Day: September 3, 2021

ಚೆನ್ನಾವರ ಶಾಲಾ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಸವಣೂರು : ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೊಡಮಾಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಎನ್ ಆಯ್ಕೆಯಾಗಿದ್ದಾರೆ. 2003ರಲ್ಲಿ ಚೆನ್ನಾವರ ಶಾಲೆಗೆ ಸಹಶಿಕ್ಷಕಿಯಾಗಿ ಸೇರ್ಪಡೆಗೊಂಡು ನಿರಂತರವಾಗಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವಾರು ಧನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇವರು ಮಕ್ಕಳಿಗೆ ಪಾಠವಲ್ಲದೆ ಹಲವು ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದು,ಚೆನ್ನಾವರ ಶಾಲೆಯ ಇವರ 18 …

ಚೆನ್ನಾವರ ಶಾಲಾ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Read More »

ದ.ಕ.ಜಿಲ್ಲೆಯ 6 ಗ್ರಾಮಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ ಶೇ.100 ಸಾಧನೆ

ದ.ಕ ಜಿಲ್ಲೆಯ ಆರು ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ 100% ಸಾಧಿಸಿದೆ. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಲಿಕೆ, ಪೆರುವಾಯಿ-ಮಾಣಿಲ, ಪುತ್ತೂರು ತಾಲೂಕಿನ ಬಡಗನ್ನೂರು, ಪಡುವನ್ನೂರು, ಕಡಬ ತಾಲೂಕಿನ ಸಿರಿಬಾಗಿಲು, ಬೆಳ್ತಂಗಡಿಯ ಲಾಯಿಲದಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ ನ ಶೇ.100 ಸಾಧನೆ ಮಾಡಲಾಗಿದೆ.

ಸುಳ್ಯದ ವಿವಾಹಿತೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ | ಪುತ್ತೂರಿನ ಯುವಕನ ಜತೆ ಪರಾರಿ ಶಂಕೆ?

ಸುಳ್ಯದ ಜಯನಗರದ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪತಿ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ನಿಯ ಪರಿಚಿತ ಪುತ್ತೂರಿನ ಯುವಕ ನೊಂದಿಗೆ ಆಕೆ ಪರಾರಿಯಾಗಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ. ಜಯನಗರದ ಕೊಯಿಂಗೋಡಿ ಸಮೀಪದ ಪತಿಯ ಮನೆಯಲ್ಲಿ ವಾಸಿಸುತ್ತಿದ್ದ ಈ ಮಹಿಳೆ ಮನೆಗೆ ಆಗಾಗ ಬರುತ್ತಿದ್ದ ಪುತ್ತೂರು ನಿವಾಸಿ ಪ್ರದೀಪ್ ಯುವಕನೊಂದಿಗೆ ತೆರಳಿರುವುದಾಗಿ ವದಂತಿ ಹಬ್ಬಿದೆ. ಮಕ್ಕಳ ಜತೆ ನಾಪತ್ತೆಯಾಗಿದರೆಂದು ಹೇಳಲಾಗುತ್ತಿರುವ ಮಹಿಳೆ ಸ್ಥಳಿಯ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದಾರೆ. ಆ …

ಸುಳ್ಯದ ವಿವಾಹಿತೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ | ಪುತ್ತೂರಿನ ಯುವಕನ ಜತೆ ಪರಾರಿ ಶಂಕೆ? Read More »

ಬೆಳ್ತಂಗಡಿಯ ಎಡ್ವರ್ಡ್ ಡಿಸೋಜ ಸೇರಿದಂತೆ 31 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ,ಕರ್ನಾಟಕ ಸರ್ಕಾರ ಘೋಷಣೆ

ಬೆಂಗಳೂರು:- ರಾಜ್ಯ ಸರ್ಕಾರವು 2021-22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರೂ ಸೇರಿ 31 ಮಂದಿಗೆ ಪ್ರಶಸ್ತಿ ಘೋಷಿಸಿದೆ._ ಶಿಕ್ಷಕಿಯರಿಗೆ ಮಾತೆ ಸಾವಿತ್ರಿ ಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಸೆ.5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗ.ಉಮೇಶ್ ಟಿ.ಪಿ.- ಕನ್ನಡ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಮೃತಪುರ, ಹೊಳಲ್ಕೆರೆ, …

ಬೆಳ್ತಂಗಡಿಯ ಎಡ್ವರ್ಡ್ ಡಿಸೋಜ ಸೇರಿದಂತೆ 31 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ,ಕರ್ನಾಟಕ ಸರ್ಕಾರ ಘೋಷಣೆ Read More »

ಈ ಗ್ರಾ.ಪಂ.ನಲ್ಲಿ ಸರ್,ಮೇಡಂ ಪದಬಳಕೆ ನಿಷೇಧ | ಐತಿಹಾಸಿಕ ನಿರ್ಣಯ ಕೈಗೊಂಡ ಆ ಗ್ರಾ.ಪಂ.ಯಾವುದು ? ಯಾಕೆ ನಿಷೇಧ ಹೇರಲಾಗಿದೆ

ಸರ್ ಮತ್ತು ‘ಮೇಡಂ’ ಪದಗಳ ಬಳಕೆಯನ್ನು ನಿಷೇಧಿಸಿದ ಮೊದಲ ಸ್ಥಳೀಯ ಸಂಸ್ಥೆ ಎನ್ನುವ ಹಿರಿಮೆಯನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಮಹೂರ್ ಗ್ರಾಮಪಂಚಾಯತ್ ಪಡೆದಿದೆ. ಪಂಚಾಯತ್‌ನ ವಿಶೇಷ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಂಡು ಅಧಿಕೃತ ಭಾಷಾ ಬಳಕೆಯ ಸುಧಾರಣೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಸರ್ ಅಥವಾ ಮೇಡಂ ಎನ್ನುವ ಭಾಷಾ ಬಳಕೆಯು ಬ್ರಿಟಿಷರ ವಸಾಹತುಶಾಹಿ ಕಾಲದ ಉಳಿಕೆಯಾಗಿದೆ ಎಂದು ಪಂಚಾಯತ್ ಅಭಿಪ್ರಾಯಪಟ್ಟಿದೆ. ಬ್ರಿಟಿಷರಿಂದ ಸ್ವತಂತ್ರರಾಗಿ 75 ವರ್ಷಗಳೇ ಕಳೆದಿರುವಾಗ, ಪ್ರಜಾಸತ್ತಾತ್ಮಕಸರ್ಕಾರದಲ್ಲಿ ನಮ್ಮತನವನ್ನುತೋರಿಸಲೇಬೇಕಿದೆ ಎನ್ನುವುದು ಮಥರ್ ಗ್ರಾಮಪಂಚಾಯತ್ ಉಪಾಧ್ಯಕ್ಷ …

ಈ ಗ್ರಾ.ಪಂ.ನಲ್ಲಿ ಸರ್,ಮೇಡಂ ಪದಬಳಕೆ ನಿಷೇಧ | ಐತಿಹಾಸಿಕ ನಿರ್ಣಯ ಕೈಗೊಂಡ ಆ ಗ್ರಾ.ಪಂ.ಯಾವುದು ? ಯಾಕೆ ನಿಷೇಧ ಹೇರಲಾಗಿದೆ Read More »

ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಎ.ಸಿ.ಡಾ.ಯತೀಶ್ ಉಳ್ಳಾಲ್ ಸೂಚನೆ

ಪುತ್ತೂರು ಉಪ ವಿಭಾಗದ ಎಲ್ಲಾ ತಾಲೂಕುಗಳಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಪ್ಯೂ ಕಟ್ಟು ನಿಟ್ಟಾಗಿ ಪಾಲಿಸುವಂತೆ ,ತಪ್ಪಿದಲ್ಲಿ ದಂಡ,ಕಠಿಣ ಕ್ರಮ ಕೈಗೊಳ್ಳುವಂತೆ ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಸೂಚಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಮತ್ತು ನೈಟ್ ಕರ್ಪ್ಯೂ ಯಿಂದ ವ್ಯಾಪಾರ ವ್ಯವಹಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುವುದರಿಂದ ವೀಕೆಂಡ್ ಕರ್ಪ್ಯೂ ಮತ್ತು ನೈಟ್ ಕರ್ಪ್ಯೂ ವನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಾಗಿ ಪುತ್ತೂರು ವರ್ತಕರ ಸಂಘ, ಮತ್ತಿತರ ಸಂಘಟನೆಯವರು ತಿಳಿಸಿರುತ್ತಾರೆ. ವೀಕೆಂಡ್ ಕರ್ಪ್ಯೂ ಸಡಿಲಗೊಳಿಸಿ ವ್ಯಾಪಾರ ವಹಿವಾಟು, …

ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಎ.ಸಿ.ಡಾ.ಯತೀಶ್ ಉಳ್ಳಾಲ್ ಸೂಚನೆ Read More »

ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ

ಕಡಬ : ಭಾರತೀಯ ಜನತಾ ಪಾರ್ಟಿ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆಯ ಕಾರ್ಯಕ್ರಮದ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಳ್ಪ ಗ್ರಾಮದ ಬೂತ್ ಸಂಖ್ಯೆ 105 ರ ಅಧ್ಯಕ್ಷರಾದ ಶ್ರೀ ರತ್ನಾಕರ ಕುಂಜತ್ತಾಡಿ ಅವರ ಮನೆಯಲ್ಲಿ ನಾಮಫಲಕ ಅಳವಡಿಕೆ ಮುಖಾಂತರ ಕಾರ್ಯಕ್ರಮಕ್ಕೆ ಮಾನ್ಯ ಸಚಿವರಾದ ಎಸ್ ಅಂಗಾರ ರವರು ಚಾಲನೆ ನೀಡಿದರು. ಬಳ್ಪ ಗ್ರಾಮದ ಬೂತ್ ಸಂಖ್ಯೆ 104 ಮತ್ತು 106 , ಕೇನ್ಯ ಗ್ರಾಮದ ಬೂತ್ ಸಂಖ್ಯೆ …

ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ Read More »

ಎರಡೂ ಡೋಸ್ ವ್ಯಾಕ್ಸಿನೇಷನ್‌ ಆದವರಿಗೆ ಮಾತ್ರ ಮದ್ಯ

ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸರ್ಕಾರಿ ಮಳಿಗೆಯಲ್ಲಿ ಮದ್ಯ ಖರೀದಿಗೆ ಅನುಮತಿ ಇರಲಿದೆ ಎಂದು ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಅವರು ಆದೇಶ ಹೊರಡಿಸಿದ್ದಾರೆ. ಲಸಿಕೆ ಕುರಿತು ಜಾಗೃತಿ ಮೂಡಿಸಿದರೂ ಕೆಲವು ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ನೀಲಗಿರಿ ಜಿಲ್ಲೆಯಲ್ಲಂತೂ ಜಿಲ್ಲಾಡಳಿತ ಎಷ್ಟೇ ಕಸರತ್ತು ನಡೆಸಿದರೂ ಕೆಲವರು ಲಸಿಕೆ ಪಡೆಯದಿರಲು ಕುಂಟು ನೆಪ ಹೇಳುತ್ತಿದ್ದಾರಂತೆ. ಅದರಲ್ಲೂ ಕುಡುಕರು ನಾನು ಮದ್ಯ ಪಾನ ಮಾಡಿದ್ದೇನೆ ,ಸದ್ಯಕ್ಕೆ ನಂಗೆ ಲಸಿಕೆ ಬೇಡ ಎಂದು …

ಎರಡೂ ಡೋಸ್ ವ್ಯಾಕ್ಸಿನೇಷನ್‌ ಆದವರಿಗೆ ಮಾತ್ರ ಮದ್ಯ Read More »

ದ.ಕ.ದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಮುಖ್ಯಮಂತ್ರಿಗೆ ಸಚಿವ ಕೋಟ, ಶಾಸಕ ಕಾಮತ್ ಮನವಿ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಬಸವರಾಜು ಬೆಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖವಾಗಿ ಮಂಗಳೂರು ನಗರವು ವಾಣಿಜ್ಯ ವಹಿವಾಟುಗಳ ಕೇಂದ್ರ ಸ್ಥಾನವಾಗಿದೆ. ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವುದರಿಂದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ನಡೆಸಲು ಸಹಕಾರಿಯಾಗಲಿದೆ. ಕೈಗಾರಿಕೋದ್ಯಮ, ವೃತ್ತಿಪರ ನೌಕರರು, ದಿನಕೂಲಿ ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಬಸ್ ನೌಕರರು, ಸಣ್ಣಪುಟ್ಟ ಉದ್ಯಮ ಸೇರಿದಂತೆ ಇನ್ನಿತರ ವರ್ಗದ ಜನರು …

ದ.ಕ.ದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಮುಖ್ಯಮಂತ್ರಿಗೆ ಸಚಿವ ಕೋಟ, ಶಾಸಕ ಕಾಮತ್ ಮನವಿ Read More »

ಹಾಸ್ಟೆಲ್‌ನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ಯತ್ನ | ಮೈಸೂರಿನಲ್ಲಿ ನಡೆಯಿತು ಮತ್ತೊಂದು ಹೀನ ಕೃತ್ಯ

ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಘಟನೆ ಮಾಸುವ ಮುನ್ನವೆ ಮತ್ತೊಂದು ಹೀನ ಕೃತ್ಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಾಯ್ಡು ನಗರದ ಪುಷ್ಪಾಶ್ರಮ ಚರ್ಚ್ ಸಮೀಪ ಹೋಲಿ ಕ್ರಾಸ್ ಸ್ಟಡಿ ಹೌಸ್ ಹಾಸ್ಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳಕ್ಲೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳದಿಂದ ಸ್ಥಳದಲ್ಲಿ ಪರಿಶೀಲನೆ ನಡೆದಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ …

ಹಾಸ್ಟೆಲ್‌ನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ಯತ್ನ | ಮೈಸೂರಿನಲ್ಲಿ ನಡೆಯಿತು ಮತ್ತೊಂದು ಹೀನ ಕೃತ್ಯ Read More »

error: Content is protected !!
Scroll to Top