ನಿನ್ನ ತೊಡೆಗಳು ಪೊಗದಸ್ತಾಗಿವೆ | ನಟಿ ಆಶು ರೆಡ್ಡಿಗೆ ಕಾಫಿ ಶಾಪ್ ನಲ್ಲಿ ಉಸುರಿದ್ದ ಆ ಪ್ರಸಿದ್ದ ನಿರ್ದೇಶಕ

ಸೆಕ್ಸಿ ನಟಿ ಆಶು ರೆಡ್ಡಿ ಕಾಫಿ ಶಾಪ್​ನ ತಣ್ಣಗಿನ ರೂಮಿನಲ್ಲಿ ಕೂತು, ತನ್ನ ಯೌವನದ ಬೆಚ್ಚಗಿನ ದೇಹವನ್ನು ತಂಪು ಕಾಫಿ ಹೀರುತ್ತಾ ಕೂಲ್ ಮಾಡುತ್ತಾ ಇರುತ್ತಾಳೆ. ಈ ವೇಳೆ ಐಷಾರಾಮಿ ಕಾರಿನಲ್ಲಿ ಬರುತ್ತಾರೆ ರಾಮ್​ ಗೋಪಾಲ್​ ವರ್ಮಾ. ಕಾಫಿ ಶಾಪ್​ ಒಳಗೆ ಬರುವ ಆರ್​ಜಿವಿ, ‘ನಾನು ಯಾರು ಎಂದು ಗೊತ್ತಾಯ್ತಾ’ ಎಂದು ನಟಿಯನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಆ ಕಡೆಯಿಂದ ಇಲ್ಲ ಎನ್ನುವ ಉತ್ತರ ಬರುತ್ತದೆ. ನಂತರ ಇಬ್ಬರೂ ಮಾತುಕತೆ ಆರಂಭಿಸುತ್ತಾರೆ. ಈ ವೇಳೆ ಆರ್​ಜಿವಿ, ‘ನಿನ್ನ ತೊಡೆ ಪೊಗದಸ್ತಾಗಿದೆ’ ಎನ್ನುತ್ತಾರೆ. ಈ ವೇಳೆ ಕೋಪಗೊಳ್ಳುವ ಆಶು, ಆರ್​ಜಿವಿ ಕೆನ್ನೆಗೆ ಬಾರಿಸುತ್ತಾರೆ.

ಈ ರೀತಿ ಬಾರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಚಿತ್ರ ಎಂದರೆ ಕಪಾಳಕ್ಕೆ ಬಾರಿಸಿ ಕೊಂಡ ಆರ್ಜಿವಿ ಅವರೇ ಈ ವಿಡಿಯೋವನ್ನು ಹರಿಯಬಿಟ್ಟವರು.
ಅಂದಹಾಗೆ ಇದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್​. ಆಶು ಜತೆ ಸಂದರ್ಶನ ನಡೆಸಿದ್ದಾರೆ ಆರ್​ಜಿವಿ. ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಪೂರ್ತಿ ಸಂದರ್ಶನದ ವಿಡಿಯೋ ಇನ್ನಷ್ಟೇ ಬರಬೇಕಿದೆ. ಈ ವಿಡಿಯೋ ನೋಡಿದ ಅನೇಕರು ಚಿತ್ರವಿಚಿತ್ರವಾಗಿ ಕಮೆಂಟ್​ ಮಾಡಿದ್ದಾರೆ.

ರಾಮ್​ ಗೋಪಾಲ್​ ವರ್ಮಾ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರು ಚಿತ್ರವಿಚಿತ್ರವಾಗಿ ನಡೆದುಕೊಳ್ಳುತ್ತಿರುವುದು. ಯುವ ನಟಿಯರ ಜತೆ ಕಾಣಿಸಿಕೊಳ್ಳುವ ಅವರು ಭಿನ್ನ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಕೆಲವು ವಿಡಿಯೋಗಳು ತುಂಬಾನೇ ಬೋಲ್ಡ್ ಹಾಗೂ ಸೆನ್ಸಾರ್​ ರಹಿತವಾಗಿರುತ್ತದೆ. ಇದಕ್ಕೆ ಈಗ ಹೊಸದೊಂದು ಸೇರ್ಪಡೆ ಆಗಿದೆ. ಮಾಡೆಲ್​ ಹಾಗೂ ನಟಿ ಆಶು ರೆಡ್ಡಿ ಜತೆ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ ರಾಮ್​ ಗೋಪಾಲ್​ ವರ್ಮಾ.

ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ಸುಲ್ತಾನ ಜತೆ ಡಾನ್ಸ್​ ಮಾಡಿದ್ದರು. ವಿಡಿಯೋದಲ್ಲಿರುವುದು ಅವರಿಬ್ಬರೇ ಅನ್ನೋದು ತಿಳಿದು ಬಂದಿತ್ತು. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದಿದ್ದರು ಆರ್​ಜಿವಿ. ‘ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ಕೆಂಪು ಬಟ್ಟೆ ಧರಿಸಿರುವುದು ಇನಾಯಾ ಅಲ್ಲ. ಬೇಕಿದ್ದರೆ ನಾನು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದರು ರಾಮ್​ ಗೋಪಾಲ್​ ವರ್ಮಾ. ಈ ವಿಡಿಯೋ ವಿಚಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಟೀಕಿಸಲಾಗಿತ್ತು.

Leave A Reply

Your email address will not be published.