ವಿಟ್ಲ: ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ | ವಿಟ್ಲ ಮೂಲದ ವಕೀಲ ಉಮ್ಮರ್ ವಿರುದ್ಧ ಪ್ರಕರಣ ದಾಖಲು |ಕಾಮುಕನ ಹೆಸರನ್ನು ಹಾಕದಂತೆ ಕಿಡಿಗೇಡಿಗಳಿಂದ ವರದಿಗಾರರಿಗೆ ಬೆದರಿಕೆ!!

ತನ್ನ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಸಹೋದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿಟ್ಲ ಮೂಲದ ವಕೀಲ ಉಮ್ಮರ್ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಹಿಂದೂ ಯುವತಿಯೊರ್ವಳು ದೂರನ್ನು ದಾಖಲಿಸಿದ್ದಾಳೆ.

ಆರೋಪಿ

ಘಟನೆ ವಿವರ:ಮುಸ್ಲಿಂ ಸಮುದಾಯದ ವಕೀಲ ಉಮ್ಮರ್ ನ ವಿಟ್ಲದ ವಿ. ಹೆಚ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿಂದೂ ಯುವತಿಯನ್ನು, ಆಫೀಸ್ ನಲ್ಲಿ ಯಾರೂ ಇಲ್ಲದ ವೇಳೆ ಹಿಂದಿನಿಂದ ಬಂದು ತಬ್ಬಿಕೊಂಡದಲ್ಲದೇ,ಹೊರಗೆಲ್ಲಿಯಾದರೂ ಬಾಯಿ ಬಿಟ್ಟರೆ ನಿನ್ನ ಮರ್ಯಾದಿ ಹೋಗುತ್ತದೆ, ನಿನ್ನನ್ನೂ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ.ಸದ್ಯ ಯುವತಿಯು ನ್ಯಾಯಕ್ಕಾಗಿ ಪುತ್ತೂರು ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

ಈ ವಿಚಾರದಲ್ಲಿ ಮಾಧ್ಯಮ ಮಿತ್ರರನ್ನು ಸಂಪರ್ಕಿಸಿದ ಕೆಲ ಕಿಡಿಗೇಡಿಗಳು ವಕೀಲನ ಹೆಸರನ್ನು ಹಾಕದಂತೆ ಬೆದರಿಕೆ ಹಾಕಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ.

Leave A Reply

Your email address will not be published.