ದರ್ಬೆತಡ್ಕ ಶಾಲಾ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ ಕಂದಾಯ ಇಲಾಖೆಯಿಂದ ಮನೆ ತೆರವು ಪ್ತಕರಣ | ನ್ಯಾಯ ಸಿಗದೇ ಇದ್ದರೆ ಹೋರಾಟ -ಕಾಂಗ್ರೇಸ್ ಎಸ್.ಸಿ ಘಟಕ

ಪುತ್ತೂರು : ಜುಲೈ 27 ರಂದು ಒಳಮೊಗ್ರು ಗ್ರಾಮದ ದರ್ಬೆತಡ್ಕ ಶಾಲಾ ಬಳಿ ಬಡ ದಲಿತ ಕುಟುಂಬದ ಮೇಲಾದ ದೌರ್ಜನ್ಯವನ್ನು ಪುತ್ತೂರು ಬ್ಲಾಕ್ ಎಸ್ ಸಿ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ 12 ವರುಷಗಳಿಂದ ಆ ಸ್ಥಳದಲ್ಲಿ ವಾಸವಿದ್ದ ರಘುನಾಥ ಅವರ ಮನೆಯನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಎಕಾಏಕಿಯಾಗಿ ಬಂದು ಧ್ವಂಸ ಮಾಡಿದರೆ ಅವರ ಕುಟುಂಬ ಎಲ್ಲಿಗೆ ಹೋಗಬೇಕು?
ತನಗಾದ ಅನ್ಯಾಯವನ್ನು ಕಂಡು ತೀವ್ರವಾಗಿ ನೊಂದ ರಘುನಾಥ ರವರು ಆತ್ಮಹತ್ಯೆಗೆ ಯತ್ನಿಸಿ,ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಕುಟುಂಬದ ವೇದನೆಯನ್ನು ಕಂಡಾಗ ಮನಸ್ಸು ಕರಗುತ್ತದೆ.

ಬಡ ಕಷ್ಟದಲ್ಲಿರುವ ಕುಟುಂಬ ಇದೀಗ ಬೀದಿಗೆ ಬಂದಿದೆ ಇದಕ್ಕೆ ನೇರ ಹೊಣೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಮನೆಯನ್ನು ಕೇಡವಲು ಪರೋಕ್ಷವಾಗಿ ಸಹಕರಿಸಿದ ಅಲ್ಲಿನ ಜನ ಪ್ರತಿನಿಧಿ ಹಾಗೂ ಕ್ಷೇತ್ರದ ಶಾಸಕರು ಇದಕ್ಕೆ ಉತ್ತರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಪ.ಜಾ.ಘಟಕ ಆರೋಪಿಸಿದೆ.

Ad Widget


Ad Widget


Ad Widget

Ad Widget


Ad Widget

ಇದೀಗ ಬೀದಿಗೆ ಬಂದಿರುವ ರಘುನಾಥ್ ಅವರ ಕುಟುಂಬಕ್ಕೆ ಸೂಕ್ತ ರಿತಿಯಲ್ಲಿ ಪರಿಹಾರ ನೀಡಬೇಕು ಅವರ ಚಿಕಿತ್ಸಾ ವೆಚ್ಚವನ್ನು ಸಂಬಂಧ ಪಟ್ಟ ಅಧಿಕಾರಿಗಳೇ ಭರಿಸಬೇಕು ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡಜಿಲ್ಲೆಯ ಎಲ್ಲಾ ಎಸ್ಸಿ ಘಟಕವನ್ನು ಒಗ್ಗೂಡಿಸಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: