ಬೆಳ್ತಂಗಡಿ | ಆಟೋ ರಿಕ್ಷಾಕ್ಕೆ ಗುದ್ದಿ ಹಿಟ್ ಅಂಡ್ ರನ್ ಮಾಡಿದ ಕಂಟೇನರ್ ಲಾರಿ, ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹಿಡಿದ ಯುವಕರು

ಬೆಳ್ತಂಗಡಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಕಂಟೇನರ್ ಗಾಡಿಯೊಂದು ಗುದ್ದಿ ಹೊಡೆದುಕೊಂಡು ಹೋದ ಘಟನೆ ನಡೆದಿದೆ.

ಬೆಳ್ತಂಗಡಿಯ ವಾಣಿ ಶಾಲೆಯ ಪಕ್ಕದಲ್ಲಿ ಬಜಾಜ್ ಆಟೋ ಬಂದು ನಿಂತಿತ್ತು. ಅದೃಷ್ಟವಶಾತ್ ಆಟೋಚಾಲಕ ಪಕ್ಕದ ಅಂಗಡಿಗೆ ಆಟೋ ನಿಲ್ಲಿಸಿ ತೆರಳಿದ್ದರು. ಆ ಸಂದರ್ಭ ಅತಿಯಾದ ವೇಗದಿಂದ ಧಾವಿಸಿಬಂದ ಕಂಟೇನರ್ ಗಾಡಿ ಆಟೋ ಗೆ ಗುದ್ದಿ ಹೊಡೆದುಕೊಂಡು ಹಾಗೇ ಮುಂದುವರೆದಿದೆ.  ಕಂಟೇನರ್ ಗಾಡಿ ಹಿಟ್ ಅಂಡ್ ರನ್ ಮಾಡಿ ಮಂಗಳೂರು ರಸ್ತೆಯಲ್ಲಿ ಮುನ್ನುಗ್ಗಿದೆ.

ಈ ಅವಗಡ ಆದ ಕೂಡಲೇ ಸ್ಥಳೀಯ ಯುವಕರು ಬೈಕ್ ಮೂಲಕ ಗಾಡಿಯನ್ನು ಚೇಸ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಕಂಟೇನರ್ ಗಾಡಿಯು ಗುರುವಾಯನಕೆರೆ ದಾಟಿ ಮಡಂತ್ಯಾರು ತಲುಪಿತ್ತು. ಮಡಂತ್ಯಾರು ಪಕ್ಕದ ಕೊಳ್ಪೆದ ಬೈಲು ಎಂಬಲ್ಲಿ ಸ್ಥಳೀಯರು ಲಾರಿಯನ್ನು ಅಡ್ಡಹಾಕಿ ನಿಲ್ಲಿಸಿದ್ದಾರೆ. ಇದೀಗ ಲಾರಿ ಚಾಲಕನನ್ನು ಬೆಳ್ತಂಗಡಿ ಠಾಣೆಗೆ ಎಳೆದು ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.