ಓವರ್‌ಲೋಡ್ ಆಗಿ ಹಿಮ್ಮುಖ ಚಲಿಸಿ ಪಲ್ಟಿಯಾದ ಟ್ರ್ಯಾಕ್ಟರ್ | ಟ್ರ್ಯಾಕ್ಟರ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡ ಚಾಲಕ

Share the Article

ಓವರ್ ಲೋಡ್ ಆಗಿ ಟ್ರ್ಯಾಕ್ಟರೊಂದು ಹಿಮ್ಮುಖವಾಗಿ ಪಲ್ಟಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ನಡೆದಿದೆ.

ರಸ್ತೆಯ ಏರಿ ಹತ್ತುವ ವೇಳೆ ಚಕ್ರ ಪಂಕ್ಷರ್ ಆದ ಕಾರಣ ಟ್ರಾಕ್ಟರ್ ಹಿಮ್ಮುಖವಾಗಿ ಸಂಚರಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಆದರೆ ಅದೃಷ್ಟವಶಾತ್ ಟ್ರ್ಯಾಕ್ಟರ್‍ನಿಂದ ಜಿಗಿದು ಚಾಲಕ ಜೀವ ಉಳಿಸಿಕೊಂಡಿದ್ದಾನೆ.

ಟ್ಯಾಕ್ಟರ್ ಮರದ ತುಂಡುಗಳನ್ನು ಹೇರಿಕೊಂಡು ಸಾಗುತ್ತಿತ್ತು. ಪಲ್ಟಿಯಾದ ಟ್ರ್ಯಾಕ್ಟರ್ ಸಂಪೂರ್ಣ ಜಖಂ ಆಗಿದೆ. ಟ್ರ್ಯಾಕ್ಟರ್ ಹಿಂದೆ ವಾಹನಗಳಿದ್ದಿದ್ದರೆ ಭಾರೀ ಅನಾಹುತ ನಡೆಯುತ್ತಿತ್ತು. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ

Leave A Reply