Day: July 25, 2021

ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳು ಯುವತಿಯ ಯತ್ನ | ಪೊಲೀಸ್ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ, ಯುವತಿಯ ರಕ್ಷಣೆ

ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು CISF ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ ರಕ್ಷಿಸಲಾಗಿದೆ. ಈ ಘಟನೆ ದೆಹಲಿ ಫರಿದಾಬಾದ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮಾನಸಿಕವಾಗಿ ನೊಂದಿದ್ದ ಯವತಿ ಫರೀದಾಬಾದ್ ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಯುವತಿಯ ಗಮನಿಸಿದ ಮೆಟ್ರೋ ಸಿಬ್ಬಂದಿಗಳು ಮನವೋಲಿಸುವ ಯತ್ನ ಮಾಡಿದ್ದಾರೆ. ಆದರೆ ಈ ಮನವಿಗೆ ಯುವತಿ ಸೊಪ್ಪು ಹಾಕಿಲ್ಲ. ಕಟ್ಟಡದ ಅಂಚಿನಲ್ಲಿ ಕುಳಿತು ಕೆಳಕ್ಕೆ ಹಾರಲು ತಯಾರಿ ಮಾಡಿಕೊಂಡಿದ್ದಾಳೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು …

ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳು ಯುವತಿಯ ಯತ್ನ | ಪೊಲೀಸ್ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ, ಯುವತಿಯ ರಕ್ಷಣೆ Read More »

ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣ ಅಸಿಸ್ಟೆಂಟ್ ಪ್ರೊಫೆಸರ್ ಆತ್ಮಹತ್ಯೆ

ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ತೀವ್ರ ಬೇಸರಗೊಂಡು ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಿಜಯನಗರ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ. ಚಿಂತಾಮಣಿ ತಾಲ್ಲೂಕು ಟಿ. ದೇವಪಲ್ಲಿ ಮೂಲದ ಡಿ.ಎಸ್. ಮೀನಾ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಎಂಎ ಪದವೀಧರೆ ಆಗಿರುವ ಇವರು 18 ವರ್ಷಗಳ ಹಿಂದೆ ಲಚ್ಚಿ ರೆಡ್ಡಿ ಎಂಬವರೊಂದಿಗೆ ವಿವಾಹವಾಗಿದ್ದರು. ಇವರು ಕಾಲೇಜೊಂದರಲ್ಲಿ ಕನ್ನಡ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಎಎಸ್ ಪರೀಕ್ಷೆ ಬರೆದಿದ್ದ ಮೀನಾ, …

ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣ ಅಸಿಸ್ಟೆಂಟ್ ಪ್ರೊಫೆಸರ್ ಆತ್ಮಹತ್ಯೆ Read More »

ಸಿ.ಟಿ.ರವಿಗೆ ಕೌಂಟರ್ ಹೊಡೆದ ಸಿ.ಎಂ.ಯಡಿಯೂರಪ್ಪ

ರಾಜ್ಯದಲ್ಲಿ ನನಗೆ ಬಿಜೆಪಿಯಲ್ಲಿ ಸಿಕ್ಕಷ್ಟು ಸ್ಥಾನಮಾನ ಹಾಗೂ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಇದರಿಂದ ನನಗೆ ಸಮಾಧಾನ ಇದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ನನಗೆ ತೃಪ್ತಿಯಾಗಿದೆ. ಇದುವರೆಗಿನ ಕಾರ್ಯ ಸಮಾಧಾನ ತಂದಿದೆ. ಮುಂದೆ ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು. ನಾನು ಸಹ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೇ. ಆದರೆ ನನಗೆ ಪಕ್ಷದಲ್ಲಿ ಎಲ್ಲವೂ ಸಿಕ್ಕಿದೆ.ರಾಜ್ಯದಲ್ಲಿ ಬಹುಶಃ ನನಗೊಬ್ಬನಿಗೆ ಇಷ್ಟೊಂದು ಸ್ಥಾನಮಾನ ಹಾಗೂ …

ಸಿ.ಟಿ.ರವಿಗೆ ಕೌಂಟರ್ ಹೊಡೆದ ಸಿ.ಎಂ.ಯಡಿಯೂರಪ್ಪ Read More »

ಯಡಿಯೂರಪ್ಪ ಬೆಂಬಲಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಕರ್ನಾಟಕ ರಾಜ್ಯ ಬಿಜೆಪಿಯ ಮುಖ್ಯಮಂತ್ರಿ ನಾಯಕತ್ವ ಬದಲಾವಣೆ ಚರ್ಚೆ ಕುರಿತಂತೆ ದೊಡ್ಡ ತಿರುವೊಂದು ಸಿಕ್ಕಿದೆ. ಗೋವಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರನ್ನು ಪ್ರಶಂಸಿದ್ದಾರೆ. ಪತ್ರಕರ್ತರು ಕರ್ನಾಟಕ ರಾಜಕೀಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಡ್ಡಾ, “ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಉತ್ತಮವಾಗಿ ನಡೆಯುತ್ತಿದೆ. ಉಳಿದಂತೆ, ಯಡಿಯೂರಪ್ಪನವರು ಕೂಡ ಎಲ್ಲ ವಿಷಯಗಳನ್ನೂ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ” ಎಂದರು. ರಾಜಕೀಯ ಅಸ್ಥಿರತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ನಿಮಗೆ ಹಾಗೆ ಅನಿಸುತ್ತಿರಬಹುದು. …

ಯಡಿಯೂರಪ್ಪ ಬೆಂಬಲಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ Read More »

ಅಕ್ಕಂದು ಬೆಳಿಗ್ಗಿನ ಯೋಗ, ಬಾವಂದು ರಾತ್ರಿಯ ಭೋಗ | ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿನ ಟ್ರೋಲ್ ಮಾಡಿ ಜಗ್ಗಾಡುತ್ತಿರುವ ಟ್ರೋಲಿಗರು

ಬ್ಲೂಫಿಲ್ಮ್ ದಂಧೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ರಾಜ್​ ಕುಂದ್ರಾ ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಇದೀಗ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಅವರನ್ನು ನೆಟ್ಟಿಗರು ಎಳೆತಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಿನ್ನೆ ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮಾ 2 ಓಟಿಟಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ರಿಲೀಸ್​ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ …

ಅಕ್ಕಂದು ಬೆಳಿಗ್ಗಿನ ಯೋಗ, ಬಾವಂದು ರಾತ್ರಿಯ ಭೋಗ | ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿನ ಟ್ರೋಲ್ ಮಾಡಿ ಜಗ್ಗಾಡುತ್ತಿರುವ ಟ್ರೋಲಿಗರು Read More »

ನಳಿನ್ ಕಟೀಲ್ ಆಡಿಯೋ ವೈರಲ್ ಆದ ಕಾರಣ ಈ ಸಮಾವೇಶ | ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ಹೊಕ್ಕಂತೆ ಎಂದು ಸಿಎಂ ವಿರೋಧಿಗಳನ್ನು ಹಾವಿಗೆ ಹೋಲಿಸಿ ಟೀಕಿಸಿದ ದಿಂಗಾಲೇಶ್ವರ ಶ್ರೀ

ಬೆಂಗಳೂರು, ಜುಲೈ 25: ನಾಯಕತ್ವ ಬದಲಾವಣೆ ವಿಚಾರವಾಗಿ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ತುಣುಕು ಹರಿದಾಡಿದ ಪರಿಣಾಮವಾಗಿ ಈ ಸಮಾವೇಶ ಸೃಷ್ಟಿಯಾಗಿದೆ. ಯಾರ ಸಲಹೆ, ಪ್ರಚೋದನೆ, ಒತ್ತಡಕ್ಕೆ ಮಣಿದು ಈ ಸಮಾವೇಶ ಮಾಡುತ್ತಿಲ್ಲ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಇಂದು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ “ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ” ವಿಷಯದ ಮಠಾಧೀಶರ ಮಹಾ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಠಾಧೀಶರು ಇದೇ ಮೊದಲ ಬಾರಿಗೆ ಬೆಂಬಲಿಸಿಲ್ಲ. ಈ …

ನಳಿನ್ ಕಟೀಲ್ ಆಡಿಯೋ ವೈರಲ್ ಆದ ಕಾರಣ ಈ ಸಮಾವೇಶ | ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ಹೊಕ್ಕಂತೆ ಎಂದು ಸಿಎಂ ವಿರೋಧಿಗಳನ್ನು ಹಾವಿಗೆ ಹೋಲಿಸಿ ಟೀಕಿಸಿದ ದಿಂಗಾಲೇಶ್ವರ ಶ್ರೀ Read More »

ಕರಾವಳಿಯ ಮಹಿಳೆಯರ ಬಾಳೆಕಾಯಿ ಹುಡಿ ಪ್ರಯೋಗ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ಕರಾವಳಿಯ ಮಹಿಳೆಯರು ಬಾಳೆಕಾಯಿ ಹಿಟ್ಟನ್ನು ತಯಾರಿಸಿ ಅದರಿಂದ ಖಾದ್ಯಗಳನ್ನು ತಯಾರಿಸುತ್ತಿರುವ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜುಲೈ ತಿಂಗಳ ಮನ್ ಕಿ ಬಾತ್ ನಲ್ಲಿ ಗುರುತಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೊರೋನಾ ಕಾಲದಲ್ಲಿ ಮಹಿಳೆಯರು ಮಾಡಿರುವ ಈ ಹೊಸ ಅನ್ವೇಷಣೆ ವಿಶಿಷ್ಟವಾದದ್ದಾಗಿದೆ. ಬಾಳೆಹಿಟ್ಟಿನಿಂದ ದೋಸೆ, ಗುಲಾಬ್ ಜಾಮೂನ್ ಮುಂತಾದವನ್ನು ಅವರು ಮಾಡುತ್ತಿದ್ದಾರೆ. ಇವನ್ನೆಲ್ಲ ಅವರು ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಂಡಿದ್ದಾರೆ. ಹೆಚ್ಚು ಹೆಚ್ಚು ಜನರು ಈ ಬಾಳೆ ಹಿಟ್ಟಿನ ಬಗ್ಗೆ ತಿಳಿಯುತ್ತ ಬಂದಂತೆಲ್ಲ ಇದಕ್ಕೆ ಬೇಡಿಕೆಯೂ ಹೆಚ್ಚಾಗಿ …

ಕರಾವಳಿಯ ಮಹಿಳೆಯರ ಬಾಳೆಕಾಯಿ ಹುಡಿ ಪ್ರಯೋಗ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ Read More »

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್‌ಗೆ ಚಿನ್ನದ ಗರಿ

ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಜೇತರಾಗಿ, ಬಂಗಾರದ ಪದಕ ಪಡೆಯುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಬುಡಾಫೆಸ್ಟ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಈ ಸಾಧನೆ ಮೆರೆದಿದ್ದಾರೆ. ಪ್ರಿಯಾ ಮಲಿಕ್ ಅವರ ಈ ಸಾಧನೆಗೆ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ. ನಿನ್ನೆಯಷ್ಟೇ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮೀರಾಬಾಯ್ ಚಾನು ಅವರು ವೈಯ್ಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ದೇಶದ …

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್‌ಗೆ ಚಿನ್ನದ ಗರಿ Read More »

ಸುಬ್ರಹ್ಮಣ್ಯ: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರಕ್ಕೆ ನ.ಸೀತಾರಾಮ ಅವರಿಂದ ಚಾಲನೆ

ಕಡಬ : ಮಾನವನ ಜೀವನವು ಸಾರ್ಥಕ್ಯವನ್ನು ಸಾಧಿಸಲು ಗುರಿ ಪ್ರಧಾನವಾಗಿರುತ್ತದೆ. ಯುವ ಜನಾಂಗವು ದೇಶದ ಸಂಪತ್ತಾಗಿದ್ದು ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ನಿರಂತರ ಪ್ರೋತ್ಸಾಹ ಅಗತ್ಯ. ಜೀವನದಲ್ಲಿ ಹಣ ಸಂಪತ್ತು ಮಾತ್ರ ಗೌರವ ನೀಡುವುದಲ್ಲ. ಬದಲಾಗಿ ಭಾರತೀಯವಾದ ಭವ್ಯವಾದ ಸನಾತನ ಸಂಸ್ಕೃತಿಯ ಅನುಷ್ಠಾನ ಯುವ ಜನಾಂಗದ ಅಭ್ಯುದಯಕ್ಕೆ ಸಂಪತ್ತಾಗಿದೆ. ಮಹಾಪುರುಷರನ್ನು ಅವರ ಗುಣ ನಡತೆ, ಪರಿಶ್ರಮ ಮತ್ತು ಸಾಧನೆಯಿಂದ ಅವರನ್ನು ಗೌರವಿಸುತ್ತೇವೆ. ಆದುದರಿಂದ ಜೀವನದಲ್ಲಿ ಅದ್ವಿತೀಯತೆಯನ್ನು ಸಾಧಿಸಲು ಪರಿಶ್ರಮ ಅತ್ಯಗತ್ಯ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಹಾ …

ಸುಬ್ರಹ್ಮಣ್ಯ: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರಕ್ಕೆ ನ.ಸೀತಾರಾಮ ಅವರಿಂದ ಚಾಲನೆ Read More »

ಕರ್ನಾಟಕ ನಾಯಕತ್ವ ಬದಲಾವಣೆ | ಮುಖ್ಯಮಂತ್ರಿ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗುತ್ತಾರ ?

ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಹಲವರ ಹೆಸರುಗಳು ಮುನ್ನಲೆಗೆ ಬಂದಿದೆ.ಆದರೆ ಯಾರು ಅಂತಿಮ ಎಂಬ ಗುಟ್ಟು ಯಾರಿಗೂ ಬಿಟ್ಟು ಕೊಟ್ಟಿಲ್ಲ ಬಿಜೆಪಿ ವರಿಷ್ಟರು. ಇದೀಗ ಹಲವು ಹೆಸರುಗಳ ನಡುವೆ ಈಗ ದತ್ತಾತ್ರೆಯ ಹೊಸಬಾಳೆ ಅವರ ಹೆಸರು ಕೇಳಿ ಬರುತ್ತಿದೆ. ಯಾಕೆಂದರೆ ಅಚ್ಚರಿಯ ಆಯ್ಕೆಯನ್ನು ಬಿಜೆಪಿ ವರಿಷ್ಟರು ಬೇರೆ ಬೇರೆ ರಾಜ್ಯದಲ್ಲಿ ಮಾಡಿದ್ದಾರೆ.ಅದೇ ರೀತಿ ಕರ್ನಾಟಕದಲ್ಲೂ ಇದೇ ಪ್ಲಾನ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಮುಖ್ಯಮಂತ್ರಿ ಹುದ್ದೆಗೆ ಕರ್ನಾಟಕದ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆಯವರ ಹೆಸರು ಹೊಸದಾಗಿ …

ಕರ್ನಾಟಕ ನಾಯಕತ್ವ ಬದಲಾವಣೆ | ಮುಖ್ಯಮಂತ್ರಿ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗುತ್ತಾರ ? Read More »

error: Content is protected !!
Scroll to Top