ಡಿಜಿಟಲ್ ಪೇಮೆಂಟ್ ನಲ್ಲಿ ಬಂದಿದೆ ಹೊಸ ಬದಲಾವಣೆ | ಇನ್ನು ಯಾವುದೇ ರೀತಿಯ ಪೇಮೆಂಟ್ ಗೆ 16 ಡಿಜಿಟ್ ಪಿನ್ ಕಡ್ಡಾಯ !!

ಆನ್‌ಲೈನ್ ಮೂಲಕ ನಡೆಯುವ ನಗದು ವ್ಯವಹಾರಗಳಲ್ಲಿ ಜಾಗ್ರತೆ ವಹಿಸುವುದು ಬಹುಮುಖ್ಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗಾಗಿ ಆನ್‌ಲೈನ್ ಮೂಲಕ ನಡೆಯುವ ನಗದು ವ್ಯವಹಾರದಲ್ಲಿನ ವಂಚನೆ ತಡೆಯಲು ಆರ್‌ಬಿಐ ಡಿಜಿಟಲ್ ಪೇಮೆಂಟ್ ಪ್ರಕ್ರಿಯೆಯನ್ನು ಇನ್ನಷ್ಟು ಸುರಕ್ಷತೆಗೊಳಿಸಲು ಮುಂದಾಗಿದೆ.

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ನಡೆಯುವ ನಗದು ವರ್ಗಾವಣೆಗೆ ಮೂರಂಕಿಯ ಸಿವಿವಿ (ಕಾರ್ಡ್ ವೆರಿಫಿಕೇಷನ್ ವ್ಯಾಲ್ಯೂ) ಸಂಖ್ಯೆಯ ಜತೆಗೆ ಕಾರ್ಡ್‌ನ 16 ಸಂಖ್ಯೆ ಮತ್ತು ಕಾರ್ಡ್ ಎಕ್ಸ್‌ಪೈರಿ ದಿನಾಂಕ ನಮೂದಿಸುವುದನ್ನು ಪ್ರತಿ ವ್ಯವಹಾರಕ್ಕೂ ಕಡ್ಡಾಯ ಮಾಡಲು ಬಯಸಿದೆ. ಈ ಹೊಸ ನಿಯಮ ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸುವವರಿಗೆ ಈ 16 ಸಂಖ್ಯೆಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ, ಈ ಹೊಸ ನಿಯಮವು ಕಾರ್ಡ್ ಬಳಕೆದಾರರ ಮಾಹಿತಿಗೆ ಸುರಕ್ಷತೆ ಒದಗಿಸುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಂತಹ ಇ-ಕಾಮರ್ಸ್ ತಾಣಗಳು, ಪೇಟಿಯಂ ಮತ್ತು ಗೂಗಲ್ ಪೇ ರೀತಿಯ ಪಾವತಿ ವೇದಿಕೆಗಳು ಗ್ರಾಹಕರ ಡೇಟಾವನ್ನು ತಮ್ಮ ಸರ್ವರ್ ಗಳಲ್ಲಿ ಸಂಗ್ರಹಿಸುವುದನ್ನು ತಡೆಯುವ ಉದ್ದೇಶ ಈ ಹೊಸ ನಿಯಮದ ಹಿಂದೆ ಇದೆ.

ಸದ್ಯ ಇ-ಕಾಮರ್ಸ್ ಮರ್ಚೆಂಟ್ ಸೈಟ್‌ಗಳು ಮತ್ತು ಪಾವತಿಯ ಗೇಟ್‌ವೇಗಳು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇರಿಸಿಕೊಂಡಿರುತ್ತವೆ. ಪ್ರತಿ ಪಾವತಿ ಸಂದರ್ಭದಲ್ಲಿ ಸಿವಿವಿ ಅಥವಾ ಪಿನ್ (ಗೌಪ್ಯ ಸಂಖ್ಯೆ) ಜತೆಗೆ ಕಾರ್ಡ್ ದಾರರ ಮೊಬೈಲ್‌ಗೆ ಬರುವ ಒಟಿಪಿ ನಮೂದಾಗಬೇಕು. ಆಗ ಪಾವತಿ ಆಗುತ್ತದೆ. ಆದರೆ ಹೊಸ ನಿಯಮದಲ್ಲಿ 16 ಸಂಖ್ಯೆಯ ಕಾರ್ಡ್ ನಂಬರ್ ಮತ್ತು ಎಕ್ಸ್ ಪೈರಿ ದಿನಾಂಕವನ್ನು ಪ್ರತಿ ಸಲವೂ ನಮೂದಿಸಬೇಕಾಗುತ್ತದೆ.

Leave A Reply

Your email address will not be published.