ಕರಾವಳಿಯ ಎಸ್.ಅಂಗಾರ,ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್,ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ಸಾಧ್ಯತೆ

ಮಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನೇನಿದ್ದರೂ ಸಂಪುಟ ರಚನೆಯ ಕಸರತ್ತು ಆರಂಭವಾಗಲಿದೆ.

ಈ ಸಂಪುಟದಲ್ಲಿ ಕರಾವಳಿಯ ನಾಲ್ವರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ದ.ಕ.ದಿಂದ ಹಿರಿಯ ಶಾಸಕ,ಬಂದರು ಹಾಗೂ ಒಳನಾಡು,ಮೀನುಗಾರಿಕೆ ಸಚಿವ ಎಸ್ ಅಂಗಾರ ಅವರಿಗೆ ಬಹುತೇಕ ಮಂತ್ರಿ ಸ್ಥಾನ‌ ಸಿಗಲಿದೆ.ಈಗಿರುವಂತೆಯೇ ಅವರ ಸ್ಥಾನ ದೊರಕಲಿದೆ ಎನ್ನಲಾಗಿದೆ.

ಉಡುಪಿಯಿಂದ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸ್ಥಾನ ದೊರಕುವ ಸಾಧ್ಯತೆ ಹೆಚ್ಚಳ,ಅವರಿಗೆ ಮುಜರಾಯಿ ಇಲಾಖೆ ದೊರಕಲಿದೆ ಎನ್ನಲಾಗಿದೆ.ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೂ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ.

ಇನ್ನು ಉತ್ತರಕನ್ನಡ ಜಿಲ್ಲೆಯ ಕಾರಾವಾರ -ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕಿ ರೂಪಾಲಿ‌ ನಾಯ್ಕ ಅವರಿಗೂ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ.ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೊರಕಲಿದೆ ಎನ್ನಲಾಗಿದೆ.

ಈ ಬಾರಿ‌ ಮುಂದಿನ‌ ಚುನಾವಣೆಯನ್ನು ಮುಂದಿಟ್ಟುಕೊಂಡು ಸಂಪುಟ ರಚನೆಯಾಗಲಿದ್ದು,ಪ್ರತೀ‌ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವಲ್ಲಿ ಬಿಜೆಪಿ ಗಮನಹರಿಸಲಿದೆ ಎಂಬ ಮಾಹಿತಿ ದೊರಕಿದೆ.

Leave A Reply

Your email address will not be published.