ಸುರಕ್ಷಾ ಸಮೃದ್ಧಿ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಲಾಭಗಳ ಬಗ್ಗೆ ತಿಳಿಯಿರಿ

ಸರಕಾರ ಹೆಣ್ಣು ಮಕ್ಕಳಿಗಾಗಿಯೇ ನಾನಾ ವಿಧದ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ ಒಂದು. ಹೆಣ್ಣುಮಕ್ಕಳಿಗಾಗಿಯೇ ಜಾರಿಗೆ ತಂದ ಯೋಜನೆಯಿದು.

ಹಾಗೆಯೇ ಸರಕಾರ ಸಾರ್ವಜನಿಕ ಭವಿಷ್ಯ ನಿಧಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಎರಡು ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಭವಿಷ್ಯ ನಿಧಿ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಕೇವಲ ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ತೆರೆಯಬಹುದು. ಆದರೆ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದು.

Ad Widget


Ad Widget


Ad Widget

Ad Widget


Ad Widget

ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಎರಡೂ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳು. ಒಂದು ನಿರ್ದಿಷ್ಟ ಅವಧಿಯ ನಂತರ ನಿಮ್ಮ ಉಳಿತಾಯ ಮೊತ್ತವನ್ನು , ಲಾಭ ಸಹಿತ ಮತ್ತು ತೆರಿಗೆ ರಹಿತವಾಗಿ ಹಿಂದಿರುಗಿಸುವ ಖಾತರಿ ಅವು ನೀಡುತ್ತವೆ. ಎರಡೂ ಯೋಜನೆಗಳಲ್ಲಿ ಅದರದ್ದೇ ಆದ ಅನುಕೂಲ ಮತ್ತು ಅನಾನುಕೂಲತೆಗಳು ಇವೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಈ ಎರಡರಲ್ಲಿ ಯಾವ ಯೋಜನೆಗಳು ನಿಮಗೆ ಅನುಕೂಲಕರ ಎಂದು ಸಾಬೀತಾಗುತ್ತದೆ ಎಂಬುದನ್ನು ಇಂದು ತಿಳಿದುಕೊಳ್ಳಿ.

ಪ್ರಸ್ತುತ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಅತ್ಯಂತ ಹೆಚ್ಚು ಬಡ್ಡಿದರ ಶೇಕಡಾ 7.6 ರಷ್ಟು ಇದೆ, ಭವಿಷ್ಯ ನಿಧಿ ಯೋಜನೆಗೆ ಶೇಕಡಾ 7.1 ರಷ್ಟು ಇದೆ. ಎರಡೂ ಯೊಜನೆಗಳ ಬಡ್ಡಿದರಗಳನ್ನು ಆದಾಯದ ದೃಷ್ಟಿಯಿಂದ ಹೋಲಿಸುವುದಾದರೆ, ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ತ್ರೈಮಾಸಿಕ ಆಧಾರದ ಮೇಲೆ ಸರಕಾರ ಪರಿಷ್ಕರಿಸುತ್ತದೆ ಎಂಬುದನ್ನು ಗಮನಿಸಬೇಕು. ಈಗಿರುವ ಬಡ್ಡಿದರ ಮುಂದಿನ ತ್ರೈಮಾಸಿಕದಲ್ಲಿ ಇರುವುದಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ಬಂದಾಗಿನಿಂದ, ಅದಕ್ಕೆ ಭವಿಷ್ಯ ನಿಧಿಗಿಂತಲೂ ಹೆಚ್ಚು ಬಡ್ಡಿದರವನ್ನು ನೀಡಲಾಗುತ್ತಿದೆ. ಬೇರೆ ಸಣ್ಣ ಯೋಜನೆಗಳ ಬಡ್ಡಿದರ ಕಡಿಮೆ ಆದರೂ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಕಡಿಮೆ ಆಗುವುದಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು 21 ವರ್ಷ ಮುಗಿದ ನಂತರ ಕಡ್ಡಾಯವಾಗಿ ಮುಚ್ಚಬೇಕು. ಆದರೆ ಸಾರ್ವಜನಿಕ ಭವಿಷ್ಯ ನಿಧಿ ಖಾತೆ ಹಾಗಲ್ಲ, ನಿಮಗೆ ಇಷ್ಟ ಬಂದಷ್ಟು ಸಲ, ಪ್ರತೀ ಬಾರಿ 5 ವರ್ಷಕ್ಕೆ ವಿಸ್ತರಿಸಬಹುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿ ಮುಗಿಯುವವರೆಗೂ ಭವಿಷ್ಯ ನಿಧಿ ಖಾತೆ ಹೊಂದಿರಬಹುದು!

ಎರಡು ಯೋಜನೆಗಳ ಮಧ್ಯೆ ಆಯ್ಕೆಯ ಸಂದರ್ಭ ಬಂದಾಗ, 21 ವರ್ಷಗಳ ನಂತರವೂ ಹೆಣ್ಣು ಮಗುವಿಗಾಗಿ ಹಣ ಉಳಿಸಬೇಕು ಎಂಬ ಆಸೆ ಇದ್ದರೆ, ಭವಿಷ್ಯ ನಿಧಿ ಖಾತೆ ಉತ್ತಮ ಆಯ್ಕೆ. ನೀವು ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹೆಚ್ಚು ಹಣ ಮತ್ತು ಒಂದಿಷ್ಟು ಹಣವನ್ನು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಕೂಡಿಡಲೂಬಹುದು ಅಥವಾ ನಿಮ್ಮ ಮಗಳು ದೊಡ್ಡವಳಾಗಿ ದುಡಿಯಲು ಆರಂಭಿಸಿದಾಗ ಅವಳೇ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬಹುದು.

ನೀವು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ವರ್ಷಕ್ಕೆ ಹೂಡಿಕೆ ಮಾಡಬೇಕಾದ ಕನಿಷ್ಟ ಮೊತ್ತ 500 ರೂ. ನಾವಿಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸುಕನ್ಯಾ ಸಮೃದ್ಧಿ ಯೋಜನೆ ಮುಗಿದ ನಂತರ ಬಂದ ಮೊತ್ತವನ್ನು ಬೇರೆ ಯಾವುದೇ ತೆರಿಗೆ ಮುಕ್ತ ಯೋಜನೆಯಲ್ಲಿ ಮರು ಹೂಡಿಕೆ ಮಾಡಲು ನಿಮಗೆ ತೊಂದರೆ ಆಗಬಹುದು.

ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯಕ್ಕಾಗಿ ನೀವು ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಟ ಮೊತ್ತವು ವರ್ಷಕ್ಕೆ 1.5 ಲಕ್ಷ ರೂ. ಆದರೂ ನಿಮ್ಮ ಮಗಳ ಮದುವೆ ಅಥವಾ ಉನ್ನತ ಶಿಕ್ಷಣದಂತಹ ಇತರ ಖರ್ಚುಗಳಿಗಾಗಿ ನಿಮಗೆ ಸಂಗ್ರಹವಾದ ಮೊತ್ತ ಅಗತ್ಯವಿದ್ದರೆ ಸುಕನ್ಯ ಸಮೃದ್ಧಿ ಯೋಜನೆ ನಿಮಗೆ ಬಹಳ ಉಪಯುಕ್ತ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: