ಭಾರತೀಯ ಬ್ಯಾಡ್ಮಿಂಟನ್ ತಾರೆ ಬಲಿಷ್ಠ ಬಾಹುಗಳ ಒಡತಿ ಕ್ವಾರ್ಟರ್ ಫೈನಲ್ ಗೆ | ಇನ್ನು ಎರಡೇ ಹೆಜ್ಜೆಗಳ ದೂರದಲ್ಲಿ ಒಂದು ಪದಕ

ಟೋಕಿಯೊ: ಭಾರತೀಯ ಬ್ಯಾಡ್ಮಿಂಟನ್ ತಾರೆ, ಬಲಿಷ್ಠ ಬಾಹುಗಳ ಒಡತಿ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇನ್ನು ಎರಡು ಹೆಜ್ಜೆಗಳ ಅಂತರದಲ್ಲಿ ಭಾರತಕ್ಕೆ ಒಂದು ಪದಕ ಲಭ್ಯವಾಗಲಿದೆ.

ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಕ್ ಫೆಲ್ಸ್ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ಉದ್ದನೆಯ ಸದೃಢ ಕಾಲುಗಳುಳ್ಳ, ಈ ಹೈದರಾಬಾದ್ ನ ಹುಡುಗಿ ಗಂಡಸರ ಮೈಕಟ್ಟು ಮತ್ತು ತಾಕತ್ತು ಉಳ್ಳವಳು. ತನಗಿಂತ ಕಡಿಮೆ ಎತ್ತರದ ಕ್ರೀಡಾಳುಗಳ ಎದುರು ಆಕೆ ವಿಜೃಂಭಿಸುತ್ತಾಳೆ. ಕ್ರಾಸ್ ಕೋರ್ಟ್ ಸರ್ವ್ ನೀಡುವುದರಲ್ಲಿ ಆಕೆ ಅದು ಪಳಗಿದ ಕೈ. ಉದ್ದನೆಯ ಕಾಲುಗಳು ಮತ್ತು ಬಹುದೂರ ವಿಸ್ತರಿಸಬಲ್ಲ ಆಜಾನುಬಾಹು ಕೈಗಳ ಸಹಾಯದಿಂದ ಆಕೆ ಅತ್ಯಂತ ಕಡಿಮೆ ಮೂವ್ಮೆಂಟ್ ಮಾಡಿದರೂ, ಇಡೀ ಕೋರ್ಟ್ ನುದ್ದಕ್ಕೂ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳ ಬಲ್ಲ ಕೆಪ್ಯಾಸಿಟಿ ಉಳ್ಳ ಹುಡುಗಿನ ಪಿ ವಿ ಸಿಂಧು.

‘ಐ’ ವಿಭಾಗದ ಅಗ್ರಸ್ಥಾನಿಯಾಗಿದ್ದ ಮಿಯಾ ಬ್ಲಿಕ್ ಫೆಲ್ಟ್ ಅವರನ್ನು 21-15, 21-13 ಸೆಟ್ ಗಳ ಅಂತರದಿಂದ ಸೋಲಿಸಿದರು. ಇದರೊಂದಿಗೆ ಥಾಯ್ಲೆಂಡ್ ಓಪನ್ ನಲ್ಲಿನ ಬ್ಲಿಕ್ ಫೆಲ್ಸ್ ವಿರುದ್ಧದ ಸೋಲಿಗೆ ಸಿಂಧು ಒಲಿಂಪಿಕ್ಸ್‌ನಲ್ಲಿ ಪ್ರತೀಕಾರ ತೆಗೆದುಕೊಂಡರು.

ಜಪಾನ್‌ನ ಅಕಾನೆ ಯಮಗುಚಿ ಮತ್ತು ಕೊರಿಯಾದ ಕಿಮ್ ಗೇನ್ ನಡುವಿನ ಪಂದ್ಯದ ವಿಜೇತರನ್ನು ಸಿಂಧು ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.

Leave A Reply

Your email address will not be published.