ಕರ್ನಾಟಕ ನಾಯಕತ್ವ ಬದಲಾವಣೆ | ಮುಖ್ಯಮಂತ್ರಿ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗುತ್ತಾರ ?

ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಹಲವರ ಹೆಸರುಗಳು ಮುನ್ನಲೆಗೆ ಬಂದಿದೆ.ಆದರೆ ಯಾರು ಅಂತಿಮ ಎಂಬ ಗುಟ್ಟು ಯಾರಿಗೂ ಬಿಟ್ಟು ಕೊಟ್ಟಿಲ್ಲ ಬಿಜೆಪಿ ವರಿಷ್ಟರು.

ಇದೀಗ ಹಲವು ಹೆಸರುಗಳ ನಡುವೆ ಈಗ ದತ್ತಾತ್ರೆಯ ಹೊಸಬಾಳೆ ಅವರ ಹೆಸರು ಕೇಳಿ ಬರುತ್ತಿದೆ. ಯಾಕೆಂದರೆ ಅಚ್ಚರಿಯ ಆಯ್ಕೆಯನ್ನು ಬಿಜೆಪಿ ವರಿಷ್ಟರು ಬೇರೆ ಬೇರೆ ರಾಜ್ಯದಲ್ಲಿ ಮಾಡಿದ್ದಾರೆ.
ಅದೇ ರೀತಿ ಕರ್ನಾಟಕದಲ್ಲೂ ಇದೇ ಪ್ಲಾನ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಮುಖ್ಯಮಂತ್ರಿ ಹುದ್ದೆಗೆ ಕರ್ನಾಟಕದ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆಯವರ ಹೆಸರು ಹೊಸದಾಗಿ ಪ್ರಸ್ತಾಪವಾಗಿದೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ.

Ad Widget
Ad Widget

Ad Widget

Ad Widget

RSSನ ಸರಕಾರ್ಯವಾಹರಾಗಿರುವ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಅತೀ ಉನ್ನತ ಜವಾಬ್ದಾರಿಯನ್ನು ಹೊಂದಿದ್ದಾರೆ.

ದತ್ತಾತ್ರೇಯ ಹೊಸಬಾಳೆಯವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆಯವರು. ಕಾಲೇಜು ಶಿಕ್ಷಣದ ನಂತರ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

RSSನಲ್ಲಿ ಸರಸಂಘಚಾಲಕ್ ಹಾಗೂ ಸರಕಾರ್ಯವಾಹ ಇವೆರಡೂ ಅತ್ಯುನ್ನತ ಹುದ್ದೆ ಹಾಗೂ ಜವಾಬ್ದಾರಿಯುತವಾಗಿವೆ. ಡಾ. ಮೋಹನ್ ಭಾಗವತ್ RSSನ ಸರ ಸಂಘ ಚಾಲಕರಾಗಿದ್ದು, ಭೈಯಾಜಿ ಜೋಶಿ 2009ರಿಂದ ಸರಕಾರ್ಯವಾಹರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಎಬಿಪಿಎಸ್ ನಲ್ಲಿ ನಡೆದ RSS ಆಂತರಿಕ ಚುನಾವಣೆಯಲ್ಲಿ ಕರ್ನಾಟಕದ ದತ್ತಾತ್ರೇಯ ಹೊಸಬಾಳೆಯವರಿಗೆ ಭೈಯಾಜಿ ಜೋಶಿಯವರ ಸ್ಥಾನ, ಸರಕಾರ್ಯವಾಹ ಜವಾಬ್ದಾರಿ ಲಭಿಸಿತ್ತು.

ಈ ಹಿಂದೆ ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಆ ಬಳಿಕ ಕರ್ನಾಟಕದಿಂದ ಈ ಹುದ್ದೆಗೆ ನೇಮಕವಾದವರೆಂದರೆ ಇದೇ ದತ್ತಾತ್ರೇಯ ಹೊಸಬಾಳೆಯವರು.

ದತ್ತಾತ್ರೇಯ ಹೊಸಬಾಳೆಯವರು ಸಹ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೂ ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಜವಾಬ್ದಾರಿ ಹೊಂದಿದ್ದರು.

ಆದರೆ ಯಾರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎಂಬುದು ವರಿಷ್ಟರಿಗೆ ಮಾತ್ರ ತಿಳಿದಿದ್ದು,ಯಡಿಯೂರಪ್ಪ ರಾಜಿನಾಮೆ ನೀಡುವ ಸಂಧರ್ಭದಲ್ಲಿ ಹೊಸ ಮುಖ್ಯಮಂತ್ರಿಯ ಹೆಸರನ್ನು ಖುದ್ದು ಅವರಿಂದಲೇ ಘೋಷಿಸಬೇಕೆಂಬುದು ವರಿಷ್ಟರ ಇರಾದೆ ಎನ್ನಲಾಗಿದೆ.

ಈಗಾಗಲೇ ಸಂಘದಲ್ಲಿ ಸೇವೆ ಸಲ್ಲಿಸಿದವರಿಗೆ ಅತ್ಯುನ್ನತ ಸ್ಥಾನಗಳನ್ನು ನೀಡಲಾಗಿದೆ.ಈ ನಿಟ್ಟಿನಲ್ಲಿ ಹೊಸಬಾಳೆ ಅವರಿಗೂ ಅವಕಾಶ ದೊರಕಬಹುದು.ಅವರು ಈಗಾಗಲೇ ಆರ್‌ಎಸ್‌ಎಸ್‌ನ ಅತ್ಯುನ್ನತ ಹುದ್ದೆಯಲ್ಲಿದ್ದಾರೆ.

ಸಂತೋಷ್ ಬಿ.ಎಲ್ ಅವರು ಕೂಡ ಸಂಘದ ಮೂಲಕ ಬಿಜೆಪಿಯಲ್ಲಿ ಉನ್ನತ ಹುದ್ದೆ ಪಡೆದುಕೊಂಡವರು‌.

1 thought on “ಕರ್ನಾಟಕ ನಾಯಕತ್ವ ಬದಲಾವಣೆ | ಮುಖ್ಯಮಂತ್ರಿ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗುತ್ತಾರ ?”

  1. ನಿಮ್ಮ ಯೋಚನಾ ಲಹರಿ………… ವ್ಹಾವ್
    ಅವರ ಈಗಿನ ಜವಾಬ್ದಾರಿ ತಿಳಿದಿಲ್ಲವೆ?

Leave a Reply

error: Content is protected !!
Scroll to Top
%d bloggers like this: