ಆ.15 : ಸವಣೂರು ವಿದ್ಯಾರಶ್ಮಿಯಲ್ಲಿ ಶೀಂಟೂರು ಸ್ಮೃತಿ 2021

ಸವಣೂರು : ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 15ನೆ ಅಗೋಸ್ತು 2021ನೆ ಆದಿತ್ಯವಾರದಂದು 75ನೆ ಸ್ವಾತಂತ್ರೋತ್ಸವ ದಿನಾಚರಣೆ ಮತ್ತು ಶೀಂಟೂರು ಸ್ಮೃತಿ 2021 (ಸ್ಥಾಪಕರ ದಿನಾಚರಣೆ) ಜಂಟಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು ತಿಳಿಸಿದ್ದಾರೆ.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶೀಂಟೂರು ನಾರಾಯಣ ರೈ ಅವರು ಸೇನಾನಿಯಾಗಿ, ಸಹಕಾರಿಯಾಗಿ, ಶಿಕ್ಷಕರಾಗಿ, ಕೃಷಿಕರಾಗಿ ರಾಷ್ಟ್ರಪ್ರಶಸ್ತಿ ಪಡೆದವರು. ಭಾರತದ ಪ್ರಧಾನಿಯವರ ಆಶಯದಂತೆ ದೇಶದ ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವ ಸಲ್ಲುತ್ತಿರುವ ಈ ಸಂದರ್ಭದಲ್ಲಿ ರೈತಾಪಿ, ಶಿಕ್ಷಕ ಮತ್ತು ಸೈನಿಕ ವರ್ಗದವರಿಗೆ ವಿಶೇಷ ಗೌರವ ಸಲ್ಲಿಸುವ ಇರಾದೆಯೊಂದಿಗೆ ನಿವೃತ್ತ ಮಿಲಿಟರಿ ಪೋಲೀಸ್ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಅವರನ್ನು ‘ಶೀಂಟೂರು ಸನ್ಮಾನ’ದೊಂದಿಗೆ ಗೌರವಿಸಲಾಗುವುದು.

ದ್ವಿತೀಯ ಪಿ.ಯು.ಸಿ.ಯಲ್ಲಿ ಈ ಬಾರಿ 600ರಲ್ಲಿ 600 ಅಂಕಗಳನ್ನು ಗಳಿಸಿ ವಿಶೇಷ ಸಾಧನೆಗೈದಿರುವ ಶ್ರದ್ಧಾ ಕೆ.ಎನ್. ಅವರನ್ನು ಗೌರವಿಸಲಾಗುವುದು. ಜೊತೆಗೆ ಪ್ರತಿಭಾವಂತ ಮತ್ತು ಶೈಕ್ಷಣಿಕ ಸಾಧಕರಾಗಿರುವ 5 ಮಂದಿ ವಿದ್ಯಾರ್ಥಿಗಳನ್ನು ತಲಾ ರೂ. 5,000/- ಶಿಷ್ಯವೇತನ ನೀಡಿ ಪುರಸ್ಕರಿಸಲಾಗುವುದು.

Ad Widget
Ad Widget

Ad Widget

Ad Widget

ಸಂಸ್ಥೆಗಳ ಆಡಳಿತಾಧಿಕಾರಿಯವರಾದ ಅಶ್ವಿನ್ ಎಲ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಸಮಾರಂಭದಲ್ಲಿ ಕಡಬದ ಉದ್ಯಮಿ ಅಜಿತ್ ಕಡಬ, ಸುಳ್ಯದ ಶ್ರೀ ಶಾರದಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಜ್ಯೋತ್ಸಾ ಕೆ.. ನಿವೃತ್ತ ಪ್ರಾಂಶುಪಾಲ ರೊ, ಝೇವಿಯರ್ ಡಿಸೋಜಾ, ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೀವಿ ವಿ. ರೈ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎನ್. ಸುಂದರ ರೈ, ಡಾ. ರಾಜೇಶ್ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಪ್ರಾಂಶುಪಾಲರುಗಳಾದ ಸೀತಾರಾಮ ಕೇವಳ, ರಾಜಲಕ್ಷ್ಮೀ ಎಸ್. ರೈ ಮುಂತಾದವರು ಭಾಗವಹಿಸಿದ್ದರು.

Leave a Reply

error: Content is protected !!
Scroll to Top
%d bloggers like this: