ಸ್ವಂತ ಮನೆ ಬೇಕೆಂಬ ಆಸೆ ಇರುವವರಿಗೆ ಇಲ್ಲಿದೆ ಬಂಪರ್ ಆಫರ್ | ಇಲ್ಲಿ ಕೇವಲ 87 ರೂಪಾಯಿಗೆ ಮನೆ ಖರೀದಿಸಬಹುದು ?!!

ಪುಟ್ಟದಾದರೂ ಸರಿಯೆ ಸ್ವಂತ ಮನೆಯನ್ನು ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದದ್ದೆ. ಹಾಗಿರುವಾಗ ನೀವೇನಾದರೂ ಹೊಸ ಮನೆ ಕೊಳ್ಳುವ ಯೋಜನೆ ಹಾಕಿಕೊಂಡಿದ್ದೀರಾ? ಕಡಿಮೆ ಅಂದ್ರೆ ಅತಿ ಕಡಿಮೆ ಬೆಲೆಗೆ ಮನೆಗಳು ಇಲ್ಲಿ ಲಭ್ಯವಿದೆ.

ಹೌದು, ನೀವು ಕೇವಲ 87 ರೂಪಾಯಿಗೆ ಮನೆಯನ್ನು ಖರೀದಿಸಬಹುದಾಗಿದೆ. ಒಮ್ಮೆಲೆ ಆಶ್ಚರ್ಯವಾಯಿತೇ? ಆದರೂ ಇದು ಸತ್ಯ ವಿಷಯ. ಎಲ್ಲ ಸೌಕರ್ಯಗಳು ಇರುವ ಮನೆಯನ್ನು ಇಷ್ಟು ಕಡಿಮೆ ಬೆಲೆಗೆ ಇಡೀ ಜಗತ್ತಿನಲ್ಲಿ ಎಲ್ಲಾದರೂ ಮಾರಾಟ ಮಾಡ್ತಾರಾ ಎಂದು ಯೋಚಿಸುತ್ತಿದ್ದೀರಾ?. ಆದರೆ, ಇಲ್ಲಿ ಎಲ್ಲವೂ ಸಾಧ್ಯವಿದೆ. ಅದು ಹೇಗೆ ಎಂದು ತಿಳಿಯಲು ಈ ಸ್ಟೋರಿ ಓದಿ.

ಬಿಸಾಕಿಯಾ ಎಂಬುದು ಇಟಲಿಯ ಒಂದು ಸುಂದರವಾದ ನಗರ. ಇದು ಇಟಲಿ ರಾಜಧಾನಿ ರೋಮ್‌ನ ಆಗ್ನೇಯ ಭಾಗದ ಸುಮಾರು 70 ಕಿ.ಮೀ ದೂರದಲ್ಲಿದೆ. ಈ ಪಟ್ಟಣದಲ್ಲಿ ಒಂದು ಯೂರೋ (ಇಟಲಿ ಕರೆನ್ಸಿ)ಗಿಂತಲೂ ಕಡಿಮೆ ಬೆಲೆಗೆ ಮನೆ ಲಭ್ಯವಿದೆ.

ಅಷ್ಟೊಂದು ಕಡಿಮೆ ಬೆಲೆಗೆ ಮನೆಗಳನ್ನು ಯಾಕೆ ಮಾರಾಟ ಮಾಡ್ತಿದ್ದಾರೆ? ಎಂದು ನಿಮಗೂ ಅನಿಸಿರಬಹುದು. ಅದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಇಲ್ಲಿನ ಶೇ. 90ರಷ್ಟು ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಈ ಸುಂದರ ನಗರದಲ್ಲಿ ಸದ್ಯ ಯಾರು ವಾಸವಿಲ್ಲ. ಇದರಿಂದ ಆ ನಗರವೇ ತುಂಬಾ ಬೇಸರಗೊಂಡಿದೆ. ಆದ್ದರಿಂದ ಅತಿ ಕಡಿಮೆ ಬೆಲೆಗೆ ಇಲ್ಲಿನ ಮನೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹೆಚ್ಚು ಜನರು ಈ ನಗರಕ್ಕೆ ಬಂದು ವಾಸಿಸಲು ಉತ್ತೇಜನ ನೀಡಲು ಅಲ್ಲಿನ ಸ್ಥಳೀಯ ಆಡಳಿತ ಈ ಕ್ರಮ ತೆಗೆದುಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಬಿಸಾಕಿಯಾ ಪಟ್ಟಣದ ಡೆಪ್ಯೂಟಿ ಮೇಯರ್ ಫ್ರಾನ್ಸಿಸ್ಕೋ ಟಾರ್ಟಾಗ್ಲಿಯಾ, ಈ ಊರನ್ನು ನಗರವಾಗಿ ಅಭಿವೃದ್ಧಿಪಡಿಸಲು ಮಾರಾಟ ಮಾಡಲಾಗುತ್ತಿದೆ. ಬಿಸಾಕಿಯಾ ಅಂತ್ಯಂತ ಹಳೆಯದಾದ ನಗರವಾಗಿದೆ. ಇಲ್ಲಿನ ಮನೆಗಳು ರಸ್ತೆಯ ಎರಡೂ ಬದಿಗಳಲ್ಲಿ ಒಂದರ ಪಕ್ಕ ಒಂದರಂತೆ ಅಂಟಿಕೊಂಡಿವೆ. ಅಕ್ಕಪಕ್ಕದಲ್ಲಿ ಉಳಿಯಲು ಬಯಸುವ ಕುಟುಂಬಗಳಿಗೆ ಉತ್ತಮವಾದ ಮನೆಗಳನ್ನು ಖರೀದಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಜನರ ವಾಸವಿಲ್ಲದೆ ಬೇಸರಗೊಂಡಿದ್ದ ಈ ಪಟ್ಟಣವು ಮತ್ತೆ ಹೆಚ್ಚು ಜನಸಂಖ್ಯೆಯೊಂದಿಗೆ ಉತ್ತಮ ಸಂವಹನ ನಡೆಸಲು ಬಯಸುತ್ತಿದೆ. ಆದರೆ, ಇಲ್ಲಿ ಮನೆಗಳನ್ನು ಕೊಳ್ಳುವ ಮುನ್ನ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಮನೆ ಖರಿದೀಸಿದವರು ತಾವೇ ದುರಸ್ಥಿ ಕಾರ್ಯ ಮಾಡಿಸಿಕೊಳ್ಳಬೇಕು. ಸಂಪೂರ್ಣ ಪುನರ್ನಿರ್ಮಾಣ ಮಾಡಬೇಕಾಗಿದ್ದು, ಎಲ್ಲಾ ಹೊಸ ಮನೆಗಳನ್ನು ಮರುರೂಪಿಸಬೇಕಿದೆ. ಹಣದ ಹೂಡಿಕೆಯ ಮಟ್ಟವನ್ನು ಅವಲಂಬಿಸಿ ಮನೆಗಳನ್ನು ಮರುರೂಪಿಸಬೇಕಿದೆ. ಮನೆ ಖರೀದಿಸಿದ ಮೂರು ವರ್ಷಗಳವರೆಗೆ ಮನೆಯನ್ನು ತಪ್ಪದೇ ನವೀಕರಣ ಮಾಡಲೇಬೇಕು. ಈ ಒಪ್ಪಂದದಲ್ಲಿ 5 ಸಾವಿರ ಯುರೋಗಳನ್ನು ಠೇವಣಿ ಇಡಬೇಕು. ಮನೆಗಳು ನವೀಕರಣಗೊಂಡ ಬಳಿಕ ಆ ಹಣ ಮರುಪಾವತಿ ಮಾಡಲಾಗುವುದು ಎಂದು ಹೇಳಲಾಗಿದೆ.

20ನೇ ಶತಮಾನದ 1980ರಲ್ಲಿ ವಿಪತ್ತುಗಳು ಮತ್ತು ಭೂಕಂಪನಗಳಿಂದಾಗಿ ಈ ಪಟ್ಟಣ ಸಂಪೂರ್ಣ ಅಳಿಸಿ ಹೋಗಿದೆ. ವಿಪತ್ತಿನ ಭಯದಲ್ಲೇ ಇಲ್ಲಿನ ಜನರು ಅಂದಿನ ದಿನಗಳಲ್ಲಿ ಸುರಕ್ಷಿತ ಪ್ರದೇಶಗಳಿಗೆ ಬೃಹತ್ ಮಟ್ಟದಲ್ಲಿ ವಲಸೆ ಹೋದರು. ಅಂದಿನಿಂದ ಇಂದಿನವರೆಗೂ ಆ ಪಟ್ಟಣ ಖಾಲಿ ಬಿದ್ದಿದೆ. ಯಾವೊಂದು ಮನೆಗಳು ಕೂಡ ರಿಪೇರಿ ಆಗಿಲ್ಲ. ಒಂದು ಕಾಲದಲ್ಲಿ ಸುಂದರ ನಗರವಾಗಿದ್ದ ಇದರಲ್ಲಿ ಹತ್ತಾರು ಕೈಬಿಟ್ಟ ಅಥವಾ ಖಾಲಿ ಇರುವ ಗುಡಿಸಲುಗಳು ಸಹ ಮಾರಾಟದಲ್ಲಿವೆ ಎಂದು ತಿಳಿದುಬಂದಿದೆ.

ಮನೆ ಖರೀದಿಸುವ ಆಸಕ್ತಿ ಇದ್ದರೆ, ಆಗಸ್ಟ್ 28ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಖರೀದಿದಾರರಿಗೆ ಆಯ್ಕೆಗೆ ಹೆಚ್ಚಿನ ಮನೆಗಳು ಲಭ್ಯವಿರುತ್ತವೆ. ಜನಸಂಖ್ಯೆ ಕಡಿಮೆಯಾದಂತೆ ಇಟಲಿಯಲ್ಲಿ ನೆಲೆಸಲು ಪ್ರೋತ್ಸಾಹಿಸಲು ಯುರೋ ಹೌಸಿಂಗ್ ಯೋಜನೆಯನ್ನು ಕಳೆದ ವರ್ಷ ಇಟಲಿ ಆರಂಭಿಸಿದೆ. ಈ ಆಫರ್ ಅನ್ನು ನೋಡಿಯಾದರೂ ಜನ ಇಲ್ಲಿಗೆ ವಲಸೆ ಬರುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.