ಪೊಲೀಸರೊಂದಿಗೆ ರಾದ್ಧಾಂತ ಮಾಡಿದ್ದಲ್ಲದೆ, ಪೊಲೀಸಪ್ಪನ ಕೈಯನ್ನೇ ಕಚ್ಚಿದ ಮಹಿಳೆ!!

ಬೆಂಗಳೂರು: ಚಿಕ್ಕಪೇಟೆಯಲ್ಲಿ ಪೊಲೀಸರೊಂದಿಗೆ ರಾದ್ಧಾಂತ ಮಾಡಿದ ಮಹಿಳೆಯೋರ್ವಳು, ಕೊನೆಗೆ ಪೊಲೀಸಪ್ಪನ ಕೈಯನ್ನೇ ಕಚ್ಚಿದ ಘಟನೆ ನಡೆದಿದೆ.

ಚಿಕ್ಕಪೇಟೆಯಲ್ಲಿ ಶಾಪಿಂಗ್‍ಗೆ ಬಂದಿದ್ದ ಮಹಿಳೆ, ಫುಟ್‍ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡಿಸುತ್ತಿದ್ದ ಪೊಲೀಸರಿಗೆ ವಾರ್ನ್ ಮಾಡಿದ್ದಳು. ಹಾಗೆಯೇ ಮಹಿಳೆ ಜನರಿಗೆ ಯಾಕೆ ಸುಮ್ಮನೆ ಸಮಸ್ಯೆ ಮಾಡುತ್ತೀರಾ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ.

ರಾದ್ಧಾಂತ ಮಾಡಿದ್ದಲ್ಲದೇ ಗಲಾಟೆ ಕೂಡ ಮಾಡಿ, ಪೊಲೀಸರು ಅಂಗಡಿಗಳನ್ನು ತೆರವು ಮಾಡುತ್ತಿರುವ ವೀಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದಳು. ಈ ವೇಳೆ ಮೊಬೈಲ್ ಕೊಡಿ ಎಂದು ಪೊಲೀಸರು ಕೇಳಿದಾಗ, ಪೊಲೀಸ್ ಪೇದೆಯ ಕೈಯನ್ನೇ ಮಹಿಳೆ ಕಚ್ಚಿದ್ದಾಳೆ. ಪೊಲೀಸ್ ಪೇದೆಯ ಕೈ ಕಚ್ಚಿದ ಮಹಿಳೆಯನ್ನು ಕೂಡಲೇ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಠಾಣೆಯಲ್ಲಿ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ತನ್ನ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

Leave A Reply

Your email address will not be published.