ಸವಣೂರಿನಲ್ಲಿ 25 ಕ್ಕೂ ಹೆಚ್ಚು ಮಂದಿ ಎಸ್.ಡಿ.ಪಿ.ಐ. ಪಕ್ಷಕ್ಕೆ ಸೇರ್ಪಡೆ

ಸವಣೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ಇಂದು ಸವಣೂರಿನಲ್ಲಿ ನಡೆಯಿತು.
ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು ಎಸ್.ಡಿ.ಪಿ.ಐ.ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಪುತ್ತೂರು ರವರು ಸವಿಸ್ತಾರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ 25 ಮಂದಿ ಎಸ್.ಡಿ.ಪಿ.ಐ. ಸವಣೂರು ಗ್ರಾಮ ಸಮಿತಿ ಅದ್ಯಕ್ಷ ರಜಾಕ್ ಕೆನರಾ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎ.ರಫೀಕ್,ಬಾಬು.ಎನ್,ಪಿ.ಎಫ್.ಐ.ಸವಣೂರು ಏರಿಯಾ ಅಧ್ಯಕ್ಷರಾದ ಇರ್ಷಾದ್ ಸರ್ವೆ,ಹಂಝ ಸರ್ವೆ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ad Widget / / Ad Widget

Leave a Reply

error: Content is protected !!
Scroll to Top
%d bloggers like this: