ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ದಿನದ ಸವಿನೆನಪಿಗಾಗಿ ಇನ್ನು ಮುಂದೆ ಆಗಸ್ಟ್ 7 “ರಾಷ್ಟ್ರೀಯ ಜಾವಲಿನ್ ದಿನ” |ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ದಿಂದ ಘೋಷಣೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ನೀರಜ್ ಚೋಪ್ರಾ. ಈ ದಾಖಲೆ ಸದಾ ನೆನಪು ಉಳಿಯುವಂತೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ಡೇ ಹೆಸರಿನಲ್ಲಿ ಆಚರಿಸಲು ನಿರ್ಧರಿಸಿದೆ.

ಶತಕೋಟಿ ಭಾರತೀಯರ ಶತಮಾನದ ಕನಸು, ನೀರಜ್ ಚೋಪ್ರಾರವರ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಎತ್ತಿ ಹಿಡಿದು ದೇಶಕ್ಕೆ ಕೀರ್ತಿ ತರುವ ಮೂಲಕ ನನಸಾಗಿಸಿದ್ದಾರೆ.

ಅಥ್ಲೀಟ್​ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ, ದೇಶದಾದ್ಯಂತ ಜಾವೆಲಿನ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಿಸಲಾಗುವುದು ಎಂದು ಎಎಫ್​ಐ ಪ್ಲಾನಿಂಗ್ ಕಮಿಷನ್ ಚೇರ್​​ಮನ್ ಲಲಿತ್ ಭಾನೋಟ್ ಹೇಳಿದ್ದಾರೆ.

Ad Widget


Ad Widget


Ad Widget

Ad Widget


Ad Widget

ಇಷ್ಟೇ ಅಲ್ಲದೆ, ಅಂತರ್​ ಜಿಲ್ಲಾ ಕಾಂಪಿಟಿಷನ್​ಗಳನ್ನು ನಡೆಸಲಾಗುವುದು. ಜೊತೆಗೆ ಅಗತ್ಯವಿದ್ದಲ್ಲಿ ಜಾವೆಲಿನ್​ಗಳನ್ನು ಪೂರೈಕೆ ಕೂಡ ಮಾಡಲಾಗುವುದು. ಇಂಥಹ ಸ್ಪರ್ಧೆಗಳನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನಾಗಿ ಪರಿವರ್ತಿಸಲು ಚಿಂತಿಸಲಾಗಿದೆ ಎಂದಿದ್ದಾರೆ.

ಇದುವರೆಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ 23 ವರ್ಷದ ಚೋಪ್ರಾ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದು ಕೊಡುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: