ಫ್ಯಾಕ್ಟರಿ ಕೋಣೆಯ ಒಳಗೆ LPG ಸಿಲಿಂಡರ್ ಸ್ಫೋಟ | 7 ಮಂದಿ ಬಲಿ

ಫ್ಯಾಕ್ಟರಿಯ ಕೋಣೆಯಲ್ಲಿ ಎಲ್​ಪಿಜಿ ಸಿಲಿಂಡರ್​​ ಸ್ಫೋಟವಾಗಿ ಏಳು ಮಂದಿ ಮೃತಪಟ್ಟ ಘಟನೆ
ಗುಜರಾತ್​​ನ ಅಹ್ಮದಾಬಾದ್​​ನಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಸಂಭವಿಸಿದ ಈ ಘಟನೆ ಈಗ ಬೆಳಕಿಗೆ ಬಂದಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಸ್ಲಾಲಿ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಎಸ್​.ಎಸ್​.ಗಮೇಟಿ ಶುಕ್ರವಾರ ತಿಳಿಸಿದ್ದಾರೆ.

ಈ ಫ್ಯಾಕ್ಟರಿಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಕುಟುಂಬದ ಸದಸ್ಯರೊಂದಿಗೆ ಒಂದು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಆ ಕೋಣೆಯಲ್ಲಿದ್ದ ಎಲ್​ಪಿಜಿ ಗ್ಯಾಸ್​​ನಿಂದ ಲೀಕೇಜ್​ ಆಗಲು ಶುರುವಾಗಿತ್ತು. ವಾಸನೆ ಬಂದ ಕೂಡಲೇ ನೆರೆಮನೆಯವರು ಈ ಕೋಣೆಯ ಬಾಗಿಲು ತಟ್ಟಿ, ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಆದರೂ ಕಾಲ ಮಿಂಚಿ ಹೋಗಿತ್ತು. ಕೂಡಲೇ ಭಾರಿ ಪ್ರಮಾಣದ ಸ್ಪೋಟವಾಗಿದೆ.

Ad Widget


Ad Widget


Ad Widget

Ad Widget


Ad Widget

ಒಟ್ಟು 10 ಜನರು ಆ ಕೋಣೆಯಲ್ಲಿದ್ದರು ಎಂದು ತಿಳಿದುಬಂದಿದೆ. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಇನ್ನು ಉಳಿದ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿಯೇ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: