ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಕಾದಿದೆ ಬಿಗ್ ಶಾಕ್!!ದುಬಾರಿ ಟಿಕೆಟ್ ದರ ನಿಗದಿ ಮಾಡಿ ಹಗಲು ದರೋಡೆಗಿಳಿದ ಖಾಸಗಿ ಬಸ್ ಸಂಸ್ಥೆಗಳು

ಎಲ್ಲಿ!? ಯಾವಾಗ!!? ಹೇಗೆ!? ಹಣ ಗಳಿಸೋದು ಎಂದು ಹೊಂಚು ಹಾಕುತ್ತಿರುವ ಜನಸಾಮಾನ್ಯರಿಗೆ ದೊಡ್ಡ ಮೋಸದ ಹೊಡೆತ ಬಿದ್ದಿದ್ದು,ಇದೀಗ ತಮ್ಮೂರಿಗೆ ಗಣೇಶ ಹಬ್ಬಕ್ಕೆ ಹೊರಡಬೇಕಾದರೆ ದುಬಾರಿ ಹಣ ಜೇಬಲ್ಲಿ ಇರಿಸಬೇಕಾದ ಪರಿಸ್ಥಿತಿ ಬಂದಿದೆ.

ಹೌದು, ಗಣೇಶ ಹಬ್ಬದ ನೆಪದಲ್ಲಿ ಖಾಸಗಿ ಬಸ್ ಟಿಕೆಟ್ ದರ ಏರಿಸುತ್ತಿದ್ದು, ತಮ್ಮ ಊರಿಗೆಂದು ಹೊರಟವರಿಗೆ ದಿಕ್ಕೇ ತೋಚದಾಗಿದೆ. ಈ ಎಲ್ಲಾ ಕುತಂತ್ರಗಳು ರಿಯಾಲಿಟಿ ಚೆಕ್ ನಲ್ಲಿ ಹೊರ ಬಿದ್ದಿದ್ದು, ಸಾರಿಗೆ ಸಚಿವರಾದ ಶ್ರೀರಾಮುಲು ಅವರೇ ಈ ಲೂಟಿಗೆ ಬ್ರೇಕ್ ಯಾವಾಗ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

ಈ ರಿಯಾಲಿಟಿ ಚೆಕ್ ನಲ್ಲಿ ಖಾಸಗಿ ಬಸ್ ದಾರರ ನಿಜ ಬಣ್ಣವನ್ನು ಬಯಲಾಗಿದೆ. ಖಾಸಗಿ ಬಸ್ ಗಳ ಲೂಟಿ ಸಂಬಂಧ ಮೊದಲಿಗೆ ರಿಯಾಲಿಟಿ ಚೆಕ್‍ಗೆ ಇಳಿದಿದ್ದು ಗಾಂಧಿನಗರದಲ್ಲಿ. ಟ್ರಾವೆಲ್ ಏಜೆನ್ಸಿ ಒಂದರಲ್ಲಿ ಧಾರವಾಡ, ಕಲಬುರಗಿಗೆ ಬಸ್ ಟಿಕೆಟ್ ಕೇಳಿದಾಗ ಖಾಸಗಿ ಬಸ್ ಟಿಕೆಟ್ ರೇಟ್ ಕೇಳಿ ದಂಗಾಗಿ ಹೋಗೊದಂತೂ ಖಂಡಿತ.

ಮೌರ್ಯ ಸರ್ಕಲ್‍ನಲ್ಲಿ ಮತ್ತೊಂದು ರಿಯಾಲಿಟಿ ಚೆಕ್ ನಡೆಯಿತು. ಬೆಂಗಳೂರಿನಿಂದ ಉಡುಪಿ, ಮಂಗಳೂರಿಗೆ ಟಿಕೆಟ್ ಕೇಳಿದ್ರೆ 1 ಸಾವಿರಕ್ಕಿಂತ ಕಡಿಮೆ ಹೇಳಲೇ ಇಲ್ಲ. ಇನ್ನು ನವರಂಗ್‍ನ ಟ್ರಾವೆಲ್ಸ್ ಏಜೆನ್ಸಿ ಒಂದರಲ್ಲಿ ಬೆಳಗಾವಿಗೆ ಖಾಸಗಿ ಬಸ್ ಟಿಕೆಟ್ ಕೇಳಿದಾಗ ಬೆಂಗಳೂರಿನಿಂದ ಬೆಳಗಾವಿಗೆ ಹೊರಟವರ ಬಳಿ ಖಾಸಗಿ ಬಸ್‍ಗಳ ಸುಲಿಗೆ ಹೇಗಿದೆ ಅನ್ನೋದು ಬಯಲಾಯ್ತು.

ನವರಂಗ್‍ನಲ್ಲೇ ಮತ್ತೊಂದು ಟ್ರಾವೆಲ್ ಏಜೆನ್ಸಿ ಬಳಿ ವಿಚಾರಿಸಿದಾಗ ಹುಬ್ಬಳ್ಳಿಗೆ ಬಸ್ ಟಿಕೆಟ್ ಕೇಳಿದ್ರೆ ಅಲ್ಲೂ ಅದೇ ಸುಲಿಗೆ ಮುಂದುವರಿದಿತ್ತು. ಹೀಗೆ ಹಬ್ಬಕ್ಕೆ ಖಾಸಗಿ ಸಾರಿಗೆ ಶಾಕ್ ನೀಡಿದ್ದು, ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಪ್ರಯಾಣ ದರ ಹೆಚ್ಚಳ ಮಾಡಿದೆ.

ಈ ಬೆಲೆ ಹೆಚ್ಚಳ ಎಲ್ಲಾ ಸಾಮಾನ್ಯ ವರ್ಗದ ಜನತೆಗೆ ಪೆಟ್ಟು ಬಿದ್ದಿದ್ದು, ಪ್ರಯಾಣ ನಡೆಸಲೂ ಒಂದು ಬಾರಿ ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದೀಗ ಒಂದೇ ದಾರಿ ಎಂಬಂತೆ ಸಾರಿಗೆ ಸಚಿವರ ಮೊರೆ ಹೋಗಿದ್ದಾರೆ.

Leave A Reply

Your email address will not be published.