ಮದುವೆ ನಡೆಯುತ್ತಿದ್ದಾಗ ತೂಕಡಿಸಿದ ವಧು | ಸಮಯದ ಸದುಪಯೋಗ ಪಡಿಸಿಕೊಂಡ ಯುವಕ ಮಾಡಿದ ವಧುವಿಗೆ ಕಿಸ್!!

ಭಾರತೀಯ ವಿವಾಹ ವಿಧಿವಿಧಾನಗಳು ಹಲವು ದಿನಗಳವರೆಗೆ ನಡೆಯುತ್ತವೆ. ಪ್ರತಿಯೊಂದು ಶಾಸ್ತ್ರದಲ್ಲಿ ಭಾಗಿಯಾಗುವ ವಧುವರರು ಸುಸ್ತಾಗುವುದು ಸಹಜ. ಕೆಲವೊಮ್ಮೆ ಆಯಾಸ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಶಾಸ್ತ್ರಗಳು ನಡೆಯುತ್ತಿರುವಾಗಲೇ ವಧು, ವರರು ತೂಕಡಿಸಲು ಆರಂಭಿಸುತ್ತಾರೆ.

ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಸುಸ್ತಾಗಿದ್ದ ವಧು ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಈ ಸಮಯವನ್ನು ಅಲ್ಲೇ ಹಿಂದೆ ಕುಳಿತಿದ್ದ ಹುಡುಗನೊಬ್ಬ ಹೇಗೆ ಬಳಸಿಕೊಂಡಿದ್ದಾನೆ ಎಂಬುದನ್ನು ನೋಡಿ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ, ವಧುವರರು ಮದುವೆಯ ಶಾಸ್ತ್ರಕ್ಕಾಗಿ ಮಂಟಪದಲ್ಲಿ ಕುಳಿತಿದ್ದಾರೆ. ಹೀಗೆ ಶಾಸ್ತ್ರಕ್ಕೆ ಕುಳಿತ ವಧು ಅಲ್ಲೇ ನಿದ್ದೆಗೆ ಜಾರಿದ್ದಾಳೆ. ಅಲ್ಲೇ ಇದ್ದ ಮಹಿಳೆ ಎಚ್ಚರಗೊಳ್ಳುವಂತೆ ಕೈ ಸನ್ನೆ ಮಾಡಿ ಹೇಳುವುದನ್ನು ಕೂಡಾ ವಿಡಿಯೋದಲ್ಲಿ ಕಾಣಬಹುದು. ಆದರೆ ಗಾಢ ನಿದ್ದೆಯಲ್ಲಿರುವ ವಧುವಿಗೆ ಇದು ಗೊತ್ತಾಗುವುದಿಲ್ಲ. ಆದರೆ ಅಲ್ಲೇ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಮಾಡಿರುವ ಕೆಲಸ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

Ad Widget / / Ad Widget

ಶಾಸ್ತ್ರಗಳು ನಡೆಯುತ್ತಿರುವ ಮಧ್ಯೆಯೇ ನಿದ್ದೆ ಹೋಗಿರುವ ವಧುವಿನ ಕೆನ್ನೆಗೆ ಆ ಹುಡುಗ ಕಿಸ್ ಕೊಟ್ಟಿದ್ದಾನೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ, ವಧುವಿನ ಅಷ್ಟು ಹತ್ತಿರ ಕುಳಿತಿರುವ ಆ ಹುಡುಗ ವಧುವಿನ ಸಹೋದರ ಇರಬಹುದೆಂದು ಊಹಿಸಲಾಗಿದೆ.

ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿರಂಜನ್ ಮೊಹಾಪಾತ್ರ ಎಂಬ ವ್ಯಕ್ತಿ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ 19 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: