ತ್ರಿಶೂಲದಿಂದ ಇರಿದು ದೇವಸ್ಥಾನದ ಅರ್ಚಕರ ಬರ್ಬರ ಕೊಲೆ | ಕೊಲೆ ಮಾಡಿ ದೇಹವನ್ನು ದೇವಸ್ಥಾನದ ಆವರಣದಲ್ಲೇ ಸುಡಲು ಪ್ರಯತ್ನಿಸಿದ ದುಷ್ಟರು !!

ತ್ರಿಶೂಲದಿಂದ ಇರಿದು ದೇವಸ್ಥಾನದ ಅರ್ಚಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

ಪಲ್ವಾಲ್ ಜಿಲ್ಲೆಯ ಬಂಚಾರಿ ಗ್ರಾಮದಲ್ಲಿ ಮುಂಜಾನೆ 7 ಗಂಟೆಗೆ ಈ ದುರ್ಘಟನೆ ನಡೆದಿದ್ದು, ಚರಣಗಿರಿ ಮಹಾರಾಜ್ ಮೃತಪಟ್ಟ ಅರ್ಚಕರೆಂದು ಗುರುತಿಸಲಾಗಿದೆ.

ಅರ್ಚಕರನ್ನು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಕೂಡ ಹಚ್ಚಲಾಗಿದ್ದು, ದೇಗುಲದ ಆವರಣದಲ್ಲಿ ಅರೆ ಸುಟ್ಟ ಶವ ಪತ್ತೆಯಾಗಿದೆ. ಈ ಭೀಕರ ಘಟನೆಗೆ ಇಡೀ ಹರಿಯಾಣವೇ ಬೆಚ್ಚಿ ಬಿದ್ದಿದೆ.

Ad Widget


Ad Widget


Ad Widget

Ad Widget


Ad Widget

ಅರ್ಚಕನನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟುಹಾಕಲು ಪ್ರಯತ್ನಿಸಿದ ದುಷ್ಟರು, ಶವಕ್ಕೆ ದೇವಾಲಯದ ಆವರಣದಲ್ಲಿಯೇ ಬೆಂಕಿ ಹಚ್ಚಿದ್ದಾರೆ. ಬೆಡ್‍ಶೀಟ್‍ನಲ್ಲಿ ಸುತ್ತಿ ಶವಕ್ಕೆ ಬೆಂಕಿ ಹಚ್ಚಲಾಗಿದೆ. ದೇಹ ಅರೆಬರೆ ಸುಟ್ಟು ಹೋಗಿದ್ದು, ಬೆಳಗ್ಗೆ ಗ್ರಾಮಸ್ಥರು ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ.

20 ವರ್ಷಗಳಿಂದ ಆ ಗ್ರಾಮದಲ್ಲಿ ವಾಸವಾಗಿದ್ದ ಚರಣಗಿರಿ ಮಹಾರಾಜ್ ಅವರನ್ನು ಭೇಟಿಯಾಗಲು ಬುಧವಾರ ಸಂಜೆ ಅವರ ಸ್ನೇಹಿತ ಮೋನಿ ಮಹಾರಾಜ್ ಬಂದಿದ್ದರು. ಗೆಳೆಯ ಬಂದು ಮಾತನಾಡಿ ಹೋದ ಮರುದಿನವೇ ಚರಣಗಿರಿ ಮಹಾರಾಜ್ ಕೊಲೆಯಾಗಿದೆ. ಈ ಕೊಲೆ ನಡೆದ ಬಳಿಕ ಮೋನಿ ಮಹಾರಾಜ್ ನಾಪತ್ತೆಯಾಗಿದ್ದಾನೆ. ಆತನೇ ಈ ಕೊಲೆ ಮಾಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದ್ದಾರೆ.
ಅರ್ಚಕನ ಎದೆ ಭಾಗಕ್ಕೆ ತ್ರಿಶೂಲದಿಂದ ಇರಿದಿರುವ ಗುರುತುಗಳು ಪತ್ತೆಯಾಗಿದ್ದು, ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: