ಕಲ್ಲುಬಂಡೆಯ ಮೇಲೆ ನಿಂತು ಸೆಲ್ಫಿ | ಕಾಲು ಜಾರಿ ಸಮುದ್ರಕ್ಕೆ ಬಿದ್ದು ಯುವಕ ಸಾವು

Share the Article

ಕಲ್ಲು ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಯುವಕ ಕಾಲುಜಾರಿ ಸಮುದ್ರ ಪಾಲಾದ ಘಟನೆ ಗೋಕರ್ಣದ ಓಂ ಬೀಚ್ ನಲ್ಲಿ ನಡೆದಿದೆ.

ಹಾನಗಲ್ ಮೂಲದ ಶೇಕಪ್ಪ ಕಮಾಟಿ (35) ಸಮುದ್ರ ಪಾಲಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈತ ಶನಿವಾರ ಮಧ್ಯಾಹ್ನ ಹಾನಗಲ್ ನಿಂದ ಗೋಕರ್ಣಕ್ಕೆ 12 ಜನರೊಂದಿಗೆ ಆಗಮಿಸಿದ್ದ. ಒಬ್ಬನೆ ಓಂ ಬೀಚ್ ನ ಬಲಭಾಗದಲ್ಲಿರುವ ಸಮುದ್ರ ತೀರದ ಕಲ್ಲುಬಂಡೆ ಬಳಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದ. ಈ ವೇಳೆ ಅಲೆಗಳ ಭಾರಿ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾನೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಲೈಫ್ ಗಾರ್ಡಗಳು ರಕ್ಷಣೆಗೆ ಮುಂದಾದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಶವಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply