ಸಿನಿ ನಟಿಯರನ್ನು ಬೆತ್ತಲು ಮಾಡಲು ಹೊರಟ ರಾಜ್ ಕುಂದ್ರಾ ನ ಕರಾಳ ಕಾಮ ಲೋಕ ಮತ್ತಷ್ಟು ಬಯಲಿಗೆ | ಮಾಹಿತಿ ನೀಡಿದ ಮಾಡೆಲ್ ಜೋಯಾ ರಾಥೋಡ್ !

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಕಾಮ ಕುಂದ್ರಾ ಅವರ ಬಂಧನದ ನಂತರ ಒಂದೊಂದಾಗಿ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಲವು ಸಿನಿ ತಾರೆಯರನ್ನು ಬೆತ್ತಲೆ ಮಾಡಲು ಹೊರಟ ರಾಜ್ ಕುಂದ್ರಾ ಸ್ವತಃ ಜಗತ್ತಿನೆದುರು ಬೆತ್ತಲಾಗಿದ್ದಾನೆ.

ಹಾಟ್‌ಶಾಟ್ಸ್ ಮತ್ತು ಇತರೆ ವೆಬ್‌ಸೈಟ್‌ಗಳಿಗಾಗಿ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್ ಜೊಯಾ ರಾಥೋ ಅವರು ರಾಜ್ ಕುಂದ್ರಾರಿಂದ ಆಫರ್ ಸ್ವೀಕರಿಸಿದ್ದಾಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ.

ಹಾಟ್‌ಶಾಟ್ಸ್ ಆ್ಯಪ್‌ಗಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸುವಂತೆ ಕುಂದ್ರಾ ಅವರ ಆಪ್ತ ಸಹಾಯಕ ಮತ್ತು ಉದ್ಯಮ ಪಾಲುದಾರ ಉಮೇಶ್ ಕಾಮತ್, ಅನೇಕ ಬಾರಿ ನನಗೆ ಕರೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಬಂಧನಕ್ಕೂ ಮುಂಚೆ ಕಾಮತ್ ಜೊಯಾಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದರಂತೆ. ನಾನು ಹೊರಗಿರುವುದರಿಂದ ಆಫೀಸ್‌ನಲ್ಲಿ ಆಡಿಷನ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಕಾಮತ್, ವಾಟ್ಸ್ ಆ್ಯಪ್ ಮೂಲಕವೇ ಬೆತ್ತಲೇ ಆಡಿಷನ್ ನೀಡುವಂತೆ ಜೊಯಾಗೆ ದುಂಬಾಲು ಬಿದ್ದಿದ್ದರಂತೆ. ಆತನ ಮನವಿಗೆ ನಿರಾಕರಿಸಿದರೂ ಪದೇಪದೆ ಕರೆ ಮಾಡುತ್ತಿದ್ದರುಸದ್ಯದ ಮಟ್ಟಿಗೆ ಬಹು ಚರ್ಚಿತ ವಿಷಯವಾಗಿದೆ. ಕುಂದ್ರಾ ಬಂಧನವಾದಾಗಿನಿಂದ  ಎಂದು ಜೊಯಾ ಆರೋಪಿಸಿದ್ದಾರೆ.

ಸ್ಕ್ರಿಪ್ಟ್ ತಿಳಿಯದೇ ಬೆತ್ತಲೆ ಆಡಿಷನ್ ಕೊಡಲಾಗದು ಎಂದು ಜೊಯಾ ನಿರಾಕರಿಸಿದರೂ ಆಫರ್ ಒಪ್ಪಿಕೊಳ್ಳುವಂತೆ ಕಾಮತ್ ದುಂಬಾಲು ಬಿದ್ದಿದ್ದನಂತೆ. ವಯಸ್ಕರ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರೆ ದಿನಕ್ಕೆ 20 ಸಾವಿರ ರೂ. ಕೊಡುವುದಾಗಿ ಆಫರ್ ನೀಡಿದ್ದರು ಎಂದು ಜೊಯಾ ತಿಳಿಸಿದ್ದಾರೆ.

ಹಾಟ್‌ಶಾಟ್ಸ್‌ಗಾಗಿ ಕೆಲಸ ಮಾಡುವ ರಾಯ್ ಎಂಬಾತನು ಸಹ ಇದೇ ವಿಚಾರಕ್ಕೆ ಕರೆ ಮಾಡಿದ್ದ. ತಾನೂ ಯುಕೆ ಮೂಲದವನು ಎಂದು ಹೇಳಿಕೊಂಡಿದ್ದ. ಹಾಟ್‌ಶಾಟ್ಸ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆ ವೆಬ್‌ಸೀರಿಸ್ ಮಾಡುತ್ತಿರುವುದಾಗಿ ಹೇಳಿದ. ನಮ್ಮೊಂದಿಗೆ ಕೆಲಸ ಮಾಡಲು ಒಪ್ಪಿದರೆ ದಿನವೊಂದಕ್ಕೆ 70 ಸಾವಿರ ರೂ. ಕೊಡುವುದಾಗಿ ಆಫರ್ ಮಾಡಿದ ಎಂದು ಜೊಯಾ ಆರೋಪ ಮಾಡಿದ್ದಾರೆ. ಆಫರ್ ನಿರಾಕರಿಸಿದಾಗ ಬೋಲ್ಡ್ ಸಿನಿಮಾಗಳಲ್ಲೇ ನಟಿಸಿರುವಾಗ ಬೆತ್ತಲೆ ವೆಬ್ ಸೀರಿಸ್‌ನಲ್ಲಿ ನಟಿಸಲು ನಿಮಗೇನು ಸಮಸ್ಯೆ ಎಂದು ರಾಯ್ ಕೇಳಿದ್ದನಂತೆ. ಪದೇಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಮನವೊಲಿಸಲು ಸಾಕಷ್ಟು ಮನಸ್ಸು ಮಾಡಿದ್ದರು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ ಜೊಯಾ.

ಇನ್ನು ಜೊಯಾ ಅವರು ಬಡೆ ಅಚ್ಚೇ ಲಗ್ಗೆ ಹೈನ್, ಸೌಭಾಗ್ಯವತಿ ಭವ ಮತ್ತು ಫಿಯರ್ ಫೈಲ್ಸ್ ಹೆಸರಿನ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. 2011ರಿಂದ ಬೋಲ್ಡ್ ಸಿನಿಮಾಗಳಲ್ಲಿ ಜೊಯಾ ನಟಿಸುತ್ತಿದ್ದಾರೆ. ಆದರೆ, ಬೆತ್ತಲೆಯಾಗಿ ನಟಿಸಲು ನಿರಾಕರಿಸಿದ್ದಾರೆ.

Leave A Reply

Your email address will not be published.