ತಾಯ್ನಾಡಿಗೆ ಹೊರಟ್ಟಿದ್ದ ಭಾರತೀಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ತಾಲಿಬಾನಿಗಳು !!

ಇಂದು ಅಫ್ಘಾನಿಸ್ತಾನದಲ್ಲಿ 150 ಜನ ಭಾರತೀಯ ನಾಗರೀಕರನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ, ತಾಲಿಬಾನಿಗಳು ಈ ಭಾರತೀಯರನ್ನು ಪ್ರಶ್ನೆ ಮಾಡುವುದಕ್ಕಾಗಿ ಕರೆದೊಯ್ದಿದ್ದು, ಇದೀಗ ಇವರೆಲ್ಲಾ ಭಾರತಕ್ಕೆ ತೆರಳಲು ವಿಮಾನ ನಿಲ್ದಾಣ ತಲುಪಿದ್ದಾರೆ ಎಂದು ತಿಳಿದುಬಂದಿದೆ.

ಕಾಬುಲ್‌ನ ವಿಮಾನ ನಿಲ್ದಾಣದ ಹೊರಗೆ ಭಾರತೀಯ ವಿಮಾನಗಳಿಗಾಗಿ ಕಾಯುತ್ತಿದ್ದ ಭಾರತೀಯರನ್ನು ತಾಲಿಬಾನಿಗಳು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಅವರನ್ನು ವಿಚಾರಣೆ ನಡೆಸಿ, ಪ್ರಯಾಣಕ್ಕೆ ಅಗತ್ಯ ದಾಖಲೆಗಳಿವೆಯೇ ಎಂದು ಪರಿಶೀಲಿಸಿ ಕಳುಹಿಸಿದರು ಎಂದು ಸುದ್ದಿಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಹಾಗೆಯೇ ಇಂದು ಬೆಳಿಗ್ಗೆಯೇ 85 ಭಾರತೀಯ ನಾಗರಿಕರನ್ನೊಳಗೊಂಡ ಭಾರತೀಯ ವಾಯುಪಡೆಯ ವಿಮಾನ ಕಾಬುಲ್‌ನಿಂದ ಸುರಕ್ಷಿತವಾಗಿ ಹೊರಟ ವರದಿ ಬಂದಿತ್ತು. ತಾಲಿಬಾನ್ ಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ತೆರವುಗೊಳಿಸಲು ಭಾರತ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: