ಮಲ್ಪೆ ಕಡಲತೀರದಲ್ಲಿ ಯುವತಿಯೋರ್ವಳು ಸಮುದ್ರ ಪಾಲಾದ ಘಟನೆ ಇಂದು ನಡೆದಿದೆ.
ಮುಂಜಾನೆ ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ಮಲ್ಪೆ ಬೀಚ್ ಗೆ ಆಗಮಿಸಿ, ನೀರಿನಲ್ಲಿ ಆಟವಾಡುತ್ತಿದ್ದರು. ಸ್ಥಳೀಯರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಇವರು ಕೇಳದೆ, ನೀರಿಗಿಳಿದಿದ್ದಾರೆ.
ಇನ್ನು ನಾಲ್ಕು ಮಂದಿಯ ಪೈಕಿ ಒರ್ವ ಯುವತಿ ನಾಪತ್ತೆಯಾಗಿದ್ದು, ಉಳಿದವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.