ದಕ್ಷಿಣ ಕನ್ನಡ ನಿಯಂತ್ರಣ ತಪ್ಪಿದ ಕೋವಿಡ್
ಕಳದೊಂದು ವಾರದಿಂದ ದಕ್ಷಿಣ ಕನ್ನಡ, ಉಡುಪಿ ಸಹಿತ ಗಡಿ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಶೇ. 5 ಹೆಚ್ಚಳವಾಗಿದೆ. ದಕ್ಷಿಣ ಕನ್ನಡ ದಲ್ಲಿ ಪಾಸಿಟಿವಿಟಿ ದರ ಶೇ. 5ರ ಗಡಿ ದಾಟಿದೆ.
ಜುಲೈ ಕೊನೆಯಲ್ಲಿ ರಾಜ್ಯದಲ್ಲಿ ಸರಾಸರಿ ಶೇ. 1.42ರಷ್ಟು ಪಾಸಿಟಿವಿಟಿ ದರ ಇತ್ತು.
ಈ ಅವಧಿಯಲ್ಲಿ ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರ ಶೇ. 5.64, ಚಿಕ್ಕ ಮಗಳೂರಿನಲ್ಲಿ ಶೇ. 4.82, ಕೊಡಗಿನಲ್ಲಿ ಶೇ. 4.69, ಉಡುಪಿಯಲ್ಲಿ ಶೇ. 4.27ರಷ್ಟಿತ್ತು. ಜುಲೈ 3ನೇ ವಾರದಲ್ಲಿ ಪಾಸಿಟಿ ವಿಟಿ ದರ ಕೊಡಗಿನಲ್ಲಿ ಶೇ. 3.6, ಉಡುಪಿಯಲ್ಲಿ ಶೇ. 2.9, ದಕ್ಷಿಣ ಕನ್ನಡದಲ್ಲಿ ಶೇ. 3.6ರಷ್ಟಿತ್ತು.
ತಜ್ಞರ ಪ್ರಕಾರ ಒಂದು ಪ್ರದೇಶದಲ್ಲಿ ಸೊಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇದ್ದರೆ ಅಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂಬುದು ಲೆಕ್ಕಾಚಾರ.
ಅನ್ಲಾಕ್ ಸಂದರ್ಭದಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಬಂದ ಜಿಲ್ಲೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಸದ್ಯ ದಕ್ಷಿಣ ಕನ್ನಡದಲ್ಲಿ ಒಂದೇ ವಾರದಲ್ಲಿ ಪಾಸಿಟಿವಿಟಿ ದರ ಶೇ. 2ರಷ್ಟು ಏರಿಕೆ ಕಂಡಿದೆ.