ಮಂಗಳೂರು | ಕುಲಶೇಖರ-ಪಡೀಲ್ ನಡುವಿನ ರೈಲ್ವೆ ಹಳಿಯಲ್ಲಿ ಬಿರುಕು, ಹಲವು ರೈಲು ಸಂಚಾರ ರದ್ದು !?

ಮಂಗಳೂರು: ಕುಲಶೇಖರ-ಪಡೀಲ್ ನಡುವೆ ರೈಲ್ವೆ
ಹಳಿಯಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮವಾಗಿ ಕೆಲವು ರೈಲು ಸಂಚಾರ ರದ್ದುಗೊಂಡಿದ್ದು, ಇನ್ನು ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಿವೆ.

ಕರ್ತವ್ಯದಲ್ಲಿದ್ದ ಚಂದ್ರ ಕುಮಾರ್ ಅವರಿಗೆ ರಾತ್ರಿ 1.10 ರ ವೇಳೆಗೆ ಡೇಂಜರ್ ಸಿಗ್ನಲ್ ಕಂಡು ಬಂದಿದ್ದು, ತಕ್ಷಣ ರೈಲ್ವೆ ಇಂಜಿನಿಯರ್‌ಗೆ ತಿಳಿಸಿದ್ದಾರೆ. ಸಹಾಯಕ ವಿಭಾಗೀಯ ಅಭಿಯಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ನಡುವೆ ಆಗಮಿಸಿದ ರಿಷಿಕೇಶ್-ಕೂಚುವೇಲಿ ಎಕ್ಸ್‌ಪ್ರೆಸ್ ರೈಲನ್ನು ಕುಲಶೇಖರ-ಪಡೀಲ್ ನಡುವೆ ನಿಲ್ಲಿಸಲಾಯಿತು.

ಬಿರುಕು ಬಿಟ್ಟ ಹಳಿಯನ್ನು ಬೆಳಗ್ಗಿನ ವೇಳೆಗೆ ಸರಿಪಡಿಸಲಾಯಿತು. ಮಂಗಳೂರು ಸೆಂಟ್ರಲ್ ಮಡ್‌ಗಾಂವ್ ಇಂಟರ್ ಸಿಟಿ ರೈಲು ರದ್ದುಗೊಂಡಿದೆ. ರಿಷಿಕೇಶ್-ಕೂಚುವೇಲಿ ಎಕ್ಸ್‌ಪ್ರೆಸ್ ರೈಲು ಸುಮಾರು 5 ಗಂಟೆ ತಡವಾಗಿ ಸಂಚರಿಸಿತು.

Ad Widget
Ad Widget

Ad Widget

Ad Widget

ಹಾಗೆಯೇ ತಿರುವನಂತಪುರಂ ನಿಝಾಮುದ್ದೀನ್ ಕೂಚುವೇಲಿ ಎಕ್ಸ್‌ಪ್ರೆಸ್ ರೈಲು 8 ಗಂಟೆ, ಬೆಂಗಳೂರು-ಕಾರವಾರ ರೈಲು 6 ಗಂಟೆ, ಲೋಕಮಾನ್ಯ ತಿಲಕ್ ಮುಂಬೈ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್ 4 ಗಂಟೆ ತಡವಾಗಿ ಸಂಚರಿಸಿವೆ. ರೈಲುಗಳಲ್ಲಿದ್ದ ಪ್ರಯಾಣಿಕರಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: