದ್ದರು.

ರೇಶ್ಮಾ ಆ. 26ರಂದು ಈ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ. ಅಲ್ಲದೆ ಮನೆಯವರು ಬ್ಯಾಂಕ್‌ನಲ್ಲಿ ಜಮೆ ಮಾಡಿಟ್ಟಿದ್ದ 90,000 ರೂ. ಹಣವನ್ನು ಅಕ್ಬರ್‌ ಆಲಿ ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave A Reply