ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡ ರವಿ ದಹಿಯಾ | ಮೊದಲ ಚಿನ್ನದ ಅಕೌಂಟ್ ತೆರೆಯುತ್ತದೆಂಬ ಕನಸು ಭಗ್ನ

ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ರವಿಕುಮಾರ್ ದಾಹಿಯ ಅವರು ಫೈನಲ್‌ನಲ್ಲಿ ರಷ್ಯಾ ಎದುರಾಳಿ ಚೌರ್ ಉಗ್ಯೂವ್ ಎದುರು ಸೋಲಿಗೆ ಶರಣಾಗುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

57 ಕೆಜಿ ಕುಸ್ತಿ ವಿಭಾಗದಲ್ಲಿ ರಷ್ಯಾದ ಚೌರ್ ಉಗ್ಯೂವ್ 7-4 ಅಂತರದಲ್ಲಿ ದಾಹಿಯಾ ಅವರನ್ನು ಸೋಲಿಸಿದರು. ಈ ಮೂಲಕ ಚಿನ್ನದ ಕನಸು ಕಂಡಿದ್ದ ಭಾರತೀಯರಿಗೆ ನಿರಾಸೆಯಾಯಿತು. ಆದರೂ, ದಾಹಿಯಾ ಫೈನಲ್ ಸುತ್ತಿಗೇರಿದ್ದರಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಒಲಿದು ಬಂದಿದ್ದು, ಒಲಿಂಪಿಕ್ಸ್‌ನಲ್ಲಿ ಈವರೆಗೂ ಎರಡು ಬೆಳ್ಳಿ ಪದಕ ಸೇರಿದ ಒಟ್ಟು 5 ಪದಕಗಳನ್ನು ಜಯಿಸಿದೆ.

ಸೆಮಿಫೈನಲ್ ಪಂದ್ಯದಲ್ಲಿ ಕಜಕಸ್ತಾನಿನ ನುರಿಸ್ಲಮ್ ಸನಯೆವ್ ಸೋಲಿಸಿ, ದಹಿಯಾ ಫೈನಲ್ಗೇರಿದ್ದರು.
ಆರಂಭದಲ್ಲಿ ಚೌರ್ ಉಗ್ಯೂವ್ ಮತ್ತು ದಾಹಿಯ ಉತ್ತಮ ರಕ್ಷಣಾತ್ಮಕ ಆಟವಾಡಿದರು. ಆದರೆ, ಉಗ್ಯೂವ್ ಎರಡು ಬಾರಿ ದಾಹಿಯ ಅವರನ್ನು ಕುಸ್ತಿ ರಿಂಗ್‌ನಿಂದ ಹೊರ ತಳ್ಳಿದರು. ಈ ಮೂಲಕ ಉಗ್ಯೂವ್ ಮೊದಲ ಸುತ್ತಿನಲ್ಲಿ 2-0ಯಿಂದ ಮುನ್ನಡೆ ಕಾಯ್ದುಕೊಂಡರು.

Ad Widget


Ad Widget


Ad Widget

Ad Widget


Ad Widget

ಇದಾದ ಬಳಿಕ ದಾಹಿಯ ಕೂಡ ಒಳ್ಳೆಯ ಕಮ್‌ಬ್ಯಾಕ್ ಮಾಡುವ ಮೂಲಕ 2 ಅಂಕಗಳನ್ನು ಗಳಿಸಿದರು. ಅದರ ಬೆನ್ನಲ್ಲೇ ಉಗ್ಯೂವ್ ಕೂಡ ಮತ್ತೆರೆಡು ಅಂಕಗಳೊಂದಿಗೆ 2 ರಲ್ಲಿ ಮತ್ತೆ ಮುನ್ನಡೆ ಕಾಯ್ದುಕೊಂಡರು. ರವಿ ಮೊದಲ ಅವಧಿಯಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸಿದರು. ಆದರೆ, ವಿರಾಮದ ವೇಳೆಗೆ ಅಂಕ ಉಗ್ಯೂವ್ 4-2 ಪರವಾಗಿ ಉಳಿಯಿತು.

ಎರಡನೇ ಅವಧಿಯಲ್ಲಿ ಉಗ್ಯೂವ್ ಮತ್ತೊಮ್ಮೆ ದಾಹಿಯರನ್ನು ರಿಂಗ್‌ನಿಂದ ಹೊರ ತಳ್ಳಿದರು. ಕೊನೆಗೆ ಉಗ್ಯೂವ್ ಅಂಕ ಏರಿಸುತ್ತಲೇ 7-2 ಅಂಕದೊಂದಿಗೆ ಹೆಚ್ಚಿನ ಮುನ್ನಡೆ ಗಳಿಸಿದರು. ಇದರ ನಡುವೆ ದಾಹಿಯ ಎರಡು ಅಂಕಗಳಿಸಿದರು. ಕೊನೆಯ ಸುತ್ತಿನಲ್ಲಿ 4-7ರೊಂದಿಗೆ ದಹಿಯಾ ಫೈನಲ್‌ನಲ್ಲಿ ಉಗ್ಯೂವ್ ಎದುರು ಮಂಡಿಯೂರಿದರು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: